ದೀಪಾವಳಿ ನಂತರ ಸೂರ್ಯನ ಸಂಚಾರ. ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ, ಯಾವೆಲ್ಲಾ ರಾಶಿಗಳು ಗೊತ್ತಾ? ಇಲ್ಲಿದೆ ನೋಡಿ!!

ದೀಪಾವಳಿ ಹಬ್ಬ (Diwali Festival) ವು ಪ್ರತಿಯೊಬ್ಬರಿಗೂ ಬಹಳ ವಿಶೇಷವಾಗಿದ್ದು, ದೀಪದಂತೆ ಬದುಕು ಕೂಡ ಪ್ರಜ್ವಲಿಸಿ ಎನ್ನುವ ಅರ್ಥವನ್ನು ನೀಡುತ್ತದೆ ಆದರೆ ಈ ಬಾರಿ ರಾಶಿ ಚಕ್ರದಲ್ಲಿನ ಬದಲಾವಣೆಗಳು ಈ ಮೂರು ರಾಶಿಯವರಿಗೆ ಅದೃಷ್ಟದಾಯಕವಾಗಲಿದೆ. ದೀಪಾವಳಿ ನಂತರದಲ್ಲಿ ಅಂದರೆ ನವೆಂಬರ್ 17 (November 17) ರಂದು ಸೂರ್ಯನು ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದ್ದಾನೆ.

ಸೂರ್ಯ ದೇವನ ಸಂಚಾರವು ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರಲಿದ್ದು ಅದರಲ್ಲಿಯೂ ಈ ಮೂರು ರಾಶಿಯವರಿಗಂತೂ ಅದೃಷ್ಟ (Luck) ವು ತುಂಬಿ ತುಳುಕಲಿದೆ. ಹಾಗಾದ್ರೆ ಆ ಮೂರು ಅದೃಷ್ಟ ರಾಶಿಗಳ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡಬಹುದು.

ಸಿಂಹ ರಾಶಿ: ವೃಶ್ಚಿಕ ರಾಶಿಯಲ್ಲಿ ಸೂರ್ಯನ ಸಂಚಾರದಿಂದ ಈ ರಾಶಿಯ ಜನರು ಲಾಭವನ್ನು ಪಡೆಯಲಿದ್ದಾರೆ. ನಾಲ್ಕನೇ ಮನೆಯಲ್ಲಿ ಸೂರ್ಯ ದೇವ ಸಂಚಾರದಿಂದ ಆಸ್ತಿ, ವಾಹನಗಳನ್ನು ಖರೀದಿಸಲಿದ್ದಾರೆ. ವೃತ್ತಿಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿದ್ದು ಅಂದುಕೊಂಡಂತಹ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲಿದೆ. ಉದ್ಯೋಗ ಹುಡುಕುತ್ತಿರುವವರಿಗೆ ಹೊಸ ಉದ್ಯೋಗವನ್ನು ಪಡೆಯುವ ಸಾಧ್ಯತೆಯಿದೆ. ವ್ಯಾಪಾರ ವ್ಯವಹಾರಗಳಲ್ಲಿ ಕೈ ಹಾಕಿದರೆ ಈ ರಾಶಿಯವರು ಉನ್ನತ್ತ ಮಟ್ಟದಲ್ಲಿ ಪ್ರಯೋಜನವನ್ನು ಪಡೆಯಲಿದ್ದಾರೆ.

ಮಕರ ರಾಶಿ: ಮಕರ ರಾಶಿಯ ಎಂಟನೇ ಮನೆಯ ಅಧಿಪತಿಯೇ ಈ ಸೂರ್ಯನಾಗಿದ್ದು, ಸೂರ್ಯನ ಸಂಚಾರವು ಈ ರಾಶಿಯವರಿಗೆ ಲಾಭದಾಯಕವಾಗಲಿದೆ. ಆದಾಯದ ಮೂಲಗಳು ಹೆಚ್ಚಾಗಲಿವೆ. ಹಣ ಹಾಗೂ ಸಂಪತ್ತು ಈ ರಾಶಿಯವರನ್ನು ಹುಡುಕಿ ಬರುತ್ತದೆ. ಉಳಿತಾಯ ಮಾಡಲು ಉತ್ತಮವಾದ ಸಮಯವಾಗಿದೆ. ಹೂಡಿಕೆಯಂತಹ ಯೋಜನೆಗಳಿಗೆ ಕೈ ಹಾಕಿದರೆ ಲಾಭದಾಯಕವಾಗಿರಲಿದೆ. ಆರೋಗ್ಯವು ಉತ್ತಮವಾಗಿದ್ದು, ಮನೆಯಲ್ಲಿ ಸುಖ ಶಾಂತಿ ಹಾಗೂ ನೆಮ್ಮದಿಯ ವಾತಾವರಣವಿರಲಿದೆ.

ವೃಶ್ಚಿಕ ರಾಶಿ : ಸೂರ್ಯನು ಈ ರಾಶಿಯಲ್ಲಿಯೇ ಸಾಗಲಿರುವ ಕಾರಣ ವೃಶ್ಚಿಕ ರಾಶಿಯವರ ಜೀವನದಲ್ಲಿ ಬದಲಾವಣೆಗಳಾಗಲಿವೆ. ಈ ಸಮಯದಲ್ಲಿ ಧೈರ್ಯ ಮತ್ತು ಶೌರ್ಯ ಹೆಚ್ಚಾಗಿ ಸಂತೋಷದಾಯಕ ಜೀವನವು ಈ ರಾಶಿಯವರದ್ದಾಗಿರಲಿದೆ. ಆರ್ಥಿಕ ಲಾಭ ಗಳಿಸುವುದರ ಜೊತೆಗೆ ಆದಾಯದ ಮೂಲಗಳು ಅಧಿಕವಾಗಲಿದೆ. ವ್ಯಾಪಾರ ಹಾಗೂ ವ್ಯವಹಾರಗಳಲ್ಲಿ ಲಾಭದಾಯಕವಾಗಿರಲಿದ್ದು ಹೊಸ ವ್ಯವಹಾರವನ್ನು ಪ್ರಾರಂಭಿಸುವವರಿಗೆ ಇದೊಂದು ಸೂಕ್ತವಾದ ಸಮಯವಾಗಿದ್ದು ಅದೃಷ್ಟವು ಈ ರಾಶಿಯವರ ಜೊತೆಗೆ ಇರುತ್ತದೆ.

Leave a Reply

Your email address will not be published. Required fields are marked *