ದಕ್ಷಿಣ ಭಾರತೀಯ ಚಿತ್ರರಂಗದ ಈ ಐದು ಅ-ಶ್ಲೀಲ ಸಿನಿಮಾಗಳನ್ನು ಅಪ್ಪಿತಪ್ಪಿಯೂ ಕುಟುಂಬ ಸಮೇತ ಕೂತು ನೋಡಬೇಡಿ!!!

South indian must watch movies  : ಸಿನಿಮಾರಂಗವು ಬಹುದೊಡ್ಡ ಉದ್ಯಮವಾಗಿ ಬೆಳೆದುಬಿಟ್ಟಿದೆ. ಹೀಗಾಗಿ ಕೋಟಿಗಟ್ಟಲೇ ಬಂಡವಾಳ ಹೂಡಿಕೆ ಮಾಡಿ ಸಿನಿಮಾ ಮಾಡುವ ನಿರ್ಮಾಪಕರು ಇದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ವಿಭಿನ್ನ ಕಥಾಹಂದರವನ್ನಿಟ್ಟುಕೊಂಡು ತಯಾರಾದ ಸಿನಿಮಾಗಳು ತೆರೆ ಕಾಣುವ ಮೂಲಕ ಸಿನಿ ಪ್ರೇಕ್ಷಕರ ಮನಸ್ಸು ಗೆಲ್ಲುತ್ತಿದೆ. ಇನ್ನೊಂದೆಡೆ ಮುಜುಗರ ಎನಿಸುವ ಸಿನಿಮಾಗಳು ಕೂಡ ತೆರೆಗೆ ಬಂದಿವೆ.

ಹೌದು, ಹಾಲಿವುಡ್ ಅಥವಾ ಬಾಲಿವುಡ್ ಮಾತ್ರವಲ್ಲ, ದಕ್ಷಿಣ ಭಾರತೀಯ ಚಿತ್ರರಂಗವೂ ಸಹ ಅಂತಹ ಅನೇಕ ಚಲನಚಿತ್ರಗಳನ್ನು ಮಾಡಿದೆ. ಈ ಸಿನಿಮಾಗಳಲ್ಲಿ ಮುಜುಗರ ತರಿಸುವ ದೃಶ್ಯಗಳನ್ನು ತೆರೆ ಮೇಲೆ ತರಲಾಗಿದೆ. ಅದರಲ್ಲಿಯೂ ಮುಜುಗರ ಎನಿಸುವ ಈ ಐದು ಸಿನಿಮಾಗಳನ್ನು ಕುಟುಂಬದವರ ಜೊತೆಗೆ ಸೇರಿ ನೋಡುವ ಪ್ರಯತ್ನವನ್ನು ಮಾಡಬೇಡಿ.

ರೋಮ್ಯಾಂಟಿಕ್ ದೃಶ್ಯಗಳಿಗೆ ಹೆಚ್ಚು ಒತ್ತುಕೊಡುವ ಸಿನಿಮಾಗಳು ತೆರೆಗೆ ಬಂದಿದೆ. ಅದರಲ್ಲಿಯೂ ಹಾಲಿವುಡ್, ಬಾಲಿವುಡ್ ಮಾತ್ರವಲ್ಲದೆ, ದಕ್ಷಿಣ ಭಾರತದ ಚಿತ್ರರಂಗದಲ್ಲೂ ಇಂತಹ ಹಲವು ಚಿತ್ರಗಳು ತಯಾರಾಗಿ, ತೆರೆ ಮೇಲೆ ಅಸಭ್ಯ ದೃಶ್ಯಗಳನ್ನು ತೋರಿಸಲಾಗಿದೆ. ದಕ್ಷಿಣ ಭಾರತದಲ್ಲಿ ಮಲಯಾಳಂ ಸಿನಿಮಾ ವಿಷಯಕ್ಕೆ ಹೆಸರುವಾಸಿಯಾಗಿದೆ. ಮಲಯಾಳಂ ಚಿತ್ರರಂಗದ ಹಲವು ಸಿನಿಮಾಗಳು ಅತ್ಯಂತ ಆಶ್ಲೀಲತೆಯಿಂದ ಕೂಡಿದೆ.

ಅಂದಹಾಗೆ, ಮೊದಲನೇಯದಾಗಿ 2012ರಲ್ಲಿ ತೆರೆಕಂಡ ರೊಮ್ಯಾಂಟಿಕ್ ಡ್ರಾಮಾ ಚಿತ್ರ ‘ರಾಸ್ಲೀಲಾ’ ಸಂಚಲನ ಮೂಡಿಸಿತ್ತು. ಈ ಚಿತ್ರದಲ್ಲಿ ತುಂಬಾ ಬೋಲ್ಡ್ ದೃಶ್ಯಗಳಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಚಿತ್ರವನ್ನು ಮಾಜಿದ್ ನಿರ್ದೇಶಿಸಿದ್ದರು. ಈ ಚಿತ್ರವು 1975 ರ ತಮಿಳು ಚಲನಚಿತ್ರ ‘ರಾಸಲೀಲಾ’ ದ ರಿಮೇಕ್ ಆಗಿತ್ತು. ಆ ಚಿತ್ರದಲ್ಲಿ ತಮಿಳು ಸೂಪರ್‌ಸ್ಟಾರ್ ಕಮಲ್ ಹಾಸನ್ ಮತ್ತು ಜಯಸುಧಾ ಮುಖ್ಯ ಭೂಮಿಕೆಯಲ್ಲಿದ್ದರು. ರಾಸ್ಲೀಲಾ ಚಿತ್ರದಲ್ಲಿ ದರ್ಶಂ ಮತ್ತು ಪ್ರತಿಷ್ಠಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಎರಡನೇಯದಾಗಿ 2012 ರಲ್ಲಿ, ತೆರೆ ಕಂಡ ಮಲಯಾಳಂ ಚಿತ್ರ ‘ರತಿನಿರ್ವೇದಂ’. ಈ ಚಿತ್ರದಲ್ಲಿ ನಟಿ ಶ್ವೇತಾ ಮೆನನ್ ಮುಖ್ಯ ಭೂಮಿಕೆಯಲ್ಲಿದ್ದರು. ಶ್ರೀಜಿತ್ ವಿಜಯ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಶ್ವೇತಾ ತನ್ನ ಬೋಲ್ಡ್ ಲುಕ್‌ಗಾಗಿ ಬಾಲಿವುಡ್‌ನಲ್ಲಿ ಚರ್ಚೆಯಲ್ಲಿದ್ದರು. ಅವರು ಅಮೀರ್ ಖಾನ್ ಮತ್ತು ಅಜಯ್ ದೇವಗನ್ ಅವರ ‘ಇಷ್ಕ್’ ಚಿತ್ರದ ‘ಹಮ್ಕೋ ತುಮ್ಸೆ ಪ್ಯಾರ್ ಹೈ’ ಹಾಡಿನಲ್ಲಿ ಕಾಣಿಸಿಕೊಂಡಿದ್ದರು.

ಅದರ ಜೊತೆಗೆ ನಟಿ ಸಲ್ಮಾನ್ ಖಾನ್ ಅವರ ‘ಬಂಧನ್’ ಚಿತ್ರದಲ್ಲಿ ಜಾಕಿ ಶ್ರಾಫ್ ಅವರೊಂದಿಗೆ ಕೆಲಸ ಮಾಡಿದ್ದರು. ಮೋಹನ್ ಲಾಲ್ ಹೋಸ್ಟ್ ಮಾಡಿದ ಮಲಯಾಳಂನ ಬಿಗ್ ಬಾಸ್ ಮೊದಲ ಸೀಸನ್ ನಲ್ಲಿ ಶ್ವೇತಾ ಮೆನನ್ ಕೂಡ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಸಿನಿ ಲೋಕದಲ್ಲಿ ಚರ್ಚೆಗೆ ಕಾರಣವಾಗಿದ್ದ ‘ರತಿನಿರ್ವೇದಂ’ ಚಿತ್ರವನ್ನು ರಾಜೀವ್ ಕುಮಾರ್ ನಿರ್ದೇಶಿಸಿದ್ದರು. ಈ ಚಿತ್ರವು ಲೇಖಕ ಪದ್ಮರಾಜನ್ ಅವರ ಕಾದಂಬರಿ ರತಿನಿರ್ವೇದಂ ಆಧರಿಸಿದ ಚಿತ್ರವಾಗಿತ್ತು.

ಮೂರನೇಯದಾಗಿ 2011ರಲ್ಲಿ ತೆರೆ ಕಂಡ ಸಿನಿಮಾ ಕಯಂ. ನಟಿ ಶ್ವೇತಾ ಮೆನನ್ ಮಲಯಾಳಂನ ‘ಕಯಂ’ ಚಿತ್ರದಲ್ಲಿ ಬೋಲ್ಡ್ ದೃಶ್ಯಗಳನ್ನು ನೀಡಿ ಎಲ್ಲರನ್ನೂ ಬೆಚ್ಚಿಬೀಳಿಸಿದ್ದರು. ಚಿತ್ರವನ್ನು ಅನಿಲ್ ನಾಯರ್ ನಿರ್ದೇಶಿಸಿದ್ದು, ಮನೋಜ್ ಜಯನ್, ಬಾಲ ಮತ್ತು ಶ್ವೇತಾ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಚಿತ್ರದ ನಿರ್ಮಾಪಕರ ವಿರುದ್ಧ ಶ್ವೇತಾ ಮೆನನ್ ಕೇಸ್ ಹಾಕಿದ್ದರಿಂದ ಚಿತ್ರವೂ ವಿವಾದಗಳ ಸುಳಿಯಲ್ಲಿ ಸಿಲುಕಿತ್ತು. ವಾಸ್ತವವಾಗಿ, ಚಿತ್ರದ ಫೋಟೋಗಳನ್ನು ಲೈಂ-ಗಿಕ ಸ್ಟೀರಾಯ್ಡ್ ಮಾತ್ರೆಗಳ ಜಾಹೀರಾತಿಗಾಗಿ ಬಳಸಲಾಗಿತ್ತು. ನಟಿ ಶ್ವೇತಾ ಅವರ ಅನುಮತಿಯಿಲ್ಲದೆ ಅವರ ಫೋಟೋಗಳನ್ನು ಬಳಸಿಕೊಳ್ಳಲಾಗಿತ್ತು.

ನಾಲ್ಕನೇಯದಾಗಿ 2012ರಲ್ಲಿ ತೆರೆಕಂಡ ರೊಮ್ಯಾಂಟಿಕ್ ಮಲಯಾಳಂ ಚಿತ್ರ ‘ಚಟ್ಟಕ್ಕರಿ’. ಈ ಚಿತ್ರ ಕೂಡ ಬೋಲ್ಡ್ ನೆಸ್ ವಿಷಯದಲ್ಲಿ ಕಡಿಮೆ ಇರಲಿಲ್ಲ. ಈ ಚಿತ್ರವನ್ನು ಸಂತೋಷ್ ಸೇತುಮಾಧವನ್ ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಶಮ್ನಾ ಕಾಸಿಂ ಅವರ ಬೋಲ್ಡ್ ದೃಶ್ಯಗಳನ್ನು ನೋಡಿ ಶಾಕ್ ಆಗಿದ್ದರು. ಈ ಚಿತ್ರವು ಬರಹಗಾರ ‘ಪಮ್ಮನ್’ ಅವರ ಚಟ್ಕರಿ ಕಾದಂಬರಿಯನ್ನು ಆಧರಿಸಿತ್ತು. ಐದನೇಯದಾಗಿ 2013ರಲ್ಲಿ ಮಲಯಾಳಂ ಚಿತ್ರ ‘ಅಯಾಲ್’ ತೆರೆಕಂಡಿತ್ತು.

ಲಾಲ್, ಲೀನಾ, ಇನೇಯಾ ಮತ್ತು ಲಕ್ಷ್ಮಿ ಶರ್ಮಾ ಮುಂತಾದ ತಾರೆಯರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಚಿತ್ರವನ್ನು ಸುರೇಶ್ ಉನ್ನಿನಾಥನ್ ನಿರ್ದೇಶಿಸಿದ್ದು, ಚಿತ್ರದಲ್ಲಿ ಅನೇಕ ಬೋಲ್ಡ್ ದೃಶ್ಯಗಳನ್ನು ತೋರಿಸಲಾಗಿತ್ತು. ಆದರೆ ತೆರೆ ಕಂಡ ಚಿತ್ರವೂ ಯಶಸ್ವಿಯಾಯಿತು. ಈ ಚಿತ್ರಕ್ಕಾಗಿ ಲಾಲ್‌ಗೆ ಅತ್ಯುತ್ತಮ ನಟನೆಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದರು.

Leave a Reply

Your email address will not be published. Required fields are marked *