ಟಿಕ್ ಟಾಕ್ (Tik Tok)bಮೂಲಕವೇ ಜನಪ್ರಿಯತೆಯನ್ನು ಗಳಿಸಿಕೊಂಡಿರುವ ಸೋನು ಶ್ರೀನಿವಾಸ್ ಗೌಡ (Sonu Shreenivas Gowda) ಯಾರಿಗೆ ಗೊತ್ತಿಲ್ಲ ಹೇಳಿ?. ಹೀಗೆ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದ ಸೋನು ಶ್ರೀನಿವಾಸ ಗೌಡ ‘ಬಿಗ್ ಬಾಸ್’ (Big Boss) ಮನೆಗೆ ಎಂಟ್ರಿ ಕೊಟ್ಟಿದ್ದರು. ಅಲ್ಲಿ ಮತ್ತಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿರುವ ಸೋನು ಗೌಡ ಇದೀಗ ಮತ್ತೆ ಸುದ್ದಿಯಾಗುತ್ತಿದ್ದಾರೆ.
ಟಿಕ್ ಟಾಕ್ ನಿಂದಲೇ ಪ್ರಸಿದ್ಧಿಯಾದ ಸೋನು ಶ್ರೀನಿವಾಸ್ ಗೌಡ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದು, ತನ್ನ ಬೋಲ್ಡ್ ಫೋಟೋಸ್ ಮತ್ತು ಡ್ಯಾನ್ಸ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿ ಮಿಂಚಿದ್ದಾರೆ. ಅದರ ಜೊತೆಗೆ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗುವ ಸೋನು ಆಗಾಗ ಸುದ್ದಿಯಾಗುವುದು ಹೊಸದೇನಲ್ಲ.ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.
ಟೀಕೆಗಳಿಗೆ ತಲೆಕೆಡಿಸಿಕೊಳ್ಳದೇ ಸೋನು ಗೌಡ ಹಾಟ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಟಿಕ್ ಟಾಕ್ ಸೋನು ಗೌಡರವರ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Vairal) ಆಗಿವೆ. ಈ ಫೋಟೋ ಗಳ ಜೊತೆಗೆ ನಾನು ನನಗಾಗಿ ಬದುಕುವೆ ಸಮಾಜಕ್ಕಾಗಿ ಅಲ್ಲ ಎಂದಿದ್ದಾರೆ. ಸೋನು ಶ್ರೀನಿವಾಸ ಗೌಡರ ಹಾಟ್ ಫೋಟೋಗೆ ನೆಟ್ಟಿಗರು ಶಾಕ್ ಆಗಿದ್ದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಅಂದಹಾಗೆ, ಸೋನು ಶ್ರೀನಿವಾಸ ಗೌಡ ಹಾಗೂ ರಾಕೇಶ್ ಅಡಿಗ (Rakesh Adiga) ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಿನಿಂದ ಒಳ್ಳೆಯ ಸ್ನೇಹಿತರು.
ಇದೀಗ ಇಬ್ಬರು ಔಟ್ ಡೋರ್ (Out Door) ನಲ್ಲಿ ಪಾರ್ಟಿ ಮಾಡಿದ್ದಾರೆ. ಅದಲ್ಲದೇ ರೀಲ್ಸ್ ಮಾಡಿದ್ದು, ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಸೋನುಗೌಡ ಹಂಚಿಕೊಂಡಿದ್ದು, ನಮ್ದು ಒಂದು ಇರ್ಲಿ ಎಂದು ಬರೆದುಕೊಂಡಿದ್ದಾರೆ. ಇತ್ತ ಈ ವಿಡಿಯೋವೊಂದು ವೈರಲ್ ಆಗುತ್ತಿದ್ದು, ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಇನ್ನೊಂದೆಡೆ ನೆಟ್ಟಿಗರು ನಟ ರಾಕೇಶ್-ಸೋನು ಗೌಡ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರಾ ಎಂದು ಪ್ರಶ್ನಿಸುತ್ತಿದ್ದಾರೆ. ಅದೇನೇ ಇದ್ದರೂ ಸೋನು ಶ್ರೀನಿವಾಸ ಗೌಡರವರು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಹಿಂದೆಯಷ್ಟೇ ಸೋನು ಗೌಡ ಅವರ ಖಾಸಗಿ ವಿಡಿಯೋ ಲೀಕ್ ಆಗಿತ್ತು.

ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಬಿಗ್ ಬಾಸ್ ಮನೆಯಲ್ಲಿ ಲೀಕ್ ಆದ ವಿಡಿಯೋದ ಬಗ್ಗೆ ಮಾತನಾಡಿದ್ದರು. ಖಾಸಗಿ ಅಂಗಗಳನ್ನು ಪ್ರದರ್ಶನ ಮಾಡಿದ ಇಂಥವರಿಗೆಲ್ಲ ‘ಬಿಗ್ ಬಾಸ್ ಕನ್ನಡ ಒಟಿಟಿ’ ವೇದಿಕೆಯಲ್ಲಿ ಅವಕಾಶ ನೀಡಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಸೋನು ಗೌಡ ತಮ್ಮ ಖಾಸಗಿ ವಿಡಿಯೋ ಲೀಕ್ ಆಗಿದ್ದಕ್ಕೆ ಕಾರಣ ಏನು ಎಂಬುದನ್ನು ರಿವೀಲ್ ಮಾಡಿದ್ದು ಕಣ್ಣೀರು ಸುರಿಸಿದ್ದರು. ಈ ರೀತಿಯಾಗಲು ಬಾಯ್ ಫ್ರೆಂಡ್ ಕಾರಣ ಎನ್ನುವುದನ್ನು ಬಿಚ್ಚಿಟ್ಟಿದ್ದು, ಹಳೇ ಘಟನೆಯನ್ನು ನೆನಪಿಸಿಕೊಂಡ ಸೋನು ಗೌಡ ಕಣ್ಣೀರು ಹಾಕುವುದನ್ನು ನೋಡಿ ಬಿಗ್ ಬಾಸ್ ಮನೆಯ ಎಲ್ಲಾ ಸ್ಪರ್ಧಿಗಳು ಸಮಾಧಾನ ಮಾಡಿದ್ದರು. ಅದರ ಜೊತೆಗೆ, ಅವರನ್ನು ತಬ್ಬಿಕೊಂಡುನಟ ರಾಕೇಶ್ ಅಡಿಗ ಸಮಾಧಾನ ಪಡಿಸಿದ್ದರು.