ಈಗಿನ ಯುವಕ ಯುವತಿಯರು ಪ್ರೀತಿ ಪ್ರೇಮಕ್ಕೆ ಬಲಿಯಾಗಿ ತಮ್ಮ ಸುಂದರ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕಾಲೇಜು ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ ಪ್ರೀತಿ ಪ್ರೇಮ ಎಂದು ಓಡಾಡಿದರೆ ನಂತರ ಕೊನೆಗೆ ಅದು ಯಾವ ದಿಕ್ಕನ್ನು ಬೇಕಾದರೂ ಪಡೆದುಕೊಳ್ಳಬಹುದೆಂದು ಇದೀಗ ಸಾಬಿತಾಗಿದೆ ಹಾಸನ ಜಿಲ್ಲೆಯಲ್ಲಿ ನಡೆದ ಒಂದು ಪ್ರೀತಿ ಪ್ರೇಮದ ಕಥೆ ಇದೀಗ ಎಲ್ಲರನ್ನು ಬೆಚ್ಚಿ ಬೀಳಿಸಿದೆ.
ಇದು ಸುಚಿತ್ರ ಎಂಬ 20 ವರ್ಷ ದ ಹುಡುಗಿ ಮತ್ತು ತೇಜಸ್ ಎಂಬ 23 ವರ್ಷದ ಹುಡುಗನ ಕಥೆ.. ಸುಚಿತ್ರಾ ಎಂಬ ಹುಡುಗಿ ಹಾಸನ ಜಿಲ್ಲೆಯ ಮೊಸಳೆ ಹೊಸಹಳ್ಳಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿನಿ. ಹಾಗೆ ತೇಜಸ್ ಕೂಡ ಅದೇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿ ಪಾಸ್ ಆಗಿದ್ದ ವಿದ್ಯಾರ್ಥಿಯಾಗಿದ್ದ.
ಸುಚಿತ್ರ ಮತ್ತು ತೇಜಸ್ ಕೆಲವು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದರು.. ಅದಾದ ನಂತರ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡಿ ಇಬ್ಬರು ಬ್ರೇಕ್ ಅಪ್ ಮಾಡಿಕೊಂಡಿದ್ದರು. ನಂತರ ಮತ್ತೆ ಇಬ್ಬರು ಒಂದಾಗಲು ತೇಜಸ್ ಯೋಚಿಸಿದ. ಗುರುವಾರ 16 ನವಂಬರ್ 2023 ನಂದು ತೇಜಸ್ ಸುಚಿತ್ರಗಯ ಳನ್ನು ನಂದಿ ಬೆಟ್ಟಕ್ಕೆ ಬರುವಂತೆ ಕರೆದ.. ತನ್ನ ಹಳೆಯ ಪ್ರೇಮಿ ಕರೆದ ಎಂಬ ಮಾತಿಗೆ ಬೆಲೆ ಕೊಟ್ಟು ಸುಚಿತ್ರ ಹೋದಳು.
ತೇಜಸ್ ಕುಂತಿ ಬೆಟ್ಟದಲ್ಲಿ ಸುಚಿತ್ರ ಳನ್ನು ಮತ್ತೆ ಪ್ರೀತಿ ಮಾಡೋಕೆ ಒತ್ತಾಯ ಮಾಡಿದ.. ಆದರೆ ಸುಚಿತ್ರಾ ಳಿಗೆ ತೇಜಸ್ ನನ್ನು ಪ್ರೀತಿ ಮಾಡಲು ಮನಸ್ಸು ಇರಲಿಲ್ಲ ಮತ್ತೆ ತೇಜಸ್ ನನ್ನು ಪ್ರೀತಿ ಮಾಡೋಕೆ ಆಗಲ್ಲ ಎಂದು ಹೇಳಿದಳು. ಕೋಪಗೊಂಡ ತೇಜಸ್ ಕುಂತಿ ಬೆಟ್ಟದಲ್ಲಿಯೇ ತನ್ನ ಮಾಜಿ ಪ್ರೇಮಿ ಸುಚಿತ್ರ ಳನ್ನು ಕತ್ತು ಕೊ ಯ್ದು ಅವಳನ್ನು ಅಲ್ಲೇ ಕೊ ಲೆ ಮಾಡಿದ.
ಸುಚಿತ್ರಾ ಅವಳ ಅಪ್ಪ ಬೆಂಗಳೂರಿನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ತೇಜಸ್ ಗೆ ಕಠಿಣ ಶಿಕ್ಷೆ ಆಗಬೇಕು ಎಂದು ಸುಚಿತ್ರ ಕುಟುಂಬ ಪಟ್ಟು ಹಿಡಿದಿದ್ದಾರೆ .ಸುಚಿತ್ರಾ ಅವರ ತಂದೆ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ತಾಯಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಚಿತ್ರ ಹಿರಿಯ ಮಗಳು ಮತ್ತು ಇವಳಿಗೆ ಒಂದು ತಂಗಿ ಕೂಡ ಇದ್ದಾಳೆ. ಇಬ್ಬರು ಹೆಣ್ಣುಮಕ್ಕಳಿದ್ದರು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸುಚಿತ್ರಾ ಅವರ ಚಿಕ್ಕಪ್ಪ ಅಶ್ವತ್ಥ್ ದೂರದಿಂದ ದಾಖಲು ಮಾಡಿದ್ದಾರೆ.