ಅಂಗನವಾಡಿ ಕೇಂದ್ರದಲ್ಲಿ ಜೀ-ವ ಕಳೆದುಕೊಂಡ ಮಹಿಳಾ ಸಿಬ್ಬಂದಿ, ಪತ್ನಿಯನ್ನು ಹುಡುಕಿಕೊಂಡು ಬಂದ ಪತಿಗೆ ಶಾಕ್, ಇಲ್ಲಿದೆ ಅಸಲಿ ವಿಚಾರ

ಸಮಾಜದಲ್ಲಿ ಬುದ್ಧಿವಂತ ಪ್ರಾಣಿಯೆನಿಸಿಕೊಂಡಿರುವ ಮನುಷ್ಯನು ಅಭಿವೃದ್ಧಿಯತ್ತ ಸಾಗುತ್ತಿದ್ದಾನೆ. ಆದರೆ ಒಂದಷ್ಟು ಕೆ-ಟ್ಟ ಘಟನೆಗಳು ನಡೆಯುತ್ತಲೇ ಇರುತ್ತದೆ. ಮನುಷ್ಯ ಎಷ್ಟೇ ವಿದ್ಯಾವಂತನಾದರೂ ಕೂಡ ಕೆಲವೊಂದು ಸಲ ಕೆಲವರು ಮೃ-ಗಗಳಂತೆ ವರ್ತಿಸಿ ಬಿಡುತ್ತಾರೆ. ಹೌದು ಈ ಘಟನೆಗಳು ಸಂಭವಿಸಿದಾಗ ಮಹಿಳೆಯರಿಗೆ ರಕ್ಷಣೆಯಿಲ್ಲ ಎಂದು ಅನಿಸುತ್ತದೆ. ಆದರೆ ಇದೀಗ ಅಂಗನವಾಡಿ ಕೇಂದ್ರ (Anganavadi Centre) ದಲ್ಲೇ ಮಹಿಳಾ ಸಿಬ್ಬಂದಿಯೊಬ್ಬರು ಆ-ತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೌದು ಈ ಘಟನೆಯು ಒಡಿಶಾದ ಬಾಲಸೋರ್​ (Odissa Balasor) ಜಿಲ್ಲೆಯ ಖಾಂತಪದ ಪೊಲೀಸ್​ ಠಾಣಾ ವ್ಯಾಪ್ತಿ (Khantapada Police Station) ಯಲ್ಲಿ ಬರುವ ಮಹಾರಾಜಪುರ್​ ಏರಿಯಾದ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರದಂದು ಈ ಘಟನೆಯು ನಡೆದಿದ್ದು ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಜೀವ ಕಳೆದುಕೊಂಡ ವ್ಯಕ್ತಿಯನ್ನು ಪರಿಮಿತ ದಾಸ್​ (Parimita Das) ಎಂದು ಗುರುತಿಸಲಾಗಿದೆ.

ಈಗಾಗಲೇ ಬಲ್ಲ ಮೂಲಗಳ ಪ್ರಕಾರವಾಗಿ ಪರಿಮಿತ ದಾಸ್​ ಎಂದಿನಂತೆ ಶುಕ್ರವಾರ ಬೆಳಗ್ಗೆ ಅಂಗನವಾಡಿ ಕೇಂದ್ರಕ್ಕೆ ತೆರಳಿದ್ದಳು. ಸಂಜೆ ಎಲ್ಲರೂ ಕೂಡ ಎಂದಿನಂತೆ ಮನೆಗೆ ಹೋದರು. ಆದರೆ ಆಕೆ ಮಾತ್ರ ಮನೆಗೆ ಹಿಂತಿರುಗಿರಲಿಲ್ಲ. ಹೀಗಾಗಿ ಆಕೆಯ ಪತಿ ಬಿಸ್ಮಿತ್​ ರಂಜನ್​ ದಾಸ್​ (Bishmit Ranjan Das), ಅಂಗನವಾಡಿ ಕೇಂದ್ರಕ್ಕೆ ತೆರಳಿದ್ದು, ಅಲ್ಲಿ ನೋಡಿದಾಗ ಪತ್ನಿ ನೇ-ಣು ಬಿಗಿದ ಸ್ಥಿತಿಯಲ್ಲಿರುವುದು ಕಂಡಿದ್ದಾನೆ. ಆ ತಕ್ಷಣವೇ ಖಾಂತಪದ ಆಸ್ಪತ್ರೆ (Khantapada Hospital) ಗೆ ದಾಖಲಿಸಲಾಗಿದೆ. ಆದರೆ ಪರಿಮಿತ ದಾಸ್ ಮೃ- ತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ.

ಆದರೆ ಇದೀಗ ಪರಿಮಿತ ದಾಸ್ ರನ್ನು ಕಳೆದುಕೊಂಡಿರುವ ನೋವಿನಲ್ಲಿದ್ದಾರೆ ಆಕೆಯ ಹೆತ್ತವರು. ತಾಯಿ ಸರಸ್ವತಿ ದಾಸ್ (Saraswathi Das) ಅವರು ಮಗಳನ್ನು ನೋವಿನಲ್ಲಿದ್ದು, ಪರಿಮಿತ ದಾಸ್​ ಆ-ತ್ಮಹತ್ಯೆ ಮಾಡಿಕೊಳ್ಳಲು ಯಾವುದೇ ಕಾರಣವಿರಲಿಲ್ಲ. ನನ್ನ ಮಗಳು ಮಾ-ನಸಿಕವಾಗಿ ತುಂಬಾ ಶಕ್ತಿಯುತಳಾಗಿದ್ದಳು. ಆಕೆಯ ಪತಿ ಮ-ದ್ಯವ್ಯಸನಿ ಮತ್ತು ಆಕೆಯ ಅತ್ತೆ ದು-ಷ್ಟ ಮಹಿಳೆ ಹಾಗೂ ಅವರು ನನ್ನ ಮಗಳನ್ನು ಹಿಂ-ಸಿಸಿ ಕೊಂ-ದಿದ್ದಾರೆ ಎಂದಿದ್ದಾರೆ.

ಪರಿಮಿತ ದಾಸ್ ಅವರ ತಂದೆ ಬಿದ್ಯಧರ ದಾಸ್ (Bidyadhara Das) ಮಾತನಾಡಿದ್ದು, ನನ್ನ ಮಗಳು ಪ್ರೇಮ ವಿವಾಹವಾಗಿದ್ದಳು. ಆದರೆ, ನನ್ನ ಅಳಿಯ ಮ-ದ್ಯವ್ಯಸನಿಯಾಗಿದ್ದ ಮತ್ತು ಅವನ ಕುಟುಂಬವು ನನ್ನ ಮಗಳನ್ನು ಎಂದಿಗೂ ಇಷ್ಟಪಡಲಿಲ್ಲ. ಅವರೆಲ್ಲ ಸೇರಿ ನನ್ನ ಮಗಳ ದೇಹವನ್ನು ನೇ-ಣು ಹಾಕುವ ಮೊದಲು ಕೊಂ-ದಿದ್ದಾರೆ ಅಥವಾ ಅವರ ಹಿಂ-ಸೆಯ ಕಾರಣದಿಂದಾಗಿ ಅವಳೇ ನೇ-ಣು ಹಾಕಿಕೊಂಡಿದ್ದಾಳೆ. ಏನೇ ಆಗಿದ್ದರೂ ಅದಕ್ಕೆ ಅವರೇ ಕಾರಣ. ಅವರಿಗೆ ತಕ್ಕ ಶಿ-ಕ್ಷೆಯಾಗಬೇಕು ” ಎಂದಿದ್ದಾರೆ. ಮೃತಳ ತಂದೆ ತಾಯಿ ನೀಡಿರುವ ಮಾಹಿತಿ ಹಿನ್ನಲೆಯಲ್ಲಿ ಬಿಸ್ಮಿತ್ ಹಾಗೂ ಆತನ ತಾಯಿಯನ್ನು ವ-ಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *