ನಮ್ರತಾ ಳನ್ನು ಸೊಸೆಯಾಗಿ ಒಪ್ಪಿಕೊಳ್ಳುತ್ತಿರಾ ಎಂದು ಕೇಳಿದಾಗ ಸ್ನೇಹಿತ್ ಅವರ ತಾಯಿ ಹೇಳಿದ್ದೇನು ಗೊತ್ತಾ? ಕೇಳಿದ್ರೆ ಶಾಕ್ ಆಗುವುದು ಪಕ್ಕಾ!!

ಬಿಗ್ ಬಾಸ್ ನ ಪ್ರತಿ ಸೀಸನ್ ನಲ್ಲಿಯು ಒಂದೊಂದು ಜೋಡಿಯು ಇರುತ್ತದೆ. ಅದಲ್ಲದೇ ಜಗಳ, ಕೂಗಾಟದ ನಡುವೆಯು ಜೋಡಿಯದ್ದು ಸದ್ದು ಜೋರಾಗಿರುತ್ತದೆ. ಅದೇ ರೀತಿಯಾಗಿ ಬಾರಿಯ ಬಿಗ್’ ಮನೆಯಲ್ಲಿ (Bigg Boss House) ಮತ್ತೊಂದು ಮುದ್ದಾದ ಜೋಡಿಯಾಗಿ ನಮ್ರತಾ ಗೌಡ (Namratha Gowda) ಮತ್ತು ಸ್ನೇಹಿತ್ (Snehith Gowda) ಹೈಲೆಟ್ ಆಗಿದ್ದರು. ಆದರೆ ಬಿಗ್ ಬಾಸ್ ಮನೆಯಲ್ಲಿ ನಮ್ರತಾರವರ ಜೊತೆಗೆ ತಮ್ಮ ಮನಸ್ಸಿನ ಭಾವನೆಯನ್ನು ಹೇಳಿಕೊಂಡಿದ್ದರು.

ಅದರೆ ನಮ್ರತಾ ಕೂಡ ಟೈಮ್ ಬೇಕು ಎಂದು ಹೇಳಿದ್ದರು. ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ನಮ್ರತಾರವರು ಸ್ನೇಹಿತ್ ಗೌಡರವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದೀಗ ಮೊದಲ ಬಾರಿಗೆ ಸ್ನೇಹಿತ್ ಗೌಡರವರ ತಾಯಿ ಬಿಗ್ ಬಾಸ್ ಮನೆಯ ಸ್ಪರ್ಧಿ ನಮ್ರತಾ ಗೌಡರವರ ಬಗ್ಗೆ ಮಾತನಾಡಿದ್ದಾರೆ.ಅರವತ್ತು ದಿನಗಳ ಸುದೀರ್ಘ ಪ್ರಯಾಣ ಮುಗಿಸಿಕೊಂಡು ಸ್ನೇಹಿತ್ ಗೌಡ ಹನ್ನೊಂದನೇ ವಾರಕ್ಕೆ ಔಟ್ ಆಗಿದ್ದರು.

ಈ ಸೀಸನ್‌ನ ಮೊದಲ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದ ಸ್ನೇಹಿತ್‌, ಈ ಸೀಸನ್‌ ಕೊನೆಯ ಕ್ಯಾಪ್ಟನ್ ಆಗಿಯೇ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿದ್ದರು. ಅದಲ್ಲದೇ ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಸ್ನೇಹಿತ್ ಗೌಡ ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದರು. ನಮ್ರತಾರವರ ಮೇಲಿನ ಫೀಲಿಂಗ್ ಬಗ್ಗೆ ಮಾತನಾಡಿದ್ದು, ನಮ್ರತಾ ಬಗ್ಗೆ ಏನೇನೋ ಹೇಳಿದೇನೋ ಅದೆಲ್ಲವೂ ಜೆನ್ಯೂನ್. ನನಗೆ ಅವರ ಬಗ್ಗೆ ಫೀಲಿಂಗ್ ಇತ್ತು.

ಅದನ್ನು ಹೇಳಿಕೊಂಡಿದ್ದೇನೆ ಕೂಡ. ಅದು ಎಲ್ಲರಿಗೂ ಗೊತ್ತು. ಅದನ್ನು ನಾನು ಕ್ಯಾಮರಾ ಮೊಮೆಂಟ್‌ಗೊಸ್ಕರ ಹೇಳಿದ್ದು ಅಲ್ಲವೇ ಅಲ್ಲ. ಅದು ಅವರಿಗೂ ಗೊತ್ತು.” ಎಂದಿದ್ದರು. ಆದರೆ ಇದೀಗ ಖಾಸಗಿ ಸಂದರ್ಶನವೊಂದರಲ್ಲಿ ಸ್ನೇಹಿತ್ ಅವರ ತಾಯಿ (Snehith Mother) ನಮ್ರತಾರವರ ಬಗ್ಗೆ ಮಾತನಾಡಿದ್ದಾರೆ. ನಮ್ರತಾ ಬಗ್ಗೆ ನನಗೆ ಒಳ್ಳೆಯ ಅನಿಸಿಕೆನೇ ಇದೆ.

ನಮ್ಮ ಮಗ ಇಷ್ಟ ಪಟ್ರೆ ಓಕೆ, ನಮ್ದು ಏನಿಲ್ಲ. ನಾನು ಇಷ್ಟೆಲ್ಲಾ ಕಷ್ಟ ಪಟ್ಟಿದ್ದು ಅವನಿಗೋಸ್ಕರ. ಎಲ್ಲಾ ಅಪ್ಪ ಅಮ್ಮನು ಮಕ್ಕಳು ಚೆನ್ನಾಗಿ ಇರ್ಲಿ ಅಂತಾನೆ ಮಾಡುವುದು ಅಲ್ವಾ. ಅವನಿಗೆ ಇಷ್ಟ ಆದ್ರೆ ನಮಗೂ ಓಕೆ ಎಂದಿದ್ದಾರೆ. ಒಟ್ಟಿನಲ್ಲಿ ನಟ ಸ್ನೇಹಿತ್ ಗೌಡರ ತಾಯಿ ನಮ್ರತಾರವರ ಬಗ್ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತಿದೆ.

Leave a Reply

Your email address will not be published. Required fields are marked *