ಸ್ವಂತ ತಾಯಿಯನ್ನೆ ಮು ಗಿಸಿದ ಮಗಳು. ತಾಯಿಯೇ ಮಗಳಿಗೆ ವಿಲನ್, ಇಲ್ಲಿದೆ ನೋಡಿ ಅಸಲಿ ವಿಚಾರ!!

ಮನುಷ್ಯನು ಸಂಬಂಧಗಳಿಗೆ ಮೌಲ್ಯವನ್ನು ನೀಡುತ್ತಿಲ್ಲ. ಹೀಗಾಗಿ ನಮ್ಮ ಸುತ್ತ ಮುತ್ತಲಿನಲ್ಲಿ ಊಹೆ ಮಾಡಲು ಸಾಧ್ಯವಾಗದ ಘಟನೆಗಳು ನಡೆಯುತ್ತಿದೆ. ಸಾಮಾನ್ಯವಾಗಿ ಹೆತ್ತ ತಾಯಿಯೂ ಯಾವತ್ತಿಗೂ ಮಕ್ಕಳ ಕೇಡನ್ನು ಬಯಸುವುದಿಲ್ಲ. ಆದರೆ ಕೆಲವೊಮ್ಮೆ ಇದಕ್ಕೆ ವ್ಯತಿರಿಕ್ತವಾದ ಘಟನೆಗಳು ಕೂಡ ನಡೆಯುತ್ತವೆ.

ಈ ಯುವತಿಯೂ ವಿದ್ಯಾವಂತೆಯಾಗಿದ್ದಳು. ಫಿಸಿಯೋ ಥೆರಪಿಸ್ಟ್ (Physio Therapist) ಆಗಿದ್ದ ಯುವತಿಯು ಮದುವೆಯಾಗಿ ಗಂಡನ ಮನೆಗೆ ಹೋದಳು. ಅತ್ತೆ, ಗಂಡ ಮತ್ತು ಮಗನೊಂದಿಗೆ ಸುಖವಾಗಿ ಸಂಸಾರ ಮಾಡುತ್ತಿದ್ದ ಯುವತಿಯ ಬದುಕಿಗೆ ವಿಲನ್ (Vilan) ಆಗಿದ್ದು ಯಾರು ಎಂದು ತಿಳಿದರೆ ನಿಜಕ್ಕೂ ಶಾಕ್ ಆಗಬಹುದು. ಆಕೆಯ ಹೆತ್ತಮ್ಮನೇ ಆಕೆಯ ಬದುಕಿಗೆ ವಿಲನ್ ಆಗಿದ್ದಳು.

ತಾಯಿಯ ಮಗಳ ಸಂಸಾರ ಎಂಟ್ರಿ ಕೊಡುತ್ತಿದ್ದಂತೆ ಬದುಕೇ ಅಲ್ಲೋಲ ಕಲ್ಲೋಲವಾಗಿ ಬಿಟ್ಟಿತ್ತು. ತಾಯಿಯ ಕಥೆಯನ್ನು ಮಗಳೇ ಮುಗಿಸುವಷ್ಟರ ಮಟ್ಟಿಗೆ ಆಕೆಯ ಬದುಕಿನಲ್ಲಿ ಆಟವಾಡಿದ್ದಳು. ತಾಯಿಯ ಕಥೆಯನ್ನು ಮುಗಿಸಿ ದೇಹವನ್ನು ಸೂಟ್ ಕೇಸ್ (Shoot Case) ನಲ್ಲಿ ತುಂಬಿಕೊಂಡು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಳು ಈ ಯುವತಿ.

ಸೋನಾಲಿ (Sonali) ಯದ್ದು ಮುದ್ದಾದ ಕುಟುಂಬ, ಅತ್ತ, ಗಂಡ ಹಾಗೂ ಮಗು ಈ ಮೂವರು ಸುಖವಾಗಿ ಸಂಸಾರ ಮಾಡುತ್ತಿದ್ದರು. ಹೀಗಿರುವಾಗ ಕುಟುಂಬಕ್ಕೆ ಸೊನಾಲಿಯ ತಾಯಿಯ ಬಂದಳು. ಆದರೆ ಸುಖ ಸಂಸಾರಕ್ಕೆ ಸೋನಾಲಿ ತಾಯಿಯೇ ವಿಲನ್ ಆಗಿದ್ದು ನಿಜಕ್ಕೂ ವಿಪರ್ಯಾಸ ಎನ್ನಬಹುದು. ಮನೆಯ ಸಂಪೂರ್ಣವಾಗಿ ಸೊನಾಲಿಯ ತಾಯಿಯೇ ತೆಗೆದುಕೊಂಡು ಬಿಟ್ಟಳು. ಅಷ್ಟೇ ಅಲ್ಲದೇ ಮಗಳ ಮನೆಗೆ ಬಂದು ಎಲ್ಲರಿಗೂ ಹಿಂಸೆ ನೀಡಲು ಮುಂದಾಗಿದ್ದು, ಎಲ್ಲರೂ ಕೂಡ ಎಲ್ಲವನ್ನು ಸಹಿಸಿಕೊಂಡು ಹೋಗುತ್ತಾರೆ.

ಕೊನೆಗೆ ಮಗಳ ತಾಳ್ಮೆ ಕಟ್ಟೆ ಹೊಡೆದು ತಾಯಿಯ ಜೀವವನ್ನು ಮುಗಿಸುವ ಹಂತಕ್ಕೆ ಬಂದು ಬಿಟ್ಟಳು. ಮಗಳೇ ತಾಯಿಯ ಕಥೆ ಮುಗಿಸಿದ್ದು, ಇದೀಗ ಸೋನಾಲಿ ಪೊಲೀಸರ ಅತಿಥಿಯಾಗಿದ್ದಾಳೆ. ಇತ್ತ ವಿಶೇಷ ಚೇತನ ಮಗನಿಗೆ ತಾಯಿಯಿಲ್ಲದೇ ತಬ್ಬಲಿಯಾಗಿದ್ದಾನೆ. ಇತ್ತ ಪೊಲೀಸರ ವಿಚಾರಣೆ ವೇಳೆಯಲ್ಲಿ ಸೋನಾಲಿಯೂ ಸತ್ಯ ಬಾಯಿ ಬಿಟ್ಟಿದ್ದು, ಈ ರೀತಿಯ ನಿರ್ಧಾರವನ್ನು ಮಾಡಲು ಕಾರಣವನ್ನು ನೀಡಿದ್ದಾಳೆ.

ಅಮ್ಮ, ಬೀಗರ ಮನೆಗೆ ಬಂದಿದ್ದರೂ ನಾನು ಹಿರಿಯಳು ನನ್ನ ಮಾತನ್ನು ಎಲ್ಲರೂ ಕೇಳಬೇಕು ಎನ್ನುತ್ತಿದ್ದಳು. ಮೊಮ್ಮಗನಿಗೆ ಆಗಾಗ್ಗೆ ಬೈಯುತ್ತಿದ್ದಳು. ಅತ್ತೆಯ ಜೊತೆಗೆ ಅಮ್ಮ ಜಗಳ ಮಾಡುತ್ತಿದ್ದಳು. ಯಾವಾಗ್ಲೂ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದಳು ಎಂದಿದ್ದಾಳೆ. ಅದೇನೇ ಇದ್ದರೂ ಮಗಳ ಶ್ರೇಯಸ್ಸನ್ನು ಬಯಸುವ ತಾಯಿಯ ಮುಂದೆ ಮಗಳ ಕುಟುಂಬಕ್ಕೆ ವಿಲನ್ ಆಗುವುದು ನಿಜಕ್ಕೂ ವಿಪರ್ಯಾಸ ಎನ್ನಬಹುದು.

Leave a Reply

Your email address will not be published. Required fields are marked *