ಒಂದೇ ಫೋಟೋದಲ್ಲಿ ಕಾಣಿಸಿಕೊಂಡ ಕಿಚ್ಚ ಸುದೀಪ್ ಮಗಳು ಸಾನ್ವಿ ಹಾಗೂ ಅಪ್ಪು ಮಗಳು ಧೃತಿ, ಇಲ್ಲಿದೆ ನೋಡಿ ವಿಶೇಷ ಫೋಟೋ

ಸೆಲೆಬ್ರಿಟಿ (Celebrity) ಗಳು ಈ ಹೆಸರು ಕೇಳಿದರೆ ಕೂಡಲೇ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಈ ಸೆಲೆಬ್ರಿಟಿಗಳ ಬದುಕಿನ ಕುರಿತು ಸ್ಟಾರ್ ನಟ ನಟಿಯರ ಬದುಕು ಸಾರ್ವಜನಿಕ ಬದುಕಾಗಿರುತ್ತದೆ. ಹೌದು ಅವರು ಏನು ಮಾಡಿದರೂ ಕೂಡ ಸುದ್ದಿಯಾಗುತ್ತಾರೆ. ಅದರಲ್ಲಿಯು ಸೆಲೆಬ್ರಿಟಿಗಳ ವೈಯುಕ್ತಿಕ ಬದುಕಿನಲ್ಲಿ ಅಭಿಮಾನಿಗಳಿಗೆ ಕುತೂಹಲ ಹೆಚ್ಚು.

ತಮ್ಮ ಬದುಕಿನ ಕುರಿತು ಅಪ್ಡೇಟ್ ಕೊಡುವ ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ಕೂಡ ಚಿತ್ರರಂಗಕ್ಕೆ ಪರಿಚಯಿಸುವುದು ಇದೆ. ಕೆಲವು ಸೆಲೆಬ್ರಿಟಿ ಕಿಡ್ಸ್ ಗಳು ಸಿನಿಮಾ ರಂಗದಿಂದ ದೂರವಿದ್ದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಮೂಲಕ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುತ್ತಾರೆ. ಈ ವಿಚಾರದಲ್ಲಿ ನಟಿ ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ (Saanvi) ಕೂಡ ಹೊರತಾಗಿಲ್ಲ.

ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಕಿಚ್ಚ ಸುದೀಪ್ (Kiccha Sudeep) ಅವರ ಮಗಳು ಸಾನ್ವಿ, ಪುನೀತ್ ರಾಜ್ ಕುಮಾರ್ (Punith Raj Kumar) ಅವರ ಮಗಳು ಧೃತಿ (Dhrthi) ಜೊತೆಗೆ ತೆಗೆಸಿಕೊಂಡಿರುವ ಫೋಟೋವೊಂದು ವೈರಲ್ ಆಗಿವೆ. ಸ್ಟಾರ್ ನಟಿಯರ ಪುತ್ರಿಯರ ಫೋಟೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಎಂಟುನೂರಕ್ಕೂ ಅಧಿಕ ವ್ಯೂಸ್ ಕಂಡಿದೆ.

ಇತ್ತೀಚೆಗಷ್ಟೇ ಸಾನ್ವಿ ಸುದೀಪ್ ತಮ್ಮ ಈ ಒಂದು ಅಧಿಕೃತ ಪೇಜ್‌ನಲ್ಲಿ ತಮ್ಮ ವಿಶೇಷ ಆರ್ಟ್‌ ವರ್ಕ್‌ (Art Work) ನ ಫೋಟೋಗಳನ್ನ ಹಾಕಿದ್ದಾರೆ. ತಮ್ಮ ತಂದೆಯ ಸ್ಪೆಷಲ್ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅದರ ಜೊತೆಗೆ, ಪವರ್ ಸ್ಟಾರ್ ಪುನೀತ್ ಅವರ ಒಂದು ಸ್ಪೆಷಲ್ ಫೋಟೋವನ್ನ ಕೂಡ ಹಂಚಿಕೊಂಡಿದ್ದಾರೆ. ಅಜ್ಜಿ ಅಜ್ಜ ಹಾಗೂ ತಾಯಿಯ ಜೊತೆಗೆ ಇರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ನಟ ಕಿಚ್ಚ ಸುದೀಪ್‌ ಅವರ ಮಗಳು ಸಾನ್ವಿ ಕೂಡ ಪ್ರತಿಭಾವಂತೆ. ಅಪ್ಪನಂತೆ ಮಗಳು ಕೂಡ ಅದ್ಭುತವಾಗಿ ಹಾಡುತ್ತಾಳೆ. ಸಾನ್ವಿ ಸುದೀಪ್ ಹೈದರಾಬಾದ್‌ (Hydarbad) ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಹಾಡು ಮಾತ್ರವಲ್ಲದೇ, ಪೇಟಿಂಗ್ ನಲ್ಲಿಯೂ ಮುಂದಿದ್ದಾರೆ. ತನ್ನ ಪೇಟಿಂಗ್ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಂಡು ತನ್ನ ಪ್ರತಿಭೆಗಳಿಂದಲೇ ಎಲ್ಲರನ್ನು ಬೆರಗು ಮೂಡಿಸುತ್ತಾಳೆ.

ಇತ್ತೀಚೆಗಷ್ಟೇ ವಿಶ್ವ ಅಪ್ಪಂದಿರ ದಿನದ ಪ್ರಯುಕ್ತ ಅಪ್ಪನ ಜೊತೆಗೆ ಕ್ಲಿಕ್ಕಿಸಿಕೊಂಡ ವಿಶೇಷ ಫೋಟೊವೊಂದನ್ನು ಪೋಸ್ಟ್ ಮಾಡಿಕೊಂಡಿದ್ದಕೊಂಡಿದ್ದ ಸಾನ್ವಿ, “ಹ್ಯಾಪಿ ಫಾದರ್ಸ್ ಡೇ ಅಪ್ಪ. ನೀನು ನಿನ್ನ ಜೀವನದಲ್ಲಿ ಮಾಡಿದ ಸಾಧನೆಗಳಿಗೆ ನಾನು ಹೆಮ್ಮೆ ಪಡುತ್ತೇನೆ. ಯಾವುದೇ ಕಷ್ಟಗಳು, ತೊಂದರೆಗಳು ಬಂದರೂ ಕೂಡ ನೀನು ಅದನ್ನು ಸುಲಭವಾಗಿ ದಾಟುತ್ತೀಯ ಎನ್ನುವುದು ನನಗೆ ಗೊತ್ತಿದೆ. ಯಾಕೆಂದರೆ ನೀನು ಅಷ್ಟು ಶಕ್ತಿಶಾಲಿ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ನೀನು ನನಗೆ ಕಲಿಸಿದ್ದೆಲ್ಲದ್ದಕ್ಕೂ, ನನಗಾಗಿ ಮಾಡಿದ ತ್ಯಾಗಕ್ಕೂ ಧನ್ಯವಾದ ಹೇಳ ಸಾಧ್ಯವಿಲ್ಲ. ನೀನು ನೀನಾಗಿರುವುದಕ್ಕೆ ಧನ್ಯವಾದ.” ಎಂದು ಬರೆದುಕೊಂಡಿದ್ದರು. ಹೀಗೆ ಸದಾ ಸುದ್ದಿಯಲ್ಲಿರುವ ಸಾನ್ವಿ ಈಗಾಗಲೇ ವಿದ್ಯಾಭ್ಯಾಸ ಹಾಗೂ ತನ್ನ ಹವ್ಯಾಸದಲ್ಲಿ ಬ್ಯುಸಿಯಾಗಿದ್ದಾಳೆ.

Leave a Reply

Your email address will not be published. Required fields are marked *