ಭಾರತೀಯರು ಸಂಬಂಧಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಹೀಗಾಗಿ ಹುಟ್ಟಿನಿಂದಲೇ ಹಾಗೂ ಹುಟ್ಟಿನ ನಂತರದಲ್ಲಿ ಬರುವ ಸಂಬಂಧವನ್ನು ಕಾಪಾಡಿಕೊಳ್ಳಲು ಶ್ರಮವಹಿಸುತ್ತಾರೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಸತಿ ಪತಿಯರ ನಡುವಿನ ಸಂಬಂಧಗಳು ಹೆಚ್ಚು ದಿನ ಉಳಿಯುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ, ಭಿನ್ನಾಭಿಪ್ರಾಯ, ಮನಸ್ತಾಪ ಹಾಗೂ ಜಗಳಗಳು. ಇಲ್ಲೊಬ್ಬಳು ಖತರ್ನಾಕ್ ಪತ್ನಿಯೊಬ್ಬಳು ಪ್ರಿಯಕರ ಜೊತೆಗೆ ಸೇರಿ ಪ್ಲಾನ್ ಮಾಡಿ ಪತಿಯ ಕಥೆಯನ್ನು ಮುಗಿಸಿದ್ದಾಳೆ.
ಆದರೆ ಇದೀಗ ಆರೋಪಿ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಸುಜಿತ್ ಮಂಡಲ್ ಅವರ ಮನೆ ವಿಜಯನಗರ ಕಟೋವಿಸ್ ಗ್ರಾಮದಲ್ಲಿದೆ. ಈತ ಆ ಪ್ರದೇಶದ ಸ್ವೀಟ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಹೆಂಡತಿ ಮತ್ತು ಇಬ್ಬರು ಮಕ್ಕಳಿಂದ ತುಂಬಿದ ಕುಟುಂಬವಾಗಿದ್ದು, ಸುಖವಾಗಿ ಸಂಸಾರ ಮಾಡುತ್ತಿದ್ದರು.
ಸುಜಿತ್‌ನ ತಂದೆ ಕೂಡ ತನ್ನ ಒಬ್ಬನೇ ಮಗನ ಜೊತೆ ಪಕ್ಕದಲ್ಲೇ ವಾಸವಾಗಿದ್ದರು. ಕುಟುಂಬಸ್ಥರ ಪ್ರಕಾರ, ಬುಧವಾರ ರಾತ್ರಿ ಊಟ ಮಾಡಿ ಕುಡಿದ ನಂತರ ಸುಜಿತ್ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸ್ವಂತ ಕೊಠಡಿಯಲ್ಲಿ ಮಲಗಿದ್ದರು. ಗುರುವಾರ ಮಧ್ಯಾಹ್ನವಾದರೂ ಏಳಲಿಲ್ಲ. ಹೀಗಾಗಿ ಮನೆಯ ಬಾಗಿಲು ತಳ್ಳಿದಾಗ ಸುಜೀತ್ ಪ್ರಾ’ಣ ಪಕ್ಷಿ ಹಾರಿರುವುದು ಗೊತ್ತಾಗಿದೆ.
ಈ ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೋಲಿಸರು ಸ್ಥಳಕ್ಕೆ ಆಗಮಿಸಿದ್ದಾರೆ. ಕಟ್ವಾ ಠಾಣೆ ಪೊಲೀಸರು ಮೃ-ತದೇಹವನ್ನು ಹೊರತೆಗೆದು ಮ-ರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆದರೆ ಮೃ-ತನ ತಂದೆಯೂ ಶಂಪಾ ಮೊಂಡಲ್ ವಿರುದ್ಧ ತನ್ನ ಮಗನನ್ನು ಕೊ-ಲೆ ಮಾಡಿದ್ದಾನೆ ಎಂದು ದೂರು ದಾಖಲಿಸಿದ್ದಾರೆ.
ಈ ಜ್ಯೋತಿಶ್ ಚಂದ್ರ ಮಂಡಲ್ ಪ್ರಕಾರ, ಗ್ರಾಮದ ನಯನ್ ಪಾಲ್ ಎಂಬ ಯುವಕ ಮನೆಗೆ ಬಂದು ಮೊಮ್ಮಗ ಮತ್ತು ಮೊಮ್ಮಗಳಿಗೆ ಪಾಠ ಮಾಡುತ್ತಿದ್ದ. ಸುಜಿತ್ ಪತ್ನಿಗೆ ವಿವಾಹೇತರ ಸಂಬಂಧವಿತ್ತು. ರಾತ್ರೋರಾತ್ರಿ ಪತಿ ಹಾಗೂ ಇಬ್ಬರು ಮಕ್ಕಳಿಗೂ ನಿದ್ದೆ ಮಾ-ತ್ರೆ ನೀಡಿ ಗೃಹಿಣಿ ಪ್ರಿಯಕರನ ಜೊತೆಗೆ ಚೆ-ಲ್ಲಾಟವಾಡುತ್ತಿದ್ದಳು.
ಈ ವಿಚಾರವಾಗಿ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ಈ ಘಟನೆಯ ಬಳಿಕ ತನಿಖೆಯನ್ನು ನಡೆಸಿದ್ದು, ತನಿಖಾಧಿಕಾರಿಗಳ ಪ್ರಕಾರ, ಬುಧವಾರ ರಾತ್ರಿ ಸುಜಿತ್‌ನ ಜೀವ ತೆಗೆಯಲು ಶಂಪಾ ಐದು ನಿದ್ದೆ ಮಾತ್ರೆಗಳನ್ನು ಚಾಪ್-ಮುರಿಯೊಂದಿಗೆ ನೀಡಿದ್ದಾರೆ. ಆದರೆ ಗುರುವಾರ ಬೆಳಗ್ಗೆ ಮಹಿಳೆಗೆ ತನ್ನ ಪತಿ ಬದುಕಿರುವುದು ಅರಿವಾಗಿದೆ. ತದನಂತರ ತನ್ನ ಪ್ರಿಯಕರ ನಯನ್ ಗೆ ಸುದ್ದಿ ಕಳುಹಿಸಿದ್ದಾಳೆ.
ಇಬ್ಬರೂ ಸೇರಿ ಸುಜಿತ್ ಮೊಂಡಲ್ ನನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಹ-ತ್ಯೆ ಮಾಡಿದ್ದಾರೆ. ಆರೋಪಿ ಶಂಪಾ ಮೊಂಡಲ್ ಮತ್ತು ಆಕೆಯ ಪ್ರಿಯಕರ ನಯನ್ ಪಾಲ್ ಅವರನ್ನು ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ. ಪ್ರಿಯಕರನ ಜೊತೆಗೆ ಸೇರಿ ಪತಿಯ ಜೀವ ತೆಗೆದ ಮಹಿಳೆಯೂ ಕಂಬಿ ಹಿಂದೆ ಇದ್ದಾಳೆ.