ಸದ್ದಿಲ್ಲದೆ ಮನೆಯಲ್ಲಿ ಮದುವೆ ಆದರಾ ಟಿಕ್ ಟಾಕ್ ಬೆಡಗಿ ಸೋನು ಶ್ರೀನಿವಾಸ ಗೌಡ?.. ಫೋಟೋ ನೋಡಿ ಬೆರಗಾದ ಜನತೆ..

ಟಿಕ್ ಟಾಕ್ ಬೆಡಗಿ ಸೋನು ಶ್ರೀನಿವಾಸ ಗೌಡ (Sonu Srinivas Gowda) ಎಲ್ಲರಿಗೂ ಕೂಡ ಚಿರಪರಿಚಿತ. ತನ್ನ ಖಾಸಗಿ ವಿಡಿಯೋಗಳಿಂದ ಟ್ರೋಲ್ ಆಗಿದ್ದ ಸೋನು ಗೌಡ ಅಂದಿನಿಂದ ಸಿಕ್ಕಾಪಟ್ಟೆ ಫೇಮಸ್. ಬಿಗ್ ಬಾಸ್ ಒಟಿಟಿ (Bigg Boss OTT) ಗೆ ಹೋಗಿ ಬಂದ ಮೇಲಂತೂ ಅವರ ಲೈಫ್ ಸ್ಟೈಲ್ (Life Style) ಯೇ ಚೇಂಜ್ ಆಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾ ನೆಟ್ಟಿಗರ ಗಮನ ಸೆಳೆಯುವ ಇವರು ಯಾವ ನಟಿಗೂ ಕೂಡ ಕಡಿಮೆಯಿಲ್ಲ. ತುಂಡುಗೆಯಲ್ಲಿ ಕಾಣಿಸಿಕೊಳ್ಳುತ್ತ ನೆಟ್ಟಿಗರ ನಿದ್ದೆಯನ್ನು ಕೆಡಿಸುವುದಿದೆ. ಆದರೆ ಇದೀಗ ಸೋನು ಗೌಡ ಮನೆಯಲ್ಲಿ ಮದುವೆ (Marriage) ಸಂಭ್ರಮ ಮನೆ ಮಾಡಿದಂತೆ ಇದೆ.

ಹೌದು, ಸೋನು ಗೌಡ ಕೂಡ ಕಪ್ಪು ಬಳೆ ತೊಟ್ಟು ಸೀರೆಯಲ್ಲಿ ಮಿಂಚಿದ್ದು, ಈ ಫೋಟೋಗಳನ್ನು ತನ್ನ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋಗಳ ಜೊತೆಗೆ ಮದ್ವೆ ಹುಡ್ಗಿ ತರ Feel ಆಗ್ತಿದೆ ಎಂದು ಬರೆದುಕೊಂಡಿದ್ದಾರೆ.ಫೋಟೋ ನೋಡಿದ ನೆಟ್ಟಿಗರು ಲೈಕ್ಸ್ ಹಾಗೂ ಕಾಮೆಂಟ್ ಗಳ ಸುರಿಮಳೆಯನ್ನು ಸುರಿಸುತ್ತಿದ್ದಾರೆ. ನೆಟ್ಟಿಗರು ಸೋನು ಗೌಡ ಮದುವೆ ಆಗ್ತಿದ್ದೀರಾ ಎಂದು ಕೇಳುತ್ತಿದ್ದಾರೆ. ಇನ್ನು ಕೆಲವರು ನೀವು ಮದುಮಗಳಾಗೋದು ಯಾವಾಗ ಎಂದಿದ್ದಾರೆ.

ಸದ್ಯಕ್ಕೆ ಸೋನು ಶ್ರೀನಿವಾಸ ಗೌಡರವರ ಈ ಫೋಟೋಗಳು ನೆಟ್ಟಿಗರ ಮನಸ್ಸನ್ನು ಗೆದ್ದಂತಿದೆ. ಕಳೆದ ವರ್ಷ ಸೋನು ಶ್ರೀನಿವಾಸ್ ಗೌಡರವರು ಮಾಲ್ಡೀವ್ಸ್​ (Maldives) ನಲ್ಲಿ ವೆಕೇಷನ್ ಎಂಜಾಯ್ ಮಾಡಿ ಬಂದಿದ್ದರು. ಪ್ರವಾಸದ ವೇಳೆಯಲ್ಲಿ ಬೆಡಗಿ ಸೋನು ಗೌಡರವರು ಬಿ-ಕಿನಿ ಫೋಟೋ ಹಂಚಿಕೊಳ್ಳುವ ಮೂಲಕ ಮತ್ತೆ ಟ್ರೋಲ್ ಕೂಡ ಆಗಿದ್ದರು. ಅಷ್ಟೇ ಅಲ್ಲದೇ ಒಂದೇ ಒಂದು ದಿನದಲ್ಲಿ ಫೋಟೋಗೆ ಸಾಕಷ್ಟು ಲೈಕ್ಸ್ ಹಾಗೂ ಕಾಮೆಂಟ್ ಗಳು ಹರಿದು ಬಂದಿತ್ತು.

ಮಾಲ್ಡೀವ್ಸ್‌ನಲ್ಲಿ ಇದ್ದ ವೇಳೆಯಲ್ಲಿ ಸೋನು ಖಾಸಗಿ ಟಿವಿ ಸಂದರ್ಶನಲ್ಲಿ ಲೈವ್‌ನಲ್ಲಿ ಮಾತನಾಡಿದ್ದು, ” ಹನಿಮೂನ್ ಪ್ಯಾಕೇಜ್‌ನಲ್ಲಿ ಒಂದು ಜ್ಯೂಸ್‌ ಕೂಡ ಕೊಡುವುದಿಲ್ಲ. ನಾವು ಕಾಫಿ ಬೇಕು ಎಂದು ಕೇಳಿದರೆ ಅವರು ಹಾಲಿನ ಪೌಡರ್ ತಂದುಕೊಟ್ಟಿದ್ದಾರೆ ಇಲ್ಲಿ ಆಗುತ್ತಿರುವುದನ್ನು ನೋಡಿ ನಕ್ಕಿ ನಕ್ಕಿ ಸಾಕಾಗಿದೆ. ನಾವು ಹನಿಮೂನ್ ಪ್ಯಾಕೇಜ್‌ನಲ್ಲಿ ಬಂದಿರುವುದಕ್ಕೆ ಕೇವಲ 2 ಲಕ್ಷ ಆಯ್ತು. ಮಾಲ್ಡೀವ್ಸ್‌ ಎಂಜಾಯ್ ಮಾಡುತ್ತಿದ್ದೀನಿ ಹೀಗಾಗಿ ನಿಜ ಹೇಳಬೇಕು ನಾನು ಇಲ್ಲಿ ಸ್ಮೋಕ್ ಮಾಡಿದೆ ಇಲ್ಲಿ ಒಂದು ಸಿಗರೇಟ್ ಪ್ಯಾಕೇಟ್ ಬೆಲೆ 20 ಡಾಲರ್ ಅಂದ್ರೆ ಒಂದು ಸಿಗರೇಟ್‌ಗೆ 82 ಡಾಲರ್ ಲೆಕ್ಕ ಬಿತ್ತು” ಎಂದಿದ್ದರು.

“ಫ್ಲೈಟ್‌ನಲ್ಲಿ ಪ್ರಯಾಣ ಮಾಡುವಾಗ ಯಾರೂ ಲೈಟರ್ ಮತ್ತು ಸಿಗರೇಟ್‌ ಹಿಟ್ಕೊಂಡು ಬರ್ತಾರಾ’ ಎಂದು ಮಾನಾಡಿದ್ದಾರೆ. ಮಾಲ್ಡೀವ್ಸ್‌ಗೆ ಬಂದ ಮೇಲೆ ನಾನು ವೈರಲ್ ಆಗುತ್ತೀನಿ ಎಂದು ಗೊತ್ತಿರಲಿಲ್ಲ. ನಮ್ಮ ಖುಷಿಗೆ ನಾನು ಎಂಜಾಯ್ ಮಾಡಲ್ಲ ಬಿಕಿನಿ ಹಾಕಬೇಕು ಅಲ್ವಾ? ನನಗೆ ಒಂದು ಮಿಲಿಯನ್ ಫಾಲೋವರ್ಸ್ ಆಗಿರುವುದಕ್ಕೆ ನಾನು ಬೇರೆ ಅವರ ತರ ಜಾತ್ರೆ ಆಚರಣೆ ಮಾಡಿಕೊಳ್ಳುವುದಿಲ್ಲ” ಎಂದು ಹೇಳಿಕೊಂಡಿದ್ದರು.

“ನನ್ನ ಬಳಿ ಇನ್ನು ಹೆಚ್ಚಿಗೆ ಬಿ-ಕಿನಿ ವಿಡಿಯೋಗಳು ಇಲ್ಲ ಅಷ್ಟೇ ಇರುವುದು. ನಾವು ಉಳಿಸಿಕೊಂಡಿರುವುದು ಸೆಂಟಾರಾ ರೆಸಾರ್ಟ್‌ನಲ್ಲಿ ನಾವು ಸಿಂಗಲ್ ಹೀಗಾಗಿ ನಮಗೆ ತಕ್ಕಂತೆ ಎಂಜಾಯ್ ಮಾಡುತ್ತಿರುವೆ. ಬೆಳಗ್ಗೆ ಎದ್ದು ತಿನ್ನೋದು ಮಲಗೋದು ಫೋಟೋಶೂಟ್ ಮಾಡೋದು ಹಾಗೂ ಸ್ವಿಮ್ಮಿಂಗ್ ಮಾಡುವುದು ಅಷ್ಟೇ ಕೆಲಸ” ಎಂದಿದ್ದರು.

Leave a Reply

Your email address will not be published. Required fields are marked *