ಈ ದೇವಸ್ಥಾನಕ್ಕೆ ರಾತ್ರಿ ಹೋಗಿ ಹೆಂಗಸರು ಈ ರೀತಿ ಮಾಡಿದರೆ ಸಂತಾನ ಪ್ರಾಪ್ತಿಯಾಗುತ್ತೆ. ಈ ದೇವಸ್ಥಾನಕ್ಕೆ ಹೆಂಗಸರು ಗುಂಪು ಗುಂಪಾಗಿ ಹೋಗಿ ರಾತ್ರಿ ಏನು ಮಾಡುತ್ತಾರೆ ಗೊತ್ತಾ ಇಲ್ಲಿದೆ ನೋಡಿ!!

Simsa mata story : ಹಿಮಾಚಲ ಪ್ರದೇಶದ ಲಡ್ ಭರೋಲ್ ಭಾಗಕ್ಕೆ ಸೇರಿದ ‘ಸಿಂಸಾ ಶಾರದಾ ಮಾತಾ ಮಂದಿರ’ವು ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಗೊಳಿಸುವುದರಲ್ಲಿ ಪ್ರಖ್ಯಾತಗೊಂಡಿದೆ. ಹಲವಾರು ವರ್ಷಗಳಿಂದ ಮಕ್ಕಳಿಲ್ಲವೆಂಬ ಕೊರಗಿನಿಂದ ಬಳಲುತ್ತಿರುವ ಮಹಿಳೆಯರು ಈ ದೇವಿಯ ಸನ್ನಿಧಾನಕ್ಕೆ ಬಂದು ದೇವಸ್ಥಾನದ ಆವರಣದಲ್ಲಿ ಮಲಗಿದರೆ ಸಂತಾನ ಪ್ರಾಪ್ತವಾಗುತ್ತದೆ ಎಂಬ ನಂಬಿಕೆಯಿದೆ.

ನವಯುಗದ stressfull ದಿನಚರಿಯಿಂದಾಗಿ ಹಲವಾರು ಮಹಿಳೆಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ಎಡವಿರುತ್ತಾರೆ. ಆಗಿನ ಕಾಲಕ್ಕಿಂತಲೂ ಇತ್ತೀಚಿನ ದಿನಗಳಲ್ಲಿ ಸರಿಯಾದ ವಯಸ್ಸಿನಲ್ಲಿಯೇ ವಿವಾಹವಾದ, ತಡ ಅಥವಾ ಮುಂಚಿತವಾಗಿ ಮದುವೆಯಾದ ಮಹಿಳೆಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹಲವಾರು ವರ್ಷಗಳು ಕಳೆದರೂ ಮಕ್ಕಳನ್ನು ಪಡೆಯದೆ ಕೊರಗುತ್ತಿರುತ್ತಾರೆ.

ದಿನನಿತ್ಯದ ಆಹಾರ ಸೇವನೆಯ ಸಮಯವು ವಿಭಿನ್ನವಾಗಿರುತ್ತದೆ; ಉದ್ಯೋಗ ಮತ್ತು ಮನೆ ಕೆಲಸ ಎರಡನ್ನು ನಿಭಾಯಿಸುವಾಗ ಖಿನ್ನತೆಗೊಳಾಗುತ್ತಾರೆ; ನಿದ್ದೆಯೂ ಸಾಕಷ್ಟು ಪ್ರಮಾಣದಲ್ಲಿ ಆಗಿರುವುದಿಲ್ಲ; ತಡವಾಗಿ ಮಲಗಿ ತಡವಾಗಿ ಏಳುವುದು; ದೇಹದಲ್ಲಿ ಪೌಷ್ಟಿಕಾಂಶಗಳ ಕೊರತೆ… ಹೀಗೆ ನಾನ ವಿಧದ ಅನುಸರಣೆಯಿಂದಾಗಿ ಮಹಿಳೆಯರಲ್ಲಿ ಮಕ್ಕಳಾಗದಿರುವ ಸಮಸ್ಯೆಯು ಉದ್ಭವವಾಗಿರುತ್ತದೆ.

ಸಿಮ್ಸಾದೇವಿಯು ಸಂತಾನ ಧಾತ್ರಿ ಎಂದೆ ಪ್ರಖ್ಯಾತಿಯಾಗಿದ್ದಾಳೆ. ದೇಶದ ನಾನಾ ಭಾಗಗಳಿಂದ ಮಕ್ಕಳಾಗದ ಮಹಿಳೆಯರು ಬಂದು ದೇವಸ್ಥಾನದ ನೆಲದ ಮೇಲೆ ಒಂದು ರಾತ್ರಿ ಮಲಗಿ ಹೋಗುತ್ತಾರೆ. ದೇಶದ ಬೇರೆ ಬೇರೆ ಪ್ರದೇಶಗಳಿಂದ ಬಂದು ಹೆಂಗಸರು ಗುಂಪು ಗುಂಪಾಗಿ ಒಟ್ಟಿಗೆ ಮಲಗುತ್ತಾರೆ. ದೇವರ ಸನ್ನಿಧಿಯಲ್ಲಿ ಎಲ್ಲರೂ ಒಟ್ಟಿಗೆ ಮಲಗುತ್ತಾರೆ.

ಮಲಗಿದ ಹೆಂಗಸರಿಗೆ ಕನಸಿನಲ್ಲಿ ಬರುವ ಆ ಒಂದು ಶಕ್ತಿಯೇ ಇವರಿಗೆ ಸಂತಾನ ಪ್ರಾಪ್ತಿ ಸಿಗುವ ಹಾಗೆ ಮಾಡುತ್ತೆ. .ಮಲಗಿದಾಗ ದೇವಿಯು ಕನಸಿನಲ್ಲಿ ಯಾವುದಾದರೂ ಒಂದು ರೂಪವನ್ನು ತಾಳಿ ಬಂದು ಮಕ್ಕಳಾಗಲಿ ಎಂದು ಹಾರೈಸಿ ಹೋಗುತ್ತಾಳೆ ಎಂಬ ನಂಬಿಕೆ ಇದೆ. ಅಷ್ಟೇ ಎಲ್ಲದೆ ಹುಟ್ಟುವ ಮಗು ಗಂಡೋ ಅಥವಾ ಹೆಣ್ಣೋ ಎಂಬುದನ್ನು ಕೂಡ ಮುಂಚಿತವಾಗಿಯೇ ತಿಳಿಯಬಹುದಂತೆ.

ದೇವಿಯು ಆಶೀರ್ವಾದದೊಂದಿಗೆ ಹಣ್ಣು ಅಥವಾ ತರಕಾರಿಯನ್ನು ನೀಡುತ್ತಾಳಂತೆ, ದೇವಿಯು ಕನಸಿನಲ್ಲಿ ಬಂದು ಪೇರಲೆ ಹಣ್ಣನ್ನು ನೀಡಿದರೆ ಹುಟ್ಟುವ ಮಗುವು ಗಂಡಾಗಿರುತ್ತದೆ ಮತ್ತು ಬೆಂಡೆಕಾಯಿಯನ್ನು ನೀಡಿದರೆ ಹುಟ್ಟುವ ಮಗುವು ಹೆಣ್ಣಾಗುತ್ತದೆ ಎಂಬ ನಂಬಿಕೆ ಇದೆ.

ಮಲಗಿರುವ ಅನೇಕ ಮಹಿಳೆಯರಲ್ಲಿ ದೇವಿಯು ಕಾಣುವುದಿಲ್ಲ. ಇದರ ಅರ್ಥ ಅವರಿಗೆ ಸದ್ಯ ಸಂತಾನ ಭಾಗ್ಯವಿಲ್ಲ ಎಂಬುದಂತೆ. ದೇವಿಯು ಕನಸಲ್ಲಿ ಬರಲಿಲ್ಲವೆಂಬ ಕಾರಣಕ್ಕಾಗಿ ಮಹಿಳೆಯು ಮತ್ತೊಮ್ಮೆ ನೆಲದಲ್ಲಿ ಮಲಗಿದರೆ ಆ ಮಹಿಳೆಯ ಮೈ ಮೇಲೆ ಕೆಂಪು ಬಣ್ಣದ ಗುಳ್ಳೆಗಳೆದ್ದು ತುರಿಕೆ ಆರಂಭವಾಗುತ್ತದೆ ಎಂಬ ನಂಬಿಕೆಯೂ ಇದೆ.

Leave a Reply

Your email address will not be published. Required fields are marked *