ಶುಕ್ರನ ಸಂಚಾರದಿಂದ ಈ ನಾಲ್ಕು ರಾಶಿಯವರಿಗೆ ಕ-ಷ್ಟಗಳ ಸುರಿಮಳೆ, ಆ ರಾಶಿಗಳಾವುವು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ!!

ಗ್ರಹಗಳ ಸಂಚಾರವು ಸಹಜವಾಗಿ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಯವರಿಗೆ ಅದೃಷ್ಟ (Luck) ವು ಒದಗಿ ಬಂದರೂ ಇನ್ನು ಕೆಲವು ರಾಶಿಯವರು ಜೀವನದಲ್ಲಿ ಸಾಕಷ್ಟು ಕಷ್ಟ (Problems) ಗಳನ್ನು ಅನುಭವಿಸುತ್ತಾರೆ. ಹೌದು, ಶುಕ್ರ ಗ್ರಹವು 2023ರ ನವೆಂಬರ್ 29 ರಂದು ಮುಂಜಾನೆ 1:02 ಕ್ಕೆ ತುಲಾ ರಾಶಿಯನ್ನು ಪ್ರವೇಶಿಸಿದ್ದಾನೆ.

ಶುಕ್ರನ ಈ ಸಂಚಾರದಿಂದಾಗಿ ಹನ್ನೆರಡು ರಾಶಿಗಳ ಮೇಲೆ ಪಾಸಿಟಿವ್ (Positive) ಹಾಗೂ ನೆಗೆಟಿವ್ (Negative) ಪರಿಣಾಮಗಳಾಗುತ್ತವೆ. ಆದರೆ ಹನ್ನೆರಡು ರಾಶಿಗಳ ಪೈಕಿ ಈ ನಾಲ್ಕು ರಾಶಿಗಳು ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಹಾಗಾದ್ರೆ ಅಶುಭ ಫಲಗಳನ್ನು ಹೊಂದಿರುವ ಆ ನಾಲ್ಕು ರಾಶಿಗಳಾ ವುವು ಎನ್ನುವುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

ಮಿಥುನ ರಾಶಿ: ಈ ರಾಶಿಯವರು ಯಾರನ್ನೂ ಕೂಡ ಕಣ್ಣು ಮುಚ್ಚಿ ನಂಬುವ ಕೆಲಸವನ್ನು ಮಾಡಬೇಡಿ ಇದರಿಂದ ಮೋಸ ಹೋಗುವ ಸಾಧ್ಯತೆಯೇ ಅಧಿಕವಾಗಿದೆ. ಕೆಲಸ ಮಾಡುವ ಸ್ಥಳಗಳಲ್ಲಿ ಕೆಲಸದ ಒತ್ತಡವು ಹೆಚ್ಚಾಗಲಿದ್ದು ಎಲ್ಲವನ್ನು ನಿಭಾಯಿಸಿಕೊಂಡು ಹೋಗುವುದು ತುಂಬಾನೇ ಕಷ್ಟವಾಗಬಹುದು. ಈ ವೇಳೆಯಲ್ಲಿ ಸರಿಯಾಗಿ ಸಮಯವನ್ನು ತೂಗಿಸಿಕೊಂಡು ಕೆಲಸವನ್ನು ಮಾಡಿ. ಅಪರಿಚಿತ ವ್ಯಕ್ತಿಗಳ ಸಹವಾಸದಿಂದ ದೂರವಿದ್ದರೆ ಸಮಸ್ಯೆಗಳಿಂದ ದೂರವಿರಬಹುದು.

ಕರ್ಕಾಟಕ ರಾಶಿ: ಈ ರಾಶಿಯವರಿಗೆ ಶುಕ್ರ ಸಂಚಾರದಿಂದ ಅಶುಭ ಫಲಗಳೇ ಹೆಚ್ಚು. ಹೌದು, ಮನೆಯಲ್ಲಿ ಅಶಾಂತಿಯ ವಾತಾವರಣವು ಇರಲಿದ್ದು ಭಿನ್ನಾಭಿಪ್ರಾಯಗಳು ತಲೆದೂರಲಿದೆ. ಹೀಗಾಗಿ ಮನೆಯ ಸದಸ್ಯರ ಜೊತೆಗೆ ವಾದ ವಿವಾದಗಳಿಂದ ದೂರವಿರುವುದು ಉತ್ತಮ. ಹಣಕಾಸಿನ ವಿಚಾರಕ್ಕೆ ಸಂಬಂಧ ಪಟ್ಟಂತೆ ಹಣಕಾಸಿನ ತೊಂದರೆಗಳನ್ನು ಎದುರಿಸುವ ಸಂದರ್ಭವು ಅಧಿಕ. ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಬಹುದು ಎಲ್ಲವನ್ನು ಸರಿಯಾಗಿ ನಿಭಾಯಿಸಿಕೊಂಡು ಹೋದರೆ ಉತ್ತಮ.

ತುಲಾ ರಾಶಿ: ಈ ರಾಶಿಯವರಿಗೆ ಯವರು ಶುಕ್ರನ ಈ ಚಲನೆಯ ಉತ್ತಮ ಫಲಗಳನ್ನು ತಂದುಕೊಡುವುದಿಲ್ಲ. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು, ಮಾತು ಇತಿಮಿತಿಯಲ್ಲಿದ್ದರೆ ಒಳ್ಳೆಯದು. ಅದಾಳಲ್ದೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಉತ್ತಮ. ಆಹಾರ ಪದಾರ್ಥಗಳ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ. ಚರ್ಚೆಗಳಿಗೆ ಅವಕಾಶವಿದ್ದರೆ ಆ ಚರ್ಚೆಗಳು ಮಾನಸಿಕ ನೆಮ್ಮದಿಯನ್ನು ಹಾಳು ಮಾಡಬಹುದು. ಹೀಗಾಗಿ ಚರ್ಚೆಗಳಿಂದ ದೂರವಿದ್ದರೆ ಮಾನಸಿಕ ನೆಮ್ಮದಿಯನ್ನು ಕಾಪಾಡಿಕೊಳ್ಳಬಹುದು.

ವೃಶ್ಚಿಕ ರಾಶಿ : ಈ ರಾಶಿಯವರಿಗೆ ಶುಕ್ರನ ಸಂಚಾರವು ಜೀವನದಲ್ಲಿ ಸಾಕಷ್ಟು ಹೊಡೆತಗಳನ್ನು ನೀಡುತ್ತದೆ. ಹೀಗಾಗಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯೂ ಅಧಿಕವಾಗಿದೆ. ಪ್ರವಾಸಕ್ಕೆ ಹೋಗಲ ಪ್ಲಾನ್ ಮಾಡಿಕೊಂಡಿದ್ದರೆ ಈಗ ಸೂಕ್ತ ಸಮಯವಲ್ಲ, ಇದರಿಂದ ಆರ್ಥಿಕ ನಷ್ಟವನ್ನು ಅನುಭವಿಸುವ ಸಾಧ್ಯತೆಯೂ ಅಧಿಕವಾಗಿದೆ. ಹೊಸ ವ್ಯಾಪಾರ ವ್ಯವಹಾರ ಹಾಗೂ ಕೆಲಸಗಳನ್ನು ಪ್ರಾರಂಭಿಸುವಾಗ ಎಚ್ಚರಿಕೆಯಿಂದ ಹೆಜ್ಜೆ ಇಟ್ಟರೆ ಉತ್ತಮ.

Leave a Reply

Your email address will not be published. Required fields are marked *