ಹನ್ನೊಂದು ವರ್ಷಗಳ ಹಿಂದೆ ನಡೆದ ಸೌಜನ್ಯ (Sowjanya) ಆ-ತ್ಯಾಚಾರ ಪ್ರಕರಣವು ಇದೀಗ ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಕಳೆದ ಕೆಲ ದಿನಗಳ ಹಿಂದೆ ಈ ಪ್ರಕರಣದಡಿಯಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ (Santhosh Rao) ನಿರಪರಾಧಿ ಎಂದು ಕೋರ್ಟ್ ತಿಳಿಸಿದೆ. ಹೀಗಾಗಿ ಸಂತೋಷ್ ರಾವ್ ಗೂ ಸೌಜನ್ಯಹ’ತ್ಯೆಗೂ ಯಾವುದೇ ಸಂಬಂಧವಿಲ್ಲ, ಆತನ ಅಪರಾಧಿಯಲ್ಲ ಎನ್ನುವುದು ಖಚಿತವಾಗಿದೆ.
ಈ ತೀರ್ಪು ಬಂದ ಬಳಿಕವೇ ರಾಜ್ಯದಲ್ಲಿ ಸೌಜನ್ಯ (Sowjanya) ಆ-ತ್ಯಾಚಾರ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನಿಜವಾದ ಅಪರಾಧಿ ಯಾರೆಂದು ಪತ್ತೆ ಹಚ್ಚಿ ಅವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಎಲ್ಲೆಡೆ ಕೂಗು ಕೇಳಿ ಬರುತ್ತಿದೆ. ಆದರೆ ಕಳೆದ ಒಂದೆರಡು ದಿನಗಳ ಹಿಂದೆಯಷ್ಟೇ ಸೌಜನ್ಯ ಹ-ತ್ಯೆ ಪ್ರಕರಣ ಸಂಬಂಧ ಧರ್ಮಸ್ಥಳ ಭಕ್ತರು ಪ್ರತಿಭಟನೆ ನಡೆಸುತ್ತಿದ್ದರು.
ಈ ವೇಳೆ ಸೌಜನ್ಯಳ ತಮ್ಮ ಜಯರಾಮನ ಕಾಲರ್ ಪಟ್ಟಿ ಹಿಡಿದು ಹ-ಲ್ಲೆಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸಹೋದರ ಸುರೇಂದ್ರ ಕುಮಾರ ಹೆಗ್ಗಡೆ ( Surendra Kumara Heggade) ಯವರ ಆಪ್ತನಾಗಿರುವ ಮಹಾವೀರ್ ಜೈನ್ (Mahaveer Jain) ಮುಂದಾಗಿದ್ದರು. ಸೌಜನ್ಯಳ ತಾಯಿ ಕುಸುಮಾವತಿಯವನ್ನು ತಡೆದು ನಿಲ್ಲಿಸಿ ಮೈಗೆ ಕೈ ಹಾಕಿ ಚೂಡಿದಾರದ ಶಾಲು ಎಳೆದಿದ್ದಾನೆ. ಅಲ್ಲದೇ ಮಗನ ಮೇಲೂ ಹ-ಲ್ಲೆ ನಡೆಸಿದ್ದಾರೆ.
ಈ ಘಟನೆಯ ಬಳಿಕ ಸೌಜನ್ಯಳ ತಾಯಿ ಕುಸುಮಾವತಿ (Kusuamavathi) ಮಾಧ್ಯಮದ ಮುಂದೆ ಬಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. “ನಮಗೆ ನ್ಯಾಯ ಬೇಕು, ನಾವು ನ್ಯಾಯದ ಪರವಾಗಿಬಂದಿದ್ದೇವೆ. ಧರ್ಮಸ್ಥಳದವರು ಮಾಡಿದ್ದು ನ್ಯಾಯನಾ? ಇದು ಧರ್ಮನಾ?. ನನ್ನ ಮಗಳಿಗೆ ನ್ಯಾಯವನ್ನು ಕೋರಬೇಕೆಂದು ಬಂದ ನಮ್ಮನ್ನು ಸ್ಟೇಜ್ ಗೆ ಹತ್ತಲು ಬಿಡಲಿಲ್ಲ. ಧರ್ಮಸ್ಥಳದವರು ನನ್ನ ಮಗನ ಕಾಲರ್ ಹಿಡಿದುಕೊಂಡ್ರು. ಧರ್ಮಸ್ಥಳದ ಹೆಸರು ಎತ್ತಬಾರ್ದು ಹೇಳ್ತಾರೆ ಅಲ್ವಾ, ಇದು ಧರ್ಮನಾ, ನನ್ನ ಮಗಳಿಗೆ ನ್ಯಾಯ ಕೊಡಿಸ್ಲಿಲಿಲ್ಲ ಯಾಕೆ, ನಮ್ಮನ್ನು ಸ್ಟೇಜ್ ಗೆ ಹತ್ತಿಸಲಿಕ್ಕೆ ಯಾಕೆ” ಎಂದು ಪ್ರಶ್ನೆ ಮಾಡಿದ್ದು, ಕಣ್ಣೀರು ಹಾಕಿದ್ದಾರೆ.
ಆ ಬಳಿಕ ಸೌಜನ್ಯಳ ಸಹೋದರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, “ನ್ಯಾಯ ಕೇಳಲು ಬಂದರೆ ನನ್ನ ತಮ್ಮನಿಗೆ ಹ-ಲ್ಲೆ ಮಾಡಲು ಮುಂದಾಗುತ್ತಾರೆ. ನ್ಯಾಯ ಕೇಳುವುದು ತಪ್ಪಾ. ಧರ್ಮಸ್ಥಳ ಗ್ರಾಮದಲ್ಲಿದ್ದು ಧರ್ಮಸ್ಥಳದ ಹೆಸರು ಎತ್ತದೆ ನ್ಯಾಯ ಕೇಳುವುದು ಹೇಗೆ. ನಾವು ಯಾವುದೇ ಕಾರಣಕ್ಕೂ ಶ್ರೀಕ್ಷೇತ್ರದ ಹೆಸರು ತೆಗೆದಿಲ್ಲ. ನಮ್ಮ ತಾಯಿ ಅಕ್ಕ ಸೌಜನ್ಯಳಿಗೆ ನ್ಯಾಯಕ್ಕಾಗಿ ಆಯೋಜಿಸುವ ಪ್ರತಿ ಹೋರಾಟದಲ್ಲಿ ಭಾಗಿಯಾಗಿತ್ತಾರೆ” ಎಂದಿದ್ದಾರೆ. ಒಟ್ಟಿನಲ್ಲಿ ಸೌಜನ್ಯಳ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ದಿನೇದಿನೇ ಪ್ರತಿಭಟನೆಯ ಕಾವು ಜೋರಾಗಿದ್ದು, ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಅಪರಾಧಿಗಳು ಸಿಗುತ್ತಾರಾ ಎನ್ನುವುದನ್ನು ಕಾದು ನೋಡಬೇಕು.