ಬೈಕ್ ಮೇಲಿದ್ದ ಬಾಕ್ಸ್ ನಲ್ಲಿ ನೋಟಿನ ಕಂತೆ, ದುಡ್ಡು ನೋಡಿದ ಯುವಕನು ಮಾಡಿದ್ದೇನು ಗೊತ್ತಾ? 5 ದಿನದ ನಂತರ ಗೊತ್ತಾಯಿತು ಅಸಲಿ ಕಥೆ!!

ಹಣ ಕಂಡರೆ ಹೆ-ಣ ಕೂಡ ಬಾಯಿ ಬಿಡುತ್ತದೆ ಎನ್ನುವುದು ರೂಢಿ ಮಾತು. ಅದೇ ಹಣ ಕಂಡಾಗ ಹೆ-ಣವೇ ಬಾಯಿಬಿಡುವಾಗ ಇನ್ನು ಜೀವಂತವಾಗಿರುವ ಮನುಷ್ಯನು ಯಾವ ಲೆಕ್ಕ ಹೇಳಿ?. ದುಡ್ಡಿನ ಹಿಂದೆ ಬಿದ್ದು ಜೀವನವನ್ನೇ ಹಾಳು ಮಾಡಿಕೊಂಡವರ ಸಂಖ್ಯೆಯೇನು ಕಡಿಮೆಯಿಲ್ಲ ಬಿಡಿ. ಹೀಗಾಗಿ ಮನುಷ್ಯನು ಹಣಕ್ಕೆ ಮರಳು ಆಗುವಷ್ಟು ಬೇರೆ ಯಾವುದಕ್ಕೂ ಮರುಳು ಆಗುವುದಿಲ್ಲ.

ಇಲ್ಲೊಬ್ಬನಿಗೆ ಹತ್ತೇ ಹತ್ತು ಸೆಕೆಂಡ್ ನಲ್ಲಿ ಸಿಕ್ಕ ಹಣದಿಂದ ಲಕ್ಷಾಧೀಶ್ವರನಾಗಿದ್ದಾನೆ. ಅದೇಗೆ ಎನ್ನುವುದಕ್ಕೆ ಈ ಸ್ಟೋರಿಯನ್ನು ಓದಿ.ಚಂದ್ರಲೇಔಟ್ (Chandra Layout) ನಿವಾಸಿ ಪ್ರಮೋದ್ (Pramod) ಎನ್ನುವ ವ್ಯಕ್ತಿಯೂ ಸೈಟ್ ಖರೀದಿಸಲು (Site Purchase) 94 ಲಕ್ಷ ರೂ. ಕೂಡಿಟ್ಟಿದ್ದು, ಆ ಹಣದ ಲೆಕ್ಕಾಚಾರ ಮಾಡಲು ಸ್ನೇಹಿತನ ಅಂಗಡಿಗೆ ತೆಗೆದುಕೊಂಡು ಹೋಗಲು ಸಿದ್ಧವಾಗಿದ್ದಾನೆ.

ಆ ಬಳಿಕ ವಕೀಲರ ಕಚೇರಿಗೆ ತೆರಳಲುಲು ಪ್ಲಾನ್ (Plan) ಮಾಡಿಕೊಂಡಿದ್ದಾನೆ. ಹೀಗಾಗಿ ಮನೆಯಿಂದ ಬ್ಯಾಗ್ ಮತ್ತು ಬಾಕ್ಸ್​ನಲ್ಲಿ ಹಣವನ್ನು ಇಟ್ಟುಕೊಂಡು ಈ ಪ್ರಮೋದ್ ಎನ್ನುವ ವ್ಯಕ್ತಿಯೂ ಹೊರಟಿದ್ದಾನೆ.ಈ ಪ್ರಮೋದ್ ಎನ್ನುವ ವ್ಯಕ್ತಿಯೂ ಕಾರಿನ ಬಾಗಿಲು ಓಪನ್ ಮಾಡುವ ಸಲುವಾಗಿ ಕೈಯಲ್ಲಿದ್ದ ಹಣದ ಬಾಕ್ಸ್ ಅನ್ನು ಅಲ್ಲೇ ಇದ್ದ ಆಕ್ಟಿವಾ ಬೈಕ್ (Active Bike) ಮೇಲೆ ಇಟ್ಟಿದ್ದಾನೆ. ದಾಖಲಾತಿಗಳಿದ್ದ ಬ್ಯಾಗ್ ಅನ್ನು ಕಾರಿನಲ್ಲಿಟ್ಟು ಹಾಗೆ ಹೊರಟಿದ್ದಾನೆ.

ಆತನಿಗೆ ಬೈಕ್ ಮೇಲೆ ಇದ್ದ ದುಡ್ಡಿನ ಬಾಕ್ಸ್ ನೆನಪೇ ಇರಲಿಲ್ಲ. ಹೀಗಿರುವಾಗ ಆಕ್ಟಿವಾ ಬೈಕ್ ಮಾಲೀಕ ವರುಣ್ ಗೌಡ (Varun Gowda) ನು ಬಳಿ ಬಂದು ನೋಡಿದಾಗ ಕಾರಿನ ಮೇಲೆ ಬಾಕ್ಸ್ ಇರುವುದು ತಿಳಿದಿದೆ.ಈ ಬಾಕ್ಸ್ ಓಪನ್ ಮಾಡುತ್ತಿದ್ದಂತೆ ನೋಟಿನ ಕಂತೆಯನ್ನು ನೋಡಿದ್ದು ಶಾ-ಕ್ ಆಗಿದ್ದಾನೆ. ಹಣವನ್ನು ಪೊಲೀಸ್ ಸ್ಟೇಷನ್ ತೆರಳಿ ನೀಡುವ ಬದಲು ಹಣವನ್ನು ಇಟ್ಟುಕೊಂಡು ಈ ವರುಣ್ ಗೌಡ ಪ-ರಾರಿಯಾಗಿದ್ದಾನೆ.

ತನ್ನ ಶ್ರೀನಗರ (Shreenagara) ದ ಮನೆಯಲ್ಲಿ ಈ 94 ಲಕ್ಷ ರೂಪಾಯಿಯನ್ನು ಇಟ್ಟುಕೊಂಡಿದ್ದಾನೆ. ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಡಿಪಾಟ್​ಮೆಂಟ್​ (Bank Credit Card Department) ನಲ್ಲಿ ಕೆಲಸ ಮಾಡುತ್ತಿದ್ದ ಈತನಿಗೆ ಇಷ್ಟು ಹಣವನ್ನು ಏನು ಮಾಡಬೇಕು ಎನ್ನುವುದು ತೋಚದಾಗಿದೆ. ಕೊನೆಗೆ ಈ ದುಡ್ಡನ್ನು ಮನೆಯಲ್ಲಿಯೇ ಇಟ್ಟು ಸರಿಸುಮಾರು ಐದು ದಿನಗಳನ್ನು ಕಳೆದಿದ್ದಾನೆ.

ಆದರೆ ಹಣವನ್ನು ಬೈಕ್ ಮೇಲೆ ಇಟ್ಟಿದ್ದ ಪ್ರಮೋದ್ ಗೆ ಸ್ನೇಹಿತನ ಅಂಗಡಿ ಬಳಿ ತೆರಳಿದ ವೇಳೆಯಲ್ಲಿ ಹಣವನ್ನು ಇಟ್ಟಿದ್ದ ಬಾಕ್ಸ್ ನ ನೆನೆಪಾಗಿದೆ. ತಕ್ಷಣವೇ ಬೈಕ್ ಇದ್ದ ಸ್ಥಳಕ್ಕೆ ಬಂದ ಪ್ರಮೋದ್ ಗೆ ಬೈಕ್ ಹಾಗೂ ಹಣ ಎರಡು ಕೂಡ ಇರಲಿಲ್ಲ. ಆ ಕೂಡಲೇ ಚಂದ್ರ ಲೇಔಟ್ ಪೊಲೀಸ್ ಠಾಣೆ (Chandra Layout Police Station) ಗೆ ಬಂದು ದೂರು ದಾಖಲಿಸಿದ್ದಾನೆ. ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುಮಾರು 300ಕ್ಕೂ ಹೆಚ್ಚು ಕ್ಯಾಮೆರಾ ಪರಿಶೀಲಿಸಿದ್ದಾರೆ. ಈ ವೇಳೆಯಲ್ಲಿ ವರುಣ್ ಗೌಡರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕೊನೆಗೆ 94 ಲಕ್ಷ ರೂ. ಹಣವನ್ನು ವ-ಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ..

Leave a Reply

Your email address will not be published. Required fields are marked *