ಹೌದು ಸ್ನೇಹಿತರೆ, ಇತ್ತೀಚಿಗಂತೂ ಆನ್ಲೈನ್ ಗೇಮಿಂಗ್ ಅನ್ನೋದು ತುಂಬಾ ಹೆಚ್ಚಾಗ್ತಾ ಇದೆ. ತುಂಬಾ ಜನಗಳು ಸಂಸಾರದ ಪರಿವೇ ಇಲ್ಲದೆ ಆನ್ಲೈನ್ ಗೇಮಿಂಗ್ ಅನ್ನ ಆಡುತ್ತಿದ್ದಾರೆ. ಕೋಟಿ ಕೋಟಿ ದುಡಿಯುವ ಕನಸನ್ನು ಹೊತ್ತು ತಮ್ಮ ಕೈಯನ್ನೇ ಬರಿಗೈ ಮಾಡಿಕೊಳ್ಳುತ್ತಿದ್ದಾರೆ. ಜನರನ್ನು ಕಾಯುವ ಇನ್ಸ್ಪೆಕ್ಟರ್ ಗಳೇ ಇಂತಹ ಕೆಲಸ ಮಾಡಿರುವುದು ಆಶ್ಚರ್ಯ. ಇಂತಹ ಫ್ರಾಡ್ಗಳನ್ನು ತಡೆಯುವ ಅಧಿಕಾರಿಗಳೇ ಈ ರೀತಿ ಕೆಲಸವನ್ನು ಮಾಡಿದ್ದಾರೆ ಬೇಲಿಯೇ ಎದ್ದು ಹೊಲ ಮೆಂದಂತಾಗಿದೆ. ಇಂತಹದ್ದೇ ಒಂದು ಘಟನೆ ಪುಣೆಯಲ್ಲಿ ನಡೆದಿದೆ. ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
ಆನ್ಲೈನ್ ಗೇಮ್ ನಲ್ಲಿ ಬರೋಬ್ಬರಿ ಒಂದುವರೆ ಕೋಟಿ ರೂಪಾಯಿ ಗಳಿಸಿದ ಇನ್ಸ್ಪೆಕ್ಟರ್ ಇದು ನಡೆದದ್ದು ಬೇರೆಲ್ಲೂ ಅಲ್ಲ ಪುಣೆಯ ಪಿಂಪ್ರಿ ಪೋಲಿಸ್ ಠಾಣೆಯಲ್ಲಿ. ಈ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಅದಕ್ಕೆ ಪ್ರತಿಕ್ರಿಯಿಸಿದ ಇವರು ಒಂದು ಸಂದರ್ಶನವನ್ನು ಕೂಡ ಕೊಟ್ಟಿದ್ದಾರೆ.
ಇವರು ಪುಣೆಯ ಪಿಂಪ್ರಿ ಠಾಣೆಯಲ್ಲಿರುವ ಪೊಲೀಸ್ ಅಧಿಕಾರಿ, ಇವರು ಯಾರ ಅನುಮತಿಯು ಇಲ್ಲದೆ ಗೇಮ್ ಅನ್ನು ಆಡಿದ್ದಾರೆ. ಹಾಗೆ ಪೊಲೀಸ್ ಡ್ರೆಸ್ ನಲ್ಲಿ ಸಂದರ್ಶನವನ್ನು ಕೂಡ ಕೊಟ್ಟಿದ್ದಾರೆ. ಆದ್ದರಿಂದ ಇವರನ್ನು ಕರ್ತವ್ಯ ಲೋಕ ಹಿನ್ನೆಲೆಯಲ್ಲಿ ಇವರನ್ನ ಸಸ್ಪೆಂಡ್ ಮಾಡಲಾಗಿದೆ. ಎಂದು ವರದಿಗಳು ತಿಳಿಸಿವೆ.
ತಮ್ಮ ಕರ್ತವ್ಯ ನಿಷ್ಠೆಯನ್ನ ಬಿಟ್ಟು ಅಧಿಕಾರಿಗಳೇ ಈ ರೀತಿಯ ಕರ್ತವ್ಯ ಲೋಕವನ್ನು ಮಾಡಿದರೆ ಸಾಮಾನ್ಯ ಜನರ ಗತಿ ಏನು ಎಂದು ಎಲ್ಲರಲ್ಲೂ ಮೂಡುವ ಪ್ರಶ್ನೆಯಾಗಿದೆ. ಜನರಿಗೆ ತಮ್ಮ ಕರ್ತವ್ಯದ ಬಗ್ಗೆ ತಮ್ಮ ತಪ್ಪಿನ ಬಗ್ಗೆ ಅರಿವನ್ನ ಮೂಡಿಸುವವರು ಈ ರೀತಿಯ ಕೆಲಸವನ್ನು ಮಾಡಬಹುದಾ? ಪೊಲೀಸ್ ಅಧಿಕಾರಿಗಳೇ ಈ ರೀತಿ ಮಾಡಿದರೆ ನಮ್ಮಂತ ಸಾಮಾನ್ಯ ಜನರ ಕಥೆ ಏನು? ಅಲ್ವಾ ಸ್ನೇಹಿತರೆ ನಿಮಗೆ ಏನು ಅನ್ನಿಸುತ್ತೆ ಅಂತ ಕಮೆಂಟ್ ಬಾಕ್ಸ್ ನಲ್ಲಿ ಕಮೆಂಟ್ ಮಾಡಿ ತಿಳಿಸಿ. ನಮ್ಮ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ.