ಪ್ರತಿದಿನ ಕಬ್ಬಿನ ಹಾಲು ಕುಡಿಯುವುದರಿಂದ ಎಷ್ಟೊಂದು ಉಪಯೋಗ ಇದೆ ಗೊತ್ತಾ.. ಈ 9 ಆರೋಗ್ಯ ಸಮಸ್ಯೆಗಳಿಗೆ ಕಬ್ಬಿನ ಹಾಲಿನಲ್ಲಿದೆ ಔಷಧ!!!

Sugarcane juice benefits : ಕಬ್ಬಿನ ಹಾಲಿನ ಸೇವನೆಯು ದೇಹದ ಮೇಲೆ ಬೀರುವ ಪರಿಣಾಮಗಳೆನೇನು ಗೊತ್ತಾ?? ಕಬ್ಬಿನ ಹಾಲನ್ನು ಕುಡಿಯುವ ಮುನ್ನ ನಿಮಗೆ ತಿಳಿದಿರದ ಈ ಸತ್ಯವನ್ನು ಓದಿ..ಕಬ್ಬಿನ ಹಾಲು ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ..ಕಬ್ಬನ್ನು ಹಿಂಡಿದಷ್ಟೂ ಸಿಹಿಯೇ ಸಿಗುವುದು ಅಲ್ಲವೇ??..

ಕಬ್ಬಿನ ಹಾಲಿನಲ್ಲಿ ಪೊಟ್ಯಾಶಿಯಂ, ಮ್ಯಾಗ್ನಿಷಿಯಂ, ಕ್ಯಾಲ್ಸಿಯಂ, ಕಬ್ಬಿಣಾಂಶ, ಜಿಂಕ್, ಥೈಮಿನ್, ರೈಬೋಫ್ಲೇವಿನ್, ಅಮೀನೋ ಆಮ್ಲ, ಡೈಟರಿ ಫೈಬರ್, ಪ್ಲೇವನೊಯ್ಡ್ ಮತ್ತು ಪಾಲಿಫಿನಾಲಿಕ್ ನಂತಹ ಆಂಟಿ ಆಕ್ಸಿಡೆಂಟ್ಸ್ ಸೇರಿದಂತೆ ದೇಹಕ್ಕೆ ಅಗತ್ಯವಿರುವ ಅನೇಕ ಅಂಶಗಳು ಅಡಗಿರುತ್ತವೆ.

ಕಬ್ಬಿನ ಹಾಲಿಗೆ ವೈದ್ಯಕೀಯ ರಂಗವು ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತದೆ. ನಾಲಿಗೆಗೆ ಸಿಹಿಯ ಸವಿಯನ್ನು ನೀಡುತ್ತಾ ದೇಹಕ್ಕೆ ಉಪಕಾರಿಯಾಗುವ ಕಬ್ಬನ್ನು ಬೆಳೆಯುವಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ. ಕಬ್ಬಿನ ಹಾಲನ್ನು ನೇರವಾಗಿ ಕುಡಿಯುವುದಷ್ಟೇ ಅಲ್ಲದೆ ಅದಕ್ಕೆ ನಿಂಬೆ ರಸ ಮತ್ತು ಶುಂಠಿಯನ್ನು ಸೇರಿಸಿಯೂ ಕುಡಿಯುತ್ತಾರೆ. ಮಣ್ಣಿ, ಸಿಹಿ ದೋಸೆ, ತೊಡೆದೇವು, ಕಾಕಂಬಿ, ಬೆಲ್ಲ ಸೇರಿದಂತೆ ಅನೇಕ ತಿನಿಸುಗಳಿವೆ.

ಅತಿಯಾಗಿ ಆಯಾಸವಾದಾಗ ಕಬ್ಬಿನ ಹಾಲನ್ನು ಕುಡಿಯುವುದರಿಂದ ತ್ವರಿತವಾಗಿ ದೇಹಕ್ಕೆ ಶಕ್ತಿಯು ಸಿಗುತ್ತದೆ. ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸಿ ಗ್ಲುಕೋಸ್ ಬಿಡುಗಡೆಗೆ ಸಹಾಯವಾಗುತ್ತದೆ. ಬಿಸಿಲಿನಲ್ಲಿ ಕೆಲಸ ಮಾಡಿ ಅಥವಾ ನಡೆದಾಡಿ ದಣಿವಾದಾಗ ಕಬ್ಬಿನ ಹಾಲು ಸಿಗದಿದ್ದಲ್ಲಿ ಬೆಲ್ಲದ ಜೊತೆ ನೀರನ್ನು ಸೇವಿಸಬಹುದು. ಕಬ್ಬಿನ ಹಾಲಿನಿಂದ ನೈಸರ್ಗಿಕವಾಗಿ ಮೂತ್ರವು ಹೆಚ್ಚುತ್ತದೆ. ಇದರಿಂದ ಮೂತ್ರನಾಳಗಳ ಸೋಂಕು ಮತ್ತು ಮೂತ್ರಪಿಂಡಗಳಲ್ಲಿ ಕಲ್ಲಿನ ಬೆಳವಣಿಗೆಯಿಂದ ದೂರವಿರಬಹುದು.

ಕಬ್ಬಿನ ಹಾಲಿನ ಸೇವನೆಯಿಂದ ದಂತವು ಬಲಯುತವಾಗುವುದಲ್ಲದೆ, ಹಲ್ಲುಗಳು ಹುಳುಕಾಗುವುದನ್ನು ಕೂಡ ತಡೆಗಟ್ಟಬಹುದು. ಬಾಯಿಯ ಮತ್ತು ಉಸಿರಿನ ದುರ್ವಾಸನೆಯನ್ನು ಕೂಡ ಕಡಿಮೆಗೊಳಿಸಬಲ್ಲದು. ಕಬ್ಬಿನ ಹಾಲಿನಲ್ಲಿರುವ ಅಂಶಗಳು ಯಕೃತ್ತಿಗೆ ಶಕ್ತಿ ದೊರಕಿಸಲು ಸಹಾಯ ಮಾಡುತ್ತದೆ.

ಕಾಮಲೆ ರೋಗವನ್ನು ಗುಣಪಡಿಸುವಲ್ಲಿ ಸಹಕಾರಿಯಾಗಿದೆ. ಕಬ್ಬಿನ ಹಾಲು ಜೀರ್ಣಕಾರಿಯಾಗಿದ್ದು, ಅದರಲ್ಲಿರುವ ನಾರಿನ ಅಂಶವು ಬೇಡದ ವಸ್ತುವು ದೇಹದಿಂದ ಹೊರ ಹೋಗಲು ಸಹಾಯ ಮಾಡಿ, ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ.

ಶೀತ ಮತ್ತು ಜ್ವರದಿಂದ ಬಳಲುತ್ತಿರುವವರು ಕಬ್ಬಿನ ಹಾಲನ್ನು ಸೇವಿಸುವುದರಿಂದ ದೇಹದಲ್ಲಿ ಚೇತರಿಕೆಯನ್ನು ಕಾಣಬಹುದು. ಕಬ್ಬಿನ ಹಾಲು ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಮೊಡವೆ ಬಾರದಂತೆ, ಚರ್ಮ ಸುಕ್ಕುಗಟ್ಟದಂತೆ ತಡೆಯಲು ಕಬ್ಬಿನ ಹಾಲು ಸಹಕಾರಿ. ಕಬ್ಬಿನ ಹಾಲಿನಲ್ಲಿರುವ ಗ್ಲೈಕೋಲಿಕ್ ಆಮ್ಲವು, ಚರ್ಮವು ಕಾಂತಿಯುತವಾಗಿ ಹೊಳೆಯಲು ಸಹಕಾರಿಯಾಗಿದೆ. ಕಬ್ಬಿನ ಹಾಲಿನಲ್ಲಿರುವ ಲೋಹಗಳು ಮೂಳೆಗಳ ಬಲವರ್ಧನೆಗೆ ಪೂರಕವಾಗಿವೆ

Leave a Reply

Your email address will not be published. Required fields are marked *