ರಾತ್ರಿಯ ವೇಳೆ ಮಾತ್ರ ತೆರೆದಿರುವ ಈ ದೇವಸ್ಥಾನಕ್ಕೆ ತೆರಳಿದರೆ ಜೀವನದ ಕಷ್ಟಗಳು ದೂರವಾಗುತ್ತವೆಯಂತೆ, ಈ ದೇವಸ್ಥಾನ ಇರುವುದು ಎಲ್ಲಿ ಗೊತ್ತಾ? ಇಲ್ಲಿದೆ ನೋಡಿ

ಭಾರತದಂತಹ ದೇಶದಲ್ಲಿ ಇತಿಹಾಸ ಪ್ರಸಿದ್ಧವಾದ ಹಲವು ದೇವಾಲಯ (Historical Temple)ಗಳಿವೆ. ಆದರೆ ಬಹುತೇಕರಿಗೆ ಶಕ್ತಿಯುತವಾಗಿರುವ ದೇವಾಲಯದ ಬಗ್ಗೆ ಅಷ್ಟಾಗಿ ಮಾಹಿತಿ ಇರುವುದಿಲ್ಲ. ಇದೀಗ ನಾವು ಹೇಳ ಹೊರಟಿರುವ ದೇವಾಲಯವೇ ಶ್ರೀ ಕಲಾದೇವಿ ದೇವಾಲಯ (Shree Kaladevi Temple). ಆದರೆ ಇಲ್ಲಿ ಮುಖ್ಯವಾಗಿ ಹಗಲಿನಲ್ಲಿ ಈ ದೇವಾಲಯವು ತೆರೆದಿರುವುದಿಲ್ಲ.

ರಾತ್ರಿ ಸಮಯದಲ್ಲಿ ಮಾತ್ರ ತೆರೆದಿರುವ ಈ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ಕೃಪೆಗೆ ಪಾತ್ರರಾದರೆ ಜೀವನದಲ್ಲಿ ಎದುರಾಗಿರುವ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ ಎನ್ನುವುದರ ನಂಬಿಕೆಯಿದೆ. ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

ಈ ದೇವಾಲಯವು ತಮಿಳುನಾಡಿನ ಮಧುರೈ ಜಿಲ್ಲೆ (Madhurai District) ಯಲ್ಲಿದ್ದು, ಕಲಾದೇವಿಯನ್ನು ಅತ್ಯಂತ ಶಕ್ತಿಶಾಲಿ ದೇವತೆ ಎನ್ನಲಾಗುತ್ತದೆ. ನಂಬಿ ಬಂದ ಭಕ್ತರನ್ನು ಸಲಹುವ ಈ ತಾಯಿಯೂ ಮನುಷ್ಯನ ಕೆಟ್ಟ ಕಾಲವನ್ನೂ ಒಳ್ಳೆಯ ಕಾಲವನ್ನಾಗಿ ಪರಿವರ್ತಿಸುವ ಶಕ್ತಿಯನ್ನು ಹೊಂದಿದ್ದಾಳೆ ಎನ್ನುವುದು ಇಲ್ಲಿಗೆ ಬರುವ ಭಕ್ತರ ನಂಬಿಕೆಯಾಗಿದೆ.

ತಮಿಳುನಾಡಿನ ಮಧುರೈನಲ್ಲಿರುವ ಈ ದೇವಸ್ಥಾನಕ್ಕೆ ತೆರಳಬೇಕಾದರೆ, ರಾಜಪಾಳ್ಯ (Rajyapalya)ಕ್ಕೆ ಹೋಗುವ ಬಸ್ಸಿನಲ್ಲಿ ಹೋಗಬೇಕು. ಅಲ್ಲಿ ಸುಪ್ಪಲಪುರಂ (Suppalapuram) ಮುಖ್ಯ ರಸ್ತೆ ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ಚಿಲ್ಲರ್ ಪಟ್ಟಿ (Chillar Patti) ಎಂಬ ಹಳ್ಳಿಗೆ ಹೋದರೆ ಅಲ್ಲಿ ಈ ದೇವಿಯ ದರ್ಶನವನ್ನು ಪಡೆಯಬಹುದು. ಬಸ್ಸಿನಿಂದ ಇಳಿದು ಆಟೋ ಮಾಡಿಸಿಕೊಂಡು ಈ ದೇವಾಲಯವನ್ನು ತಲುಪಬಹುದಾಗಿದೆ.

ಆದರೆ ಇಲ್ಲಿ ಹಗಲಿನಲ್ಲಿ ದೇವಸ್ಥಾನವು ತೆರೆದಿರದ ಕಾರಣ ಸೂರ್ಯಸ್ತದ ಬಳಿಕ ತಲುಪಿದರೆ ದೇವಿಯ ದರ್ಶನವಾಗುತ್ತದೆ. ದೇವಾಲಯವು ಸೂರ್ಯೋದಯಕ್ಕೆ ಮುಂಚೆಯೇ ರಾತ್ರಿಯಿಡೀ ತೆರೆದಿದ್ದು, ಆದರೆ ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ದೇವಾಲಯಕ್ಕೆ ಹೆಚ್ಚಾಗಿ ಭಕ್ತರು ಬರುತ್ತಾರೆ. ದೋಷಪರಿಹಾರಕ್ಕಾಗಿ ಈ ದೇವಾಲಯಕ್ಕೆ ಬಂದರೆ ಕೆಟ್ಟ ಸಮಯವು ಒಳ್ಳೆಯ ಸಮಯವಾಗಿ ಬದಲಾಗುತ್ತದೆ ಎನ್ನುವುದು ಭಕ್ತಾಧಿಗಳ ನಂಬಿಕೆಯಾಗಿದೆ.

ದೋಷಪರಿಹಾರಕ್ಕಾಗಿ ಈ ದೇವಾಲಯಕ್ಕೆ ಹೋಗಿ ಮತ್ತು ಈ ಅಂಬಾಲವನ್ನು ಎಡದಿಂದ ಬಲಕ್ಕೆ 11 ಬಾರಿ ಪ್ರದಕ್ಷಿಣೆ ಮಾಡಬೇಕು. ಆ ಬಳಿಕ ಬಲದಿಂದ ಎಡಕ್ಕೆ 11 ಬಾರಿ ಪ್ರದಕ್ಷಿಣೆ ಹಾಕಬೇಕು. ರಾತ್ರಿ ಈ ಅಂಬಲಕ್ಕೆ ವಿಶೇಷ ಪೂಜೆ, ಅಭಿಷೇಕಗಳು ನಡೆಯುತ್ತವೆ. ಇನ್ನು ಈ ಅಂಬಾಲಿಗೆ 11 ತುಪ್ಪದ ದೀಪಗಳನ್ನು ಹಚ್ಚಿ ಮತ್ತು ಅಂಬಾಲ ಮುಂದೆ ಕುಳಿತು 11 ನಿಮಿಷಗಳ ಕಾಲ ಕಲಾದೇವಿಗೆ ಪ್ರಾರ್ಥನೆಯನ್ನು ಸಲ್ಲಿಸಬೇಕು. ಹೀಗೆ ಮಾಡಿದರೆ ಜೀವನದ ಸಮಸ್ಯೆಗಳು ದೂರವಾಗುತ್ತವೆ. ಈಗಾಗಲೇ ಈ ದೇವಾಲಯಕ್ಕೆ ಬಂದು ದೇವಿಯ ಕೃಪೆಗೆ ಪಾತ್ರರಾಗಿ ಜೀವನದಲ್ಲಿ ಏಳಿಗೆ ಕಂಡ ಹಲವು ಉದಾಹರಣೆಗಳಿವೆ.

Leave a Reply

Your email address will not be published. Required fields are marked *