ಲಕ್ಷ ಲಕ್ಷದಿಂದ ಕೋಟಿಯ ಗಡಿದಾಟಿದ ನಟಿ ಶ್ರೀನಿಧಿ ಶೆಟ್ಟಿ ಸಂಭಾವನೆ! ಒಂದು ಸಿನಿಮಾಗೆ ಅದೆಷ್ಟು ಕೋಟಿ ಸಂಭಾವನೆ ಗೊತ್ತಾ? ಅಬ್ಬಬ್ಬಾ ತಲೆ ತಿರುಗಿ ಬಿಡುತ್ತೆ ನೋಡಿ!!!

Srinidhi shetty remuneration : ಕೆಜಿಎಫ್ ಸಿನಿಮಾದ ಮೂಲಕ ಫೇಮಸ್ ಆದ ಬೆಡಗಿ ಶ್ರೀನಿಧಿ ಶೆಟ್ಟಿಯವರು ಸದ್ಯಕ್ಕೆ ಬಹುಬೇಡಿಕೆಯಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಶ್ರೀನಿಧಿ ಶೆಟ್ಟಿಯವರ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಇತ್ತೀಚೆಗಷ್ಟೇ ಶ್ರೀ ನಿಧಿ ಶೆಟ್ಟಿ ಹಾಟ್ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಸಮುದ್ರ ತೀರದಲ್ಲಿ ಕಾಣಿಸಿಕೊಂಡಿರುವ ನಟಿ ಶ್ರೀ ನಿಧಿ ಶೆಟ್ಟಿ ಜಾಕೆಟ್ ತೆಗೆಯುತ್ತ ಸಮುದ್ರದ ಕಡೆಗೆ ನಡೆದುಕೊಂಡು ಹೋಗಿದ್ದರು.

ಕೊನೆಗೆ ಜಾಕೆಟ್ ತೆಗೆದು ಬಿಕಿನಿಯಲ್ಲಿ ಪೋಸ್ ಕೊಟ್ಟಿದ್ದು, ನಟಿಯ ಹಾಟ್ ವಿಡಿಯೋವೊಂದು ವೈರಲ್ ಆಗಿತ್ತು. ನಟಿಯ ಈ ಹಾಟ್ ಅವತಾರ ಕಂಡು ಶಾಕ್ ಆಗಿದ್ದರು.ಕೆಜಿಎಫ್ ಸಿನಿಮಾದ ಬಳಿಕ ಬಹುಬೇಡಿಕೆಯನ್ನು ಸೃಷ್ಟಿಸಿಕೊಂಡಿರುವ ಶ್ರೀನಿಧಿ ಶೆಟ್ಟಿ ಬಗ್ಗೆ ಹೇಳುವುದಾದರೆ, 1992 ಅಕ್ಟೋಬರ್ 21ರಂದು ಮಂಗಳೂರಿನಲ್ಲಿ ಜನಿಸಿದ ಶ್ರೀನಿಧಿ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದು ಮಾಡೆಲ್ ಕೂಡ ಹೌದು.

ಅಪ್ಪಟ ಮಂಗಳೂರಿನವರಾದರೂ ಶಿಕ್ಷಣವನ್ನು ಮುಗಿಸಿದ್ದು ಬೆಂಗಳೂರಿನಲ್ಲಿ ಜೊತೆಗೆ ಬದುಕು ಕಟ್ಟಿಕೊಂಡದ್ದು ಸಿನಿಮಾರಂಗದಲ್ಲಿ. ಬೆಂಗಳೂರಿನ ಜೈನ ವಿದ್ಯಾಲಯದಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. 2016 ರಲ್ಲಿ ಜರುಗಿದ ಮಿಸ್ ದಿವಾ ಸ್ಪರ್ಧೆಯ ವಿಜೇತೆಯಾಗಿ ಹೊರ ಹೊಮ್ಮಿದ್ದರು. ಕೆಲಕಾಲ ಬೆಂಗಳೂರಿನ ಖ್ಯಾತ ಸಾಫ್ಟವೇರ್ ಕಂಪನಿ `ಆಕ್ಸೆಂಚರ್’ ನ ಉದ್ಯೋಗಿಯಾಗಿದ್ದರು.

ಈ ಸಮಯದಲ್ಲಿ ಹಲವಾರು ಡಿಸೈನರ್‌ಗಳ ಜೊತೆಗೆ ಮಾಡೆಲ್ ಆಗಿ ಕೆಲಸ ಮಾಡಿದರು.ಈ ವೇಳೆಯಲ್ಲಿ ಹಲವಾರು ಸೌಂದರ್ಯ ಸ್ಫರ್ಧೆಗಳಲ್ಲಿ ಭಾಗವಹಿಸಿದ ಇವರು ಮಿಸ್ ಕರ್ನಾಟಕ ಮತ್ತು ಮಿಸ್ ಬ್ಯೂಟಿಫುಲ್ ಸ್ಮೈಲ್ ಸ್ಪರ್ಧೆಯ ವಿಜೇತೆಯೂ ಕೂಡ. ದುಬೈ, ಪ್ರಾನ್ಸ್, ಜಪಾನ್, ಸಿಂಗಾಪುರ್, ಥೈಲಾಂಡ್, ಪೊಲ್ಯಾಂಡ್ ದೇಶಗಳ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದರು. ಇನ್ನು, ಬ್ಯೂಟಿ ಕಾಂಟೆಸ್ಟ್ ಸ್ಪರ್ಧಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಆದಾದ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ ಕಣ್ಣಿಗೆ ಬಿದ್ದ ನಟಿ ಶ್ರೀನಿಧಿ ಶೆಟ್ಟಿಯವರು ಬಿಗ್ ಬಜೆಟ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟರು. ಸುಮಾರು ಎಂಟು ವರ್ಷಗಳ ಕಾಲ ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ ನಟಿ ಶ್ರೀನಿಧಿ ಶೆಟ್ಟಿ. ಅಂದಹಾಗೆ, ಕೆಲವು ತಿಂಗಳ ಹಿಂದೆ, ‘ಕೆಜಿಎಫ್ 2’ ಚಿತ್ರದ ಡಬ್ಬಿಂಗ್ ಮುಗಿಸಿದ್ದೇನೆ ಎಂದು ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ತಿಳಿಸಿದ್ದರು.

ಡಬ್ಬಿಂಗ್ ಮಾಡುತ್ತಿರುವ ಪೋಟೋಗಳನ್ನು ಹಂಚಿಕೊಂಡು ‘ಈ ಚಿತ್ರಕ್ಕೆ ಹೃದಯಪೂರ್ವಕವಾಗಿ ಕೆಲಸ ಮಾಡಿದ್ದೇನೆ’ ಎಂದು ಬರೆದುಕೊಂಡಿದ್ದರು. ಹೌದು, ನಟಿ ಶ್ರೀನಿಧಿ ಶೆಟ್ಟಿ ಅವರು ಕೆಜಿಎಫ್ 2 ಸಿನಿಮಾಗಾಗಿ ಬರೋಬ್ಬರಿ 2.5 ಕೋಟಿ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಕೆಜಿಎಫ್ 2 ಸಿನಿಮಾ ಯಶಸ್ಸು ಕಂಡ ಮೇಲೆ ಶ್ರೀನಿಧಿಯವರ ಬೇಡಿಕೆಯೂ ಹೆಚ್ಚಾಗಿದೆ.

ಕೆಜಿಎಫ್ 2 ಸಿನಿಮಾದ ಬಳಿಕ ತಮಿಳಿನ ಚಿಯಾನ್ ವಿಕ್ರಂರವರೊಡನೆ ‘ಕೋಬ್ರಾ’ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.ಆದರೆ ನಟಿ ಶ್ರೀನಿಧಿ ಶೆಟ್ಟಿ ಸಂಭಾವನೆ ವಿಚಾರದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿಯರಾದ ಪೂಜಾ ಹೆಗ್ಡೆ ಹಾಗೂ ರಶ್ಮಿಕಾ ಮಂದಣ್ಣನವರನ್ನು ಹಿಂದೆ ಹಾಕಿದ್ದಾರೆ. ರಶ್ಮಿಕಾ ಮಂದಣ್ಣ 4 ಕೋಟಿ ಪಡೆದರೆ, ಪೂಜಾ ಹೆಗ್ಡೆ 3 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.

ಆದರೆ ಇದೀಗ ಶ್ರೀ ನಿಧಿ ಶೆಟ್ಟಿ ಈ ಇಬ್ಬರೂ ನಟಿಯರನ್ನು ಹಿಂದಿಕ್ಕಿದ್ದು, ಈ ನಟಿಯರ ಸಂಭಾವನೆಗಿಂತ ಹೆಚ್ಚಿನ ಸಂಭಾವನೆಯನ್ನು ಡಿಮ್ಯಾಂಡ್ ಮಾಡುತ್ತಿದ್ದಾರೆಯಂತೆ. ಕೋಬ್ರಾ ಸಿನಿಮಾದ ಬಳಿಕ ನಟಿ ಶ್ರೀನಿಧಿ ಶೆಟ್ಟಿ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು, ಹೆಚ್ಚು ಸಂಭಾವನೆಯನ್ನು ಕೇಳುತ್ತಿರುವ ಕಾರಣ ನಿರ್ಮಾಪಕರು ಶ್ರೀ ನಿಧಿ ಶೆಟ್ಟಿಯವರನ್ನು ಕೈ ಬಿಡುತ್ತಿದ್ದಾರೆ ಎನ್ನಲಾಗುತ್ತಿದೆ. ಅದೇನೇ ಇರಲಿ, ನಟಿ ಶ್ರೀ ನಿಧಿ ಶೆಟ್ಟಿ ಕೇಳುವಷ್ಟು ಸಂಭಾವನೆ ಕೊಟ್ಟು ಸಿನಿಮಾ ಮಾಡುವ ನಿರ್ಮಾಪಕರೂ ಇದ್ದಾರೆ. ಸದ್ಯಕ್ಕೆ ನಟಿ ಶ್ರೀನಿಧಿ ಶೆಟ್ಟಿಗೆ ಬಾರಿ ಬೇಡಿಕೆಯೂ ಸೃಷ್ಟಿಯಾಗಿದೆ.

Leave a Reply

Your email address will not be published. Required fields are marked *