ಮ್ಯಾಟ್ರಿಮೋನಿಯಲ್ ಸೈಟ್ ಭೇಟಿಯಾದ ಮಹಿಳೆ, ಸಾಫ್ಟ್ ವೇರ್ ಇಂಜಿನಿಯರ್ ಗೆ ಒಂದು ಕೋಟಿ ರೂಪಾಯಿ ಪಂ-ಗನಾಮ, ಇಲ್ಲಿದೆ ಅಸಲಿ ವಿಚಾರ

ಇತ್ತೀಚೆಗಿನ ಆನ್ಲೈನ್ ನಲ್ಲಿ ವ್ಯವಹಾರ (Online Bussiness) ಗಳು ಹೆಚ್ಚಾಗುತ್ತಿದ್ದಂತೆ ಹಣ ಕಳೆದುಕೊಳ್ಳುವವರ ಸಂಖ್ಯೆಯು ಹೆಚ್ಚುತ್ತಿದೆ. ಸ್ಮಾರ್ಟ್ ಫೋನ್ (Smart Phone) ನಲ್ಲಿ ಕೆಲವೇ ನಿಮಿಷಗಳೊಂದಿಗೆ ತಕ್ಷಣವೇ ಹಣವನ್ನು ಕಳುಹಿಸುವ ಅವಕಾಶವಿದೆ. ಆದರೆ ಕೆಲವರು ಈ ಪ್ಲಾಟ್ ಫಾರ್ಮ್ (Platform) ನನ್ನೇ ಬಂಡವಾಳವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ಇಲ್ಲೊಬ್ಬ ಆನ್ಲೈನ್ ವಂಚನೆಯಲ್ಲಿ ಸಿಲುಕಿರುವ ವ್ಯಕ್ತಿಯು ಒಂದೇ ತಿಂಗಳಿಗೆ ಒಂದು ಕೋಟಿ ರೂಪಾಯಿ ಕಳೆದುಕೊಂಡಿರುವ ಘಟನೆಯೊಂದು ನಡೆದಿದೆ.

ಮೋ-ಸ ಹೋದ ವ್ಯಕ್ತಿಯು ಅಹಮದಾಬಾದ್ ಸಾಫ್ಟ್‌ವೇರ್ ಇಂಜಿನಿಯರ್ (Ahamadabad Software Engineer) ಯಾಗಿದ್ದಾನೆ. ಈತನು ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಭೇಟಿಯಾದ ಮಹಿಳೆಯಾಗಿದ್ದು, ಈ ಮಹಿಳೆಯು ಈ ಯುವಕನಿಂದ ಕೋಟಿ ಗಟ್ಟಲೇ ಹಣವನ್ನು ಎ-ಗರಿಸಿದ್ದಾಳೆ. ಈ ಸಾಫ್ಟ್‌ವೇರ್ ಇಂಜಿನಿಯರ್‌ಗೆ ಮ್ಯಾಟ್ರಿಮೋನಿಯಲ್ ಸೈಟ್ (Matrimonial Site) ನಲ್ಲಿ ಭೇಟಿಯಾಗಿ, ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಲು ತಿಳಿಸಿದ್ದಾಳೆ.

ಆ ಮಹಿಳೆ ಹೇಳಿದ್ದಂತೆ ಮಾಡಲು ಹೋಗಿ ಮೂರು ಪಂ-ಗನಾಮ ಹಾಕಿಕೊಂಡಿದ್ದಾನೆ. ಹಣ ಕಳೆದುಕೊಂಡ ಇಂಜಿನಿಯರ್ ಉದ್ಯೋಗಿಯು ಇದೇ ಸೆಪ್ಟೆಂಬರ್ 9 ರಂದು ಸೈಬರ್ ಕ್ರೈಮ್ (Cyber Crime) ಪೊಲೀಸರನ್ನು ಸಂಪರ್ಕಿಸಿ, ಹಣ ಕಳೆದುಕೊಂಡ ಬಗ್ಗೆ ಇಂಚಿಂಚು ಮಾಹಿತಿ ನೀಡಿದ್ದಾನೆ. ಈ ಸಾಫ್ಟ್ ವೇರ್ ಇಂಜಿನಿಯರ್ ವ್ಯಕ್ತಿಯ ಹೆಸರು ಕುಲದೀಪ್ ಪಟೇಲ್ (Kuladeep Patel) . ಈ ಕುಲದೀಪ್ ಎನ್ನುವವನು ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಭೇಟಿಯಾದ ಅದಿತಿ ಮೇಲೆ ಎಫ್ ಐ ಆರ್ (FIR) ದಾಖಲು ಮಾಡಿದ್ದಾನೆ.

ಕುಲದೀಪ್ ಅವರು ಸೈಬರ್ ಕ್ರೈಮ್ ಪೊಲೀಸರಿಗೆ ಮಾಹಿತಿ ನೀಡಿದ್ದು, “ಅದಿತಿ ತಾನು ಯುಕೆಯಲ್ಲಿ ಆಮದು ಮತ್ತು ರಫ್ತು ವ್ಯವಹಾರವನ್ನು ಹೊಂದಿದ್ದೇನೆ ಮತ್ತು ಉತ್ತಮವಾಗಿ ಸಂಪಾದನೆ ಮಾಡಲು ‘ಬನೊಕಾಯಿನ್’ ನಲ್ಲಿ ಹೂಡಿಕೆ ಮಾಡಬೇಕು ಎಂದು ನನಗೆ ತಿಳಿಸಿದಳು. ಆಕೆಯ ಮೇಲೆ ನಂಬಿಕೆಯಿಟ್ಟು ನಾನು ಸಮ್ಮತಿಸಿದೆ. ಜೊತೆಗೆ ಬನೊಕಾಯಿನ್‌ನ ಗ್ರಾಹಕ ಪ್ರತಿನಿಧಿಯೊಂದಿಗೂ ಈ ಸಂಬಂಧ ಮಾತನಾಡಲಾಯಿತು ಎಂದಿದ್ದಾನೆ.

ಆರಂಭದಲ್ಲಿ ಕುಲದೀಪ್ ಪಟೇಲ್ ಹೂಡಿಕೆ ಮಾಡಿದ ಮೊದಲ 1 ಲಕ್ಷಕ್ಕೆ ಅವರ ಕ್ರಿಪ್ಟೋ ಖಾತೆಯು 78 USDT (US ಡಾಲರ್ ಟೆಥರ್) ಲಾಭವು ಬಂದಿತ್ತು. ಹೀಗಾಗಿ 18 ವಹಿವಾಟುಗಳಲ್ಲಿ 1.34 ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾನೆ. ಕಳೆದ ಜುಲೈ 20 ಮತ್ತು ಆಗಸ್ಟ್ 31 ರ ನಡುವೆ ಎಲ್ಲಾ ವ್ಯವಹಾರಗಳನ್ನು ನಡೆಸಲಾಗಿದ್ದು, ಸೆಪ್ಟೆಂಬರ್ 3 ರಂದು ಪಟೇಲ್ ತನ್ನ ಖಾತೆಯಿಂದ 2.59 ಲಕ್ಷ ರೂಪಾಯಿಗಳನ್ನು ಹಿಂಪಡೆಯಲು ಮುಂದಾದಾಗ ಖಾತೆಯು ಸ್ಥಗಿತವಾಗಿದೆ ಎನ್ನುವ ವಿಚಾರವು ಈತನ ಗಮನಕ್ಕೆ ಬಂದಿದೆ.

ಆ ಕೂಡಲೇ ಈ ಮೊದಲು ಮಾತನಾಡಿದ್ದ ಕಸ್ಟಮರ್ ಕೇರ್ ಪ್ರತಿನಿಧಿಯನ್ನು ಸಂಪರ್ಕಿಸಿದ್ದು, ಆ ವೇಳೆಯಲ್ಲಿ ಖಾತೆಯನ್ನು ಡಿ-ಫ್ರೀಜ್ ಮಾಡಲು ಹೆಚ್ಚುವರಿ 35 ಲಕ್ಷ ರೂಪಾಯಿ ಹೂಡಿಕೆ ಮಾಡಿ ಎಂದಿದ್ದಾರೆ. ಆದರೆ ಕುಲದೀಪ್ ಪಟೇಲ್ ಅದಿತಿಯನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವಳು ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಆ ವೇಳೆಯಲ್ಲಿ ತಾನು ಮೋ-ಸ ಹೋಗಿರುವುದು ಕುಲದೀಪ್ ಅವರಿಗೆ ಪಕ್ಕಾ ಆಗಿದೆ. ಹೀಗಾಗಿ ಆನ್ಲೈನ್ ವ್ಯವಹಾರಗಳಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಸ್ವಲ್ಪ ಎಚ್ಚರಿಕೆ ವಹಿಸಿದ ಸುರಕ್ಷಿತ ದೃಷ್ಟಿಯಿಂದ ಒಳ್ಳೆಯದು.

Leave a Reply

Your email address will not be published. Required fields are marked *