ಸಾನಿಯಾಗೆ ತಿಳಿಯದೇ ಶೋಯೆಬ್‌ ಮೂರನೇ ವಿವಾಹವಾದ್ರ, ಅಸಲಿ ಸತ್ಯ ಏನು ಗೊತ್ತಾ?

ಮದುವೆ ಎಂಬ ಬಂಧ ಸ್ವರ್ಗದಲ್ಲಿ ನಿಶ್ಚಯ ಆಗುತ್ತದೆ ಎಂಬ ಮಾತಿದೆ ಅದೇ ರೀತಿ ಮದುವೆ ಇಂಥವರ ಜೊತೆಲೆ ಆಗಬೇಕು ಎಂದು ಅಂದುಕೊಂಡರು ಅನೇಕರಿಗೆ ಆ ಜೋಡಿ ಮಿಸ್ ಮ್ಯಾಚ್ ಆಗುವುದನ್ನು ಸಹ ನಾವು ನೋಡುತ್ತೇವೆ. ಸಿನೆಮಾ ತಾರೆಯರು, ರಾಜಕಾರಣಿಗಳು, ಕಲಾವಿದರು, ಕ್ರೀಡಾ ಪಟುಗಳು ಮದುವೆಯಾಗುವಾಗ ಅವರ ಪ್ರೊಫೇಶನಲ್ ಗೆ ತಕ್ಕಂತವರನ್ನೇ ನೋಡಿ ಮದುವೆ ಆಗುತ್ತಾರೆ.

ಅದೇ ರೀತಿ ಮದುವೆ ಆದ ಅನೇಕರು ಜೊತೆಗೆ ಜೀವನ ಸಾಗಿಲಸಾಗದೇ ವಿ-ಚ್ಛೇದನ ನೀಡಿ ದೂರಾಗುವ ಅನೇಕ ಉದಾಹರಣೆಯನ್ನು ಕಾಣಬಹುದು ಸದ್ಯ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ಅವರ ಬದುಕು ಕೂಡ ಇದಕ್ಕೆ ಹೊರತಾಗಿಲ್ಲ ಎನ್ನಬಹುದು. ಭಾರತೀಯ ಕ್ರೀಡಾ ಇತಿಹಾಸದಲ್ಲಿ ಸಾನಿಯಾ ಮಿರ್ಜಾ ಪ್ರಖ್ಯಾತ ಟೆನ್ನಿಸ್ ಆಟಗಾರ್ತಿ ಎಂಬುದು ನಮಗೆಲ್ಲ ತಿಳಿದ ವಿಚಾರವಾಗಿದೆ.

ಟೆನ್ನಿಸ್ ಆಟದಲ್ಲಿ ಭಾರತದ ಪರ ಆಟವಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಸಾನಿಯಾ ಮದುವೆಯಾಗಿದ್ದು ಮಾತ್ರ ಪಾಕ್ ಕ್ರಿಕೆಟಿಗ ಶೋಯೆಬ್‌ ಮಲ್ಲಿಕ್ (Shoyeb Maliik) ಅವರನ್ನು. ಅದು ಕೂಡ ಶೋಯೆಬ್‌ ಅವರಿಗೆ ಈಗಾಗಲೇ ಮದುವೆಯಾಗಿದ್ದು ಆಕೆಗೆ ವಿಚ್ಛೇದನ ನೀಡಿ ಸಾನಿಯಾ ಅವರನ್ನು ಎರಡನೇ ಪತ್ನಿಯಾಗಿ 2010ರಲ್ಲಿ ವಿವಾಹವಾದರು. ಬಳಿಕ ಇವರ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಐದು ವರ್ಷದ ಪುತ್ರ ಕೂಡ ಇದ್ದಾನೆ.

ಹಾಗಿದ್ದರೂ ಈ ಸಂಬಂಧ ಕೂಡ ಈಗ ದೂರವಾಗಿ ಶೋಯೆಬ್ ಅವರು ಮೂರನೇ ಮದುವೆ ಕೂಡ ಆಗಿದ್ದಾರೆ. ಈ ನಡುವೆ ಮೊದಲ ಪತ್ನಿಯಿಂದ ವಿ-ಚ್ಛೇದನ ಪಡೆಯದೇ ಎರಡನೇ ಮದ್ವೆ ಆದರೂ ಈಗ ಎರಡನೇ ಪತ್ನಿಗೂ ಮೋ-ಸ ಮಾಡಿ ಮೂರನೇ ಮದ್ವೆ ಆಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಸಾನಿಯಾಗೆ ಈ ಮದುವೆ ವಿಚಾರ ಮೊದಲೇ ಗೊತ್ತಿತ್ತಾ ಇಲ್ಲವೇ ಎಂಬ ಬಗ್ಗೆ ಹಲವು ಗಾ-ಸಿಪ್ ಸುದ್ದಿಗಳು ಹರಿದಾಡುತ್ತಿದ್ದು ಈ ಬಗ್ಗೆ ಕೆಲ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

2010ರಲ್ಲಿ ಶೋಯೆಬ್‌ ಹಾಗೂ ಸಾನಿಯಾ ಮದುವೆ ಆಗುವಾಗಲೂ ಇದೇ ತೆರೆನಾದ ಗೊಂದಲ ಉಂಟಾಗಿತ್ತು. ಆಗ ಅಲ್ಲಿ ಆಯುಷಾ ಸಿದ್ದಿಕ್ (Ayush Siddik) ಅವರ ಹೆಸರು ಮುಂಚುಣಿಗೆ ಬಂದಿತ್ತು. ಆಯುಷಾ ಅವರು ತಾನು ಮೊದಲ ಪತ್ನಿ ಎಂದು ಹೇಳಿದ್ದು ಮಾತ್ರವಲ್ಲದೇ ವಿ-ಚ್ಛೇದನ ನೀಡದೇ ಎರಡನೇ ಮದ್ವೆ ಆಗಿದ್ದರ ಬಗ್ಗೆ ಅನೇಕ ತಕರಾರು ತೆಗೆಯಲಾಗಿತ್ತು.

ಬಳಿಕ ಅವರಿಬ್ಬರ ನಡುವೆ ಅಧೀಕೃತ ವಿ-ಚ್ಚೇದನ ವಾಗಿ ಸಾನಿಯಾ ಪತ್ನಿ ಆಗಿದ್ದ ವಿಚಾರ ಮುನ್ನಲೆಗೆ ಬಂದಿತ್ತು. ಆದರೆ ಈಗ ಮೂರನೇ ಪತ್ನಿ ಬಂದ ಹಿನ್ನೆಲೆ ಸಾನಿಯಾಗೆ ಈ ವಿಚಾರ ತಿಳಿದಿರಲಿಲ್ಲ ಒಂದು ಎಂಬ ಗಾ-ಸಿಪ್ ಹರಿದಾಡುತ್ತಿದೆ. ಅವರಿಬ್ಬರ ನಡುವೆ ಸಣ್ಣ ಪುಟ್ಟ ವೈಮನಸ್ಸು ಬಂದಿತ್ತು ಆದರೆ ವಿಚ್ಚೇದನ ಪಡೆದಿರಲಿಲ್ಲ ಎಂಬ ಮಾತು ಸಹ ಕೇಳಿಬಂದಿದೆ.

ಅಷ್ಟಕ್ಕೂ ಶೋಯೆಬ್‌ ಅವರು ಮದುವೆ ಆಗಿದ್ದು ಮತ್ಯಾರನ್ನು ಅಲ್ಲ. ಪಾಕಿಸ್ತಾನದ ಖ್ಯಾತ ನಟಿಯರಲ್ಲಿ ಒಬ್ಬರಾದ ಸನಾ ಜಾವೇದ್ ಅವರನ್ನು. ಈಕೆ ಕೂಡ 2020ರಲ್ಲಿ ವಿವಾಹವಾಗಿದ್ದು ತನ್ನ ಮೊದಲ ಪತಿಯಿಂದ ವಿ-ಚ್ಚೇದನ ಪಡೆದಿದ್ದಾರೆ.ಹಾಗಾಗಿ ಇಬ್ಬರು ಪರಸ್ಪರ ಒಪ್ಪಿ ಮದುವೆ ಆಗಿದ್ದಾರೆ. ಮದುವೆ ವಿಚಾರ ಬೆಳಕಿಗೆ ಬರುತ್ತಿದ್ದಂತೆ ದುಬೈನಲ್ಲಿ ವಾಸ್ತವ್ಯದಲ್ಲಿದ್ದ ಸಾನಿಯಾಗೆ ಅನೇಕ ಪ್ರಶ್ನೆ ಸುರಿಮಳೆ ಎದುರಾಗಿದ್ದು ವಿ-ಚ್ಚೇದನ ವಿಚಾರ ಕೂಡ ಬೆಳಕಿಗೆ ಬಂದಿದೆ‌.

ಸಾನಿಯ ಪರ ಅವರ ಕುಟುಂಬದವರು ಇತ್ತೀಚೆಗಷ್ಟೇ ಸಾನಿಯಾ ಹಾಗೂ ಶೋಯೆಬ್‌ ಅವರು ಕೆಲ ತಿಂಗಳ ಹಿಂದಷ್ಟೇ ವಿ-ಚ್ಚೇದನ ಪಡೆದಿದ್ದಾರೆ ಎಂಬ ಮಾಹಿತಿ ತಿಳಿಸಿ ಅವರವರ ವೈಯಕ್ತಿಕ ನಿಲುವಿಗೆ ಗೌರವ ಸೂಚಿಸಿದ್ದಾಗಿ ಕೂಡ ತಿಳಿಸಿದ್ದಾರೆ. ಹೀಗಾಗಿ ವಿ-ಚ್ಚೇದನ ಮೊದಲೇ ಆಗಿದ್ದು ಬಳಿಕ ಶೋಯೆಬ್‌ ಅವರು ಮೂರನೇ ವಿವಾಹ ಆಗಿದ್ದಾರೆ ಎಂಬ ಮಾತು ಖಾತರಿಯಾಗಿದೆ.

Leave a Reply

Your email address will not be published. Required fields are marked *