ಮಗನ ಮದುವೆಯಲ್ಲಿ ಸುಮಲತಾ ಅಂಬರೀಶ್ ಅವರು ಧರಿಸಿದ್ದ ಕಾಸಿನ ಸರದ ಬೆಲೆ ಎಷ್ಟು ಗೊತ್ತಾ? ದೇವ್ರೇ ಇಷ್ಟೊಂದಾ!!!.

ರೆಬೆಲ್ ಸ್ಟಾರ್ ಅಂಬರೀಶ್  ಅವರಮನೆಯಲ್ಲಿ ಕಳೆದ ಕೆಲವು ದಿನಗಳಿಂದ ಮದುವೆ ಸಂಭ್ರಮ ಮನೆ ಮಾಡಿತ್ತು. ರೆಬೆಲ್ ಸ್ಟಾರ್ ಅಂಬರೀಶ್ (Rebel Star Ambarish) ಹಾಗೂ ಸುಮಲತಾ (Sumalatha) ರವರ ಮುದ್ದಿನ ಮಗ ಅಭಿಷೇಕ್ ಅಂಬರೀಶ್. ಇದೀಗ ಸುಮಲತಾ ಅಂಬರೀಶ್ ಅವರು ಮಗನ ಮದುವೆಯನ್ನು ಅಚ್ಚುಕಟ್ಟಾಗಿ ಪತಿಯ ಆಸೆಯಂತೆ ಮಾಡಿ ಮುಗಿಸಿದ್ದಾರೆ. ಮಗನ ಮದುವೆಯನ್ನು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಉಸ್ತುವಾರಿಯಲ್ಲಿ ಅದ್ದೂರಿಯಾಗಿ ನಡೆದಿದೆ. ರೆಬಲ್ ಸ್ಟಾರ್ ಅಂಬರೀಶ್ (Rebel Star Ambarish) ಪುತ್ರ ಅಭಿಷೇಕ್ ಅಂಬರೀಶ್ (Abhishek Ambarish) ಜೂನ್ 5 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತಾವು ಪ್ರೀತಿಸಿದ ಹುಡುಗಿ ಅವಿವಾ (Aviva) ಜೊತೆಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ.

ಬೆಂಗಳೂರಿನ ಜಯಮಹಲ್‌ (Jayamahal) ನ ಮಾಣಿಕ್ಯ ಚಾಮರ ವಜ್ರ ಕಲ್ಯಾಣ ಮಂಟಪ (Chamaravajra Kalyana Mantapa) ದಲ್ಲಿ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಹಾಗೂ ಕುಟುಂಬಸ್ಥರು ಬೆಳಗ್ಗೆಯಿಂದಲೇ ಹಲವು ಶಾಸ್ತ್ರಗಳಲ್ಲಿ ಭಾಗಿಯಾಗಿದ್ದರು. ಒಕ್ಕಲಿಗ ಸಂಪ್ರದಾಯದಂತೆ ನಡೆದ ಮದುವೆಗೆ ಅನೇಕ ಗಣ್ಯರು ಸಾಕ್ಷಿಯಾಗಿದ್ದಾರೆ.

ನಟನ ಮದುವೆಗೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ( Venkayya Naydu), ತಮಿಳು ನಟ ರಜನಿಕಾಂತ್ ( Rajanikanth), ತೆಲುಗು ನಟ ಚಿರಂಜೀವಿ (Chiranjeevi), ಅನಿಲ್ ಕುಂಬ್ಳೆ (Anil Kumble), ನಟ ಮೋಹನ್ ಬಾಬು (Mohan Babu), ಸುಹಾಸಿನಿ (Suhasini), ಮೇಘನಾ ರಾಜ್ (Meghana Raj), ಕಿಚ್ಚ ಸುದೀಪ್ (Kiccha Sudeep), ರಾಕಿಂಗ್ ಸ್ಟಾರ್ ಯಶ್ (Rocking Star Yash) ದಂಪತಿಗಳು ಸೇರಿದಂತೆ ಟಾಲಿವುಡ್, ಸ್ಯಾಂಡಲ್ ವುಡ್, ರಾಜಕೀಯ ಗಣ್ಯರು ಆಗಮಿಸಿ ವಧುವರರಿಗೆ ಶುಭ ಹಾರೈಸಿದ್ದಾರೆ.

ನಿನ್ನೆ ಜೂನ್ 7ರಂದು (ಇಂದು) ಪ್ಯಾಲೇಜ್ ಗ್ರೌಂಡ್‌ನಲ್ಲಿ ಆರತಕ್ಷತೆ ಕಾರ್ಯಕ್ರಮವು ನಡೆದಿದ್ದು, ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು, ಆತ್ಮೀಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇತ್ತ ಮದುವೆ ಸಂದರ್ಭದಲ್ಲಿ ಸುಮಲತಾ ಅಂಬರೀಶ್ ಅವರು ಧರಿಸಿದ್ದ ಕಾಸಿನ ಸರವೂ ಎಲ್ಲರ ಗಮನ ಸೆಳೆದಿತ್ತು. ಈ ಕಾಸಿನ ಸರದ ಬೆಲೆಯೂ ಆರರಿಂದ ಏಳು ಲಕ್ಷ ರೂಪಾಯಿ ಎನ್ನಲಾಗಿದೆ. ಒಟ್ಟಿನಲ್ಲಿ ಸುಮಲತಾ ಅಂಬರೀಶ್ ಅವರು ಧರಿಸಿದ್ದ ಕಾಸಿನ ಸರದ ಬೆಲೆ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.

 

 

Leave a Reply

Your email address will not be published. Required fields are marked *