ಪ್ಯಾರಸಿಟಮಾಲ್ ಹೆಚ್ಚು ಸೇವನೆ ಮಾಡುವವರು ಹುಷಾರ್!! ಪ್ಯಾರಸಿಟಮಾಲ್ ಹೆಚ್ಚು ತಿಂದರೆ ಎನ್ ಆಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ!

ಇತ್ತೀಚೆಗಿನ ದಿನಗಳಲ್ಲಿ ಒತ್ತಡದ ಕೆಲಸ (Stresfull work) ಹಾಗೂ ವಿಶ್ರಾಂತಿವಿಲ್ಲದೇ ದುಡಿಯುವ (Restless Work) ಕಾರಣ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ. ಹೀಗಾಗಿ ಯಾವಾಗಲೂ ಕೂಡ ಆರೋಗ್ಯದಲ್ಲಿ ಅಲ್ಪ ಸ್ವಲ್ಪ ಏರುಪೇರುಗಳಾಗುತ್ತದೆ. ಅದರಲ್ಲಿಯು ಆರೋಗ್ಯ (Health) ಕೈಕೊಟ್ಟರೆ ಮನೆ ಮದ್ದು ಅಥವಾ ಮೆಡಿಕಲ್ ನಲ್ಲಿ ಸಿಗುವ ಮಾತ್ರೆಗಳನ್ನು ಅವಲಂಬಿಸಿರುವವರೇ ಹೆಚ್ಚು.

ಕೆಲವೊಮ್ಮೆ ನಮ್ಮ ಈ ಅಭ್ಯಾಸವೇ ಆರೋಗ್ಯಕ್ಕೆ ದೊಡ್ಡ ಪೆಟ್ಟನ್ನು ನೀಡುತ್ತದೆ. ಹೌದು, ಸ್ವಲ್ಪ ಮೈ ಬಿಸಿ ಇದ್ದರೆ, ಶೀತವಿದ್ದರೆ ಹೆಚ್ಚಿನವರು ಈ ಪ್ಯಾರಸಿಟಮಾಲ್ ಮಾತ್ರೆ (Paracetamol Tablet) ಯನ್ನೇ ತೆಗೆದುಕೊಳ್ಳುತ್ತಾರೆ. ಈ ಮಾತ್ರೆಯನ್ನು ಸೇವನೆ ಮಾಡುವುದರಿಂದ ಮೈ ಬಿಸಿ ಹಾಗೂ ಶೀತವಿರುವುದರಿಂದ ಸ್ವಲ್ಪ ಮುಕ್ತಿ ಸಿಗುತ್ತದೆ ಎನ್ನುವುದನ್ನು ನಂಬಿರುತ್ತಾರೆ. ಹೀಗಾಗಿ ಪ್ಯಾರಸಿಟಮಾಲ್‌ ಮಾತ್ರೆಯನ್ನು ಸ್ಟಾಕ್ ಇಟ್ಟಿರುವವರು ಇದ್ದಾರೆ.

ಆದರೆ ಆರೋಗ್ಯ ಸ್ವಲ್ಪ ಕೈಕೊಟ್ಟರು ಈ ಪ್ಯಾರಸಿಟಮಾಲ್‌ ಮಾತ್ರೆಯನ್ನು ಸಂಪೂರ್ಣವಾಗಿ ಅವಲಂಬಿಸಿರುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ದಿನ ಬಿಡದೇ ಈ ಪ್ಯಾರಸಿಟಮಾಲ್ ಮಾತ್ರೆಯನ್ನು ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಕೆ-ಟ್ಟ ಪರಿಣಾಮಗಳು ಬೀರಬಹುದು. ಅದಲ್ಲದೇ ಈ ಮಾತ್ರೆಯ ಸೇವನೆಯಿಂದ ಮೂತ್ರಪಿಂಡ ಮತ್ತು ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಹೆಚ್ಚು.

ವಾಂತಿ, ಮಾನಸಿಕ ಕಿರಿಕಿರಿ, ಮೂತ್ರ ವಿಸರ್ಜನೆಯ ಕೊರತೆ ಇನ್ನಿತ್ತರ ಸಮಸ್ಯೆಗಳು ಉಂಟಾಗಬಹುದು. ಒಂದು ವೇಳೆ ಜ್ವರವಿದ್ದು ಅನಿವಾರ್ಯವೆನಿಸಿದಾಗ ದಿನಕ್ಕೆ 2000 ಮಿಗ್ರಾಂ ವರೆಗಿನ ಡೋಸ್ ಮಾತ್ರೆಯನ್ನು ಸೇವನೆ ಮಾಡುವುದರಲ್ಲಿ ಯಾವುದೇ ತೊಂದರೆಯಿಲ್ಲ. ಆದರೆ ಅದಕ್ಕೂ ಮೀರಿದ ಡೋಸ್ ನ ಮಾತ್ರೆ ಸೇವನೆ ಮಾಡಿದರೆ ಪ್ರಾ-ಣಕ್ಕೆ ಅಪಾಯವಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಹೀಗಾಗಿ ಆರೋಗ್ಯ ಸಮಸ್ಯೆ (Health Problem) ಎಂದಾಗ ವೈದ್ಯರನ್ನು ಭೇಟಿಯಾಗಿ ಅವರು ನೀಡುವ ಮಾತ್ರೆಗಳನ್ನು ಸೇವಿಸಿವುದು ಒಳ್ಳೆಯದು. ಮನೆಯಲ್ಲಿಯೇ ಮೆಡಿಸಿನ್ ಇದೆ ಎಂದು ಪ್ಯಾರಸಿಟಮಾಲ್‌ ಮಾತ್ರೆಗಳನ್ನು ಸೇವನೆ ಮಾಡುವ ಮುಂದೆ ಎದುರಾಗುವ ಸಮಸ್ಯೆಗಳ ಬಗ್ಗೆ ಒಮ್ಮೆ ಯೋಚಿಸುವುದು ಆರೋಗ್ಯದ ದೃಷ್ಟಿಯಿಂದಲೂ ಒಳಿತು.

Leave a Reply

Your email address will not be published. Required fields are marked *