ಸ್ಯಾಮ್‌ಸಂಗ್‌ ಕಂಪೆನಿಯೂ ಮಾರುಕಟ್ಟೆಗೆ ತರಲಿದೆ ಸ್ಯಾಮ್‌ಸಂಗ್‌ ಸ್ಮಾರ್ಟ್‌ ರಿಂಗ್‌, ಇಲ್ಲಿದೆ ನೋಡಿ ಮಾಹಿತಿ

ಮಾರುಕಟ್ಟೆಯಲ್ಲಿ ಸ್ಮಾರ್ಟ್ ಡಿವೈಸ್ (Smart Device) ಗಳು ಗ್ರಾಹಕರನ್ನು ಆಕರ್ಷಸುತ್ತಿದೆ. ಅದರಲ್ಲಿಯೂ ಸ್ಮಾರ್ಟ್‌ಡಿವೈಸ್‌ಗಳನ್ನು ಸ್ಯಾಮ್‌ಸಂಗ್ ಪರಿಚಯಿಸುವಲ್ಲಿ ಯಶಸ್ವಿಯಾಗಿವೆ. ಆದರೆ ಇದೀಗ ಸ್ಯಾಮ್‌ಸಂಗ್‌ ಸ್ಮಾರ್ಟ್‌ ರಿಂಗ್‌ (Smart Ring) ಪರಿಚಯಿಸಲು ಮುಂದಾಗಿದೆ ಎಂದೇ ಹೇಳಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಅನ್‌ಪ್ಯಾಕ್ಡ್‌ ಈವೆಂಟ್ 2024 ನಲ್ಲಿ ಮೊದಲ ಸ್ಮಾರ್ಟ್ ರಿಂಗ್ ಅನ್ನು ಲಾಂಚ್‌ ಮಾಡುವ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ. ಈಗಾಗಲೇ ಹಲವು ಸ್ಮಾರ್ಟ್‌ವಾಚ್‌ (Smart Watch) ಗಳು ಆರೋಗ್ಯ ಸಂಬಂಧಿ ಮಾಹಿತಿಯನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಆದರೆ ಇದೀಗ ಈ ಸ್ಯಾಮ್‌ಸಂಗ್‌ನ ಸ್ಮಾರ್ಟ್‌ರಿಂಗ್‌ (Samsung SmartRing) ಎನ್ನುವ ವಿಶೇಷ ಫೀಚರ್ಸ್ ಗಳನ್ನು ಒಳಗೊಂಡದ್ದನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಉಳಿದ ಆರೋಗ್ಯ-ಟ್ರ್ಯಾಕಿಂಗ್ ಡಿವೈಸ್‌ಗಳಿಗೆ ಹೋಲಿಕೆ ಮಾಡಿದರೆ ಈ ರಿಂಗ್‌ನಿಂದ ಎಲ್ಲಾ ನಿಖರ ಮಾಹಿತಿಯನ್ನು ಪಡೆಯಬಹುದಾಗಿದೆ. ಅದಲ್ಲದೇ ಗ್ಯಾಲಕ್ಸಿ ಒನ್, ಗ್ಯಾಲಕ್ಸಿ ಪಲ್ಸ್ ಮತ್ತು ಗ್ಯಾಲಕ್ಸಿ ರಿದಮ್ ಸೇರಿದಂತೆ ಅನೇಕ ಹೆಸರನ್ನು ಈ ಹೊಸ ಸ್ಮಾರ್ಟ್ ರಿಂಗ್‌ಗಾಗಿ ಸ್ಯಾಮ್‌ಸಂಗ್ ಹೆಸರುಗಳ ಸರಣಿಯನ್ನು ಟ್ರೇಡ್‌ಮಾರ್ಕ್ ಮಾಡಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಕಂಪೆನಿಯೂ ಯಾವುದೇ ಅಧಿಕೃತ ಮಾಹಿತಿಯನ್ನು ಇಲ್ಲಿಯವರೆಗೂ ಬಿಟ್ಟುಕೊಟ್ಟಿಲ್ಲ.

ಮೂಲಗಳ ಪ್ರಕಾರವಾಗಿ ಸ್ಯಾಮ್‌ಸಂಗ್ ತನ್ನ ಮೊದಲ ಸ್ಮಾರ್ಟ್ ರಿಂಗ್ ಅನ್ನು 2024 ರ ಗ್ಯಾಲಕ್ಸಿ ಅನ್‌ಪ್ಯಾಕ್ಡ್‌ ಈವೆಂಟ್‌ನಲ್ಲಿ ಈ ಬಗ್ಗೆ ಘೋಷಿಸಬಹುದು ಎನ್ನಲಾಗಿದೆ.ಸ್ಯಾಮ್‌ಸಂಗ್ ಸ್ಮಾರ್ಟ್ ರಿಂಗ್ (Sumsang Smart Ring) ನ ವಿಶೇಷತೆಯ ಬಗ್ಗೆ ಹೇಳುವುದಾದರೆ ಈ ಡಿವೈಸ್ ಬಳಕೆದಾರರ ಆರೋಗ್ಯವನ್ನು ಸದಾ ಟ್ರ್ಯಾಕ್ ಮಾಡುವುದು.

ಅದು ಮಾತ್ರವಲ್ಲದೇ ಸ್ಮಾರ್ಟ್ ರಿಂಗ್ ಅಗತ್ಯವಿದ್ದಾಗ ವೈದ್ಯಕೀಯ ಸಲಹೆಯನ್ನು ನೀಡಲು ಬಯೋಮೆಟ್ರಿಕ್ ಮತ್ತು ಶಾರೀರಿಕ ಡೇಟಾ, ಪ್ರಮುಖ ಚಿಹ್ನೆಗಳು ಮತ್ತು ವೈಯಕ್ತಿಕ ಆರೋಗ್ಯ ದಾಖಲೆಗಳನ್ನು ಮೇಲ್ವಿಚಾರಣೆಯನ್ನು ಮಾಡುತ್ತವೆ ಎನ್ನಲಾಗಿದೆ. ಈ ಎಲ್ಲಾ ವಿಶೇಷ ಫೀಚರ್ಸ್ ಗಳಿಗಾಗಿ ರಿಂಗ್ ಒಳಗೆ ಬಹು ಸೆನ್ಸರ್‌ ಆಯ್ಕೆಯನ್ನು ನೀಡಲಾಗಿದೆದೆ ಎನ್ನಬಹುದು. ಈ ಫೀಚರ್ಸ್ ಗಳು ಬಳಕೆದಾರರಿಗೆ ಬಹಳ ಪ್ರಯೋಜನಕಾರಿಯಾಗಬಹುದು.

Leave a Reply

Your email address will not be published. Required fields are marked *