ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ವಿನಯ್ ಹೆಂಡತಿಯನ್ನು ಭೇಟಿಯಾದ ಸ್ನೇಹಿತ್ ಗೌಡ!! ವಿನಯ್ ಮಡದಿಗೆ ಏನು ಹೇಳಿದ್ರು ಗೊತ್ತಾ? ಇಲ್ಲಿದೆ ನೋಡಿ..

ಬಿಗ್‌ಬಾಸ್‌ ಕನ್ನಡ ಸೀಸನ್‌ 10(BBK Season 10) 11ನೇ ವಾರಕ್ಕೆ ಕಳೆಯುತ್ತಾ ಬಂದಿದೆ. ಕಳೆದ ವಾರ ಸ್ನೇಹಿತ್‌ ಗೌಡ (Snehit Gowda) ಬಿಗ್‌ಬಾಸ್‌ ಮನೆಯಿಂದ ಆಚೆ ಬಂದಿದ್ದಾರೆ. 10ನೇ ವಾರ ಸ್ನೇಹಿತ್‌ ಗೌಡ ದೊಡ್ಮನೆಯಿಂದ ಹೊರಗೆ ಬಂದಿದ್ದಾರೆ. ಆದರೆ ಬಿಗ್ ಬಾಸ್ ಮನೆಯಲ್ಲಿದ್ದಾಗ ಸ್ನೇಹಿತ್ ಗೌಡ, ವಿನಯ್ (Vinay) , ನಮ್ರತಾ (Namratha) ಹಾಗೂ ಮೈಕಲ್ (Maikal) ಜೊತೆ ಗ್ರೂಪ್ ಮಾಡಿಕೊಂಡಿದ್ದರು.

ಅದಲ್ಲದೇ ತನಗಾಗಿ ಆಟ ಆಡಿದ್ದು ಕಡಿಮೆಯೇ. ಮೊದಲ ವಾರದಲ್ಲಿಯೇ ಕ್ಯಾಪ್ಟನ್ ಆಗಿದ್ದ ಸ್ನೇಹಿತ್ ಗೌಡ ಆದಾದ ಒಂದೆರಡು ವಾರಗಳ ಬಳಿಕ ಸ್ನೇಹಿತ್ ಇದ್ದಾರೆಯೋ ಇಲ್ಲವೋ ಎನ್ನುವ ಮಟ್ಟಿಗೆ ಸೈಲೆಂಟ್ ಆಗಿ ಬಿಟ್ಟರು. ಆದರೆ ಹೇಗೋ ಹನ್ನೊಂದು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದು, ಕಳೆದ ವಾರವಷ್ಟೇ ಔಟ್ ಆಗಿದ್ದಾರೆ. ಎಲಿಮಿನೇಟ್ ಆದ ವಾರವು ಕ್ಯಾಪ್ಟನ್ ಅಗಿಯೇ ದೊಡ್ಮನೆಯಿಂದ ಹೊರಗೆ ಬಂದಿದ್ದಾರೆ.

ಸದ್ಯಕ್ಕೆ ಖಾಸಗಿ ಸುದ್ದಿ ವಾಹಿನಿಗಳಲ್ಲಿ ಸಂದರ್ಶನ ನೀಡುತ್ತಿರುವ ಸ್ನೇಹಿತ್ ಗೌಡ ವಿನಯ್ ಅವರ ಪತ್ನಿ ಅಕ್ಷತಾ (Vinay wife Akshatha) ರವರನ್ನು ನ್ನು ಭೇಟಿಯಾದೆ ಎಂದಿದ್ದಾರೆ. ಖಾಸಗಿ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿರುವ ಸ್ನೇಹಿತ್ ಗೌಡರವರು, “ಮನೆಯಿಂದ ಹೊರಗಡೆ ಬಂದ ತಕ್ಷಣ ನಾನು ಫಸ್ಟ್ ಮೀಟ್ ಆಗ್ಬೇಕು, ಮಾತಾಡ್ತಬೇಕು ಅಂತ ಇದ್ದಿದ್ದು ಅಕ್ಷತಾ ಅವರತ್ರ. ನಾನು ಅಕ್ಷತಾ ಅವರನ್ನು ಮೀಟ್ ಮಾಡಿ ಮಾತಾಡಿದೆ. ನಾನು ಅವರಿಗೆ ಹೇಳ್ಬೇಕಾಗಿತ್ತು.

ವಿನಯ್ ಅವರು ಹೊರಗಡೆ ಏನು ಕೆಟ್ಟ ಕೆಲಸ ಮಾಡ್ತಾ ಇಲ್ಲ. ನೀವು ಏನು ಅಂತ ನಿಮ್ಮ ಗಂಡನನ್ನು ಅಂದುಕೊಂಡಿದ್ದಿರೋ ಅದೇ ವಿನಯ್ ನನ್ನು ನಾನು ನೋಡಿದ್ದೇನೆ. ನೀವು ನೋಡಿರೋ ವಿನಯ್ ನನ್ನು ನಾನು ನೋಡಿರೋದು. ಅದಕ್ಕೆ ನಾನು ಅವರಿಗೂ ಫಸ್ಟ್ ಯಿಂದ ಲಾಸ್ಟ್ ತನಕ ಪ್ರಾಮಾಣಿಕನಾಗಿದ್ದೆ. ಇನ್ನು ಒಂದಷ್ಟು ದಿನ ಮನೆಯಲ್ಲಿ ಇರ್ತಾ ಇದ್ರೆ ನಾನು ಲಾಯಲ್ ಆಗಿ ಇರ್ತಾ ಇದ್ದೆ. ಅವರು ಲಾಯಲ್ ಆಗಿ ಇರ್ತಾ ಇರೋರು.

ನೀವೇನು ತಲೆ ಕೆಡಿಸಿಕೊಳ್ಳಬೇಡಿ..ಅವರು ಪ್ರತಿ ದಿನ ಪ್ರತಿವಾರ ಫೈಟ್ ಮಾಡ್ತಾ ಇದ್ದಾರೆ, ಅವರು ಫೈಟರ್. ನೀವು ಕೂಡ ಪ್ರತಿದಿನ ಫೈಟ್ ಮಾಡ್ತಾ ಇದ್ದೀರಾ ನಿಮ್ಮ ಫೈಟ್ ಗೂ ಒಂದು ವ್ಯಾಲ್ಯೂ ಸಿಗುತ್ತೆ. ಇನ್ನು ಸ್ವಲ್ಪ ದೂರ ಇರುವುದು ಅಷ್ಟು ದೂರನೇ ಬಂದಿದ್ದೀರಾ, ಇನ್ನು ಇಷ್ಟು ದೂರ ಬನ್ನಿ” ಎಂದಿದ್ದಾರೆ.

Leave a Reply

Your email address will not be published. Required fields are marked *