ಮದುವೆಯಾದ ಬಳಿಕವು ಎಲ್ಲಾ ಗಂಡಸರಿಗೆ ಅವರ ಹಳೆ ಡವ್ ನೆನಪಾಗುತ್ತಾಳೆ. ಯಾಕೆ ಗೊತ್ತಾ? ಇಲ್ಲಿದೆ ನೋಡಿ ಉತ್ತರ!!

ಪ್ರೀತಿ (Love) ಎಂದರೆ ಅದೊಂದು ಮಧುರ ಭಾವನೆ. ಈ ಪ್ರೀತಿಯ ಭಾವನೆಯನ್ನು ಯಾರಿಗೂ ಕೂಡ ಮರೆಯಲು ಸಾಧ್ಯವಿಲ್ಲ. ಅದರಲ್ಲಿಯು ಮೊದಲ ಪ್ರೀತಿಯನ್ನು ಯಾರು ಕೂಡ ಮರೆಯುವುದಿಲ್ಲ. ಕೆಲವೊಮ್ಮೆ ಪ್ರೀತಿಸಿದ ವ್ಯಕ್ತಿಗಳು ದೂರವಾಗಬೇಕಾಗುತ್ತದೆ. ಹೀಗಾಗಿ ಮನೆಯವರ ಒತ್ತಾಯಕ್ಕೆ ಮಣಿದು ಇನ್ನೊಬ್ಬರ ಜೊತೆಗೆ ಬದುಕು ಹಂಚಿಕೊಳ್ಳಬೇಕಾಗುತ್ತದೆ.

ಆದರೆ ಮೊದಲ ಪ್ರೀತಿಯ ಕ್ಷಣಗಳು ಆಡಿದ ಮಾತುಗಳು, ಕೊಟ್ಟ ಉಡುಗೊರೆಗಳು ಎಲ್ಲದರ ನೆನಪುಗಳು ಆಗಾಗ ಬಂದು ಹೋಗುತ್ತವೆ. ಆದರೆ ಮದುವೆಯಾದ ಬಳಿಕವು ಕೆಲವೊಮ್ಮೆ ಮಾಜಿ ಪ್ರೇಮಿ (Ex Lover) ಯ ನೆನಪು ಬಿಡದೇ ಕಾಡಬಹುದು. ಹಾಗಾದ್ರೆ ಆ ಹಳೆ ಲವರ್ ನೆನಪು ಕಾಡುವುದಕ್ಕೆ ಕಾರಣವೇನು ಎನ್ನುವುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

ಮದುವೆಯಾದ ಹೊಸತರಲ್ಲಿ ಗಂಡ ಹೆಂಡತಿ (Husband-Wife) ಯರು ಬಹಳ ಸಂತೋಷದಿಂದಲೇ ಜೊತೆಗೆ ಇರುತ್ತಾರೆ. ಈ ವೇಳೆಯಲ್ಲಿ ಇಬ್ಬರ ನಡುವೆ ಸರಸ, ಸಲ್ಲಾಪ ಹೆಚ್ಚಾಗಿರುತ್ತದೆ. ಕಾಲ ಕಳೆಯುತ್ತಾ ಹೋದಹಾಗೆ ಎಲ್ಲವೂ ಬದಲಾಗುತ್ತದೆ. ಸಂಗಾತಿಯ ಜೊತೆಗಿನ ಸಲುಗೆಯು ಕಡಿಮೆಯಾಗುತ್ತಾ ಬರಬಹುದು. ಹೀಗಾದಾಗ ಹಳೆಯ ಪ್ರೇಮಿ ನಿಮ್ಮನ್ನು ಕಾಡಬಹುದು.

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಪ್ರಾರಂಭದಲ್ಲಿ ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳುವುದರಲ್ಲಿ ಸಮಯ ಕಳೆದು ಹೋಗುತ್ತವೆ. ಪ್ರಾರಂಭದಲ್ಲಿ ಇಬ್ಬರ ತಪ್ಪು ಒಪ್ಪುಗಳನ್ನು ಇಬ್ಬರೂ ಸಮವಾಗಿ ಸ್ವೀಕರಿಸಿದ್ದರೂ ಕೂಡ ನಿಂದನೆಗಳು ಕಾಣುವುದಿಲ್ಲ. ಯಾಕಂದರೆ ಹೊಸದರಲ್ಲಿ ಎಲ್ಲವು ಚೆನ್ನಾಗಿಯೇ ಇರುತ್ತವೆ. ಆದರೆ ಸಂಬಂಧಗಳು ಹಳೆಯದಾಗಿ ಬರುತ್ತಿದ್ದಂತೆ ನಿಂದನೆಗಳು ಪ್ರಾರಂಭವಾಗುತ್ತದೆ.

ಸಣ್ಣ ಪುಟ್ಟ ವಿಚಾರಗಳನ್ನು ಇಟ್ಟುಕೊಂಡು ನಿಂ-ದಿಸುವವರು ಇರುತ್ತಾರೆ. ಈ ನಿಂದನೆಗಳು ಜಗಳಗಳಿಗೂ ಕೂಡ ಕಾರಣವಾಗಬಹುದು. ಹೀಗಾದಾಗ ಮಾಜಿ ಪ್ರೇಮಿಯ ನೆನಪು ಸದ್ದಿಲ್ಲದೇ ಬಂದು ಹೋಗುತ್ತದೆ. ಪ್ರತಿಯೊಂದು ಸಂಬಂಧದಲ್ಲಿಯು ಕಾಳಜಿ (Care and Concern) ಎನ್ನುವುದು ಬಹಳ ಮುಖ್ಯವಾಗಿದೆ. ಪ್ರೀತಿ ಹಾಗೂ ಕಾಳಜಿಯಿಲ್ಲದೇ ಯಾವ ಸಂಬಂಧಗಳು ಇರಲು ಸಾಧ್ಯವಿಲ್ಲ. ಆದರೆ ಗಂಡ ಹೆಂಡತಿ ಸಂಬಂಧದಲ್ಲಿ ಕಾಳಜಿ ಇಲ್ಲದೆ ಹೋದರೆ ಅಂತರ ಎನ್ನುವುದು ಶುರುವಾಗಬಹುದು.

ಸಂಗಾತಿಯು ಅ-ಸಡ್ಡೆಯಾಗಿ ವರ್ತಿಸಿದಾಗ, ನಿಮ್ಮ ಆಸೆಗಳನ್ನು ಈಡೇರಿಸದೇ ಇದ್ದಾಗ ತಾನಾಗಿಯೇ ಮಾಜಿ ಪ್ರೇಮಿಯು ನೆನಪಾಗಿ ಬಿಡಬಹುದು. ಅದಲ್ಲದೇ ಮದುವೆ ಬಳಿಕವೂ ತಮ್ಮ ಸಂಗಾತಿ ಅ-ನೈತಿಕ ಸಂಬಂಧ ಹೊಂದಿರುವ ವಿಚಾರ ತಿಳಿದಾಗ ವ್ಯಕ್ತಿಯ ಮನಸ್ಸಿನಲ್ಲಿನಾನಾ ರೀತಿಯ ಆಲೋಚನೆಗಳು ಬರುವುದು ಸಹಜ. ಹೌದು, ಆ ವೇಳೆಯಲ್ಲಿ ಮಾಜಿ ಪ್ರೇಮಿಯ ಜೊತೆಗೆ ಪ್ರಾಮಾಣಿಕವಾಗಿದ್ದ ರೀತಿ ಹಾಗೂ ಕ್ಷಣಗಳು ನಿಮ್ಮನ್ನು ಕಾಡಬಹುದು.

ಹೊಸ ಮನೆ ಎಂದಾಗ ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಕಾಣಿಸುತ್ತದೆ. ಆದರೆ ದಿನ ಕಳೆದಂತೆ ಅತ್ತೆ-ಮಾವನ ಜೊತೆಗೆ ಚೆನ್ನಾಗಿರಬೇಕು ಎಂದುಕೊಂಡರೂ ಕೂಡ ಅಲ್ಲಿನ ಸನ್ನಿವೇಶಗಳು ನಿಮ್ಮ ಹೊಂದಾಣಿಕೆ (Adjustment) ಯನ್ನು ಪ್ರಶ್ನಿಸಿಬಹುದು. ಏನೇ ಮಾಡಿದರೂ ಕೂಡ ಅತ್ತೆ ಮಾವನಿಗೆ ತಪ್ಪಾಗಿ ಕಾಣಬಹುದು. ಈ ವೇಳೆಯಲ್ಲಿ ಗಂಡನು ಬೆಂಬಲವಾಗಿ ನಿಂತರೆ ಹೆಣ್ಣಿಗೆ ಸ್ವಲ್ಪ ಮಟ್ಟಿಗೆ ಧೈರ್ಯ ಇರುತ್ತದೆ. ಆದರೆ ಆ ವೇಳೆ ತನಗೆ ಯಾರು ಇಲ್ಲ ಎನ್ನುವ ಭಾವನೆ ಬಂದರೆ ಸಾಕು ಮಾಜಿ ಪ್ರೇಮಿಯು ಸದ್ದಿಲ್ಲದೇ ನೆನಪಾಗಿ ಬಿಡುತ್ತಾನೆ.

Leave a Reply

Your email address will not be published. Required fields are marked *