ಪ್ರೀತಿ ಪ್ರೇಮ ಎರಡು ಮನಸ್ಸುಗಳ ಭಾವ. ಯುವಕ ಯುವತಿಯರು ಪ್ರೀತಿಯಲ್ಲಿ ಬಿದ್ದು ತಮ್ಮ ಪ್ರೀತಿಗೆ ಮದುವೆಯ ಮುದ್ರೆ ಒತ್ತುತ್ತಾರೆ. ಆದರೆ ಎಲ್ಲರ ಪ್ರೀತಿಯೂ ಮದುವೆಯಲ್ಲಿ ಸಕ್ಸಸ್ ಕಾಣಬೇಕು ಎಂದು ಹೇಳುವುದು ಕಷ್ಟ. ಕೆಲವರು ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಸುಖವಾಗಿ ಸಂಸಾರ ಮಾಡಿದರೆ ಇನ್ನು ಕೆಲವರದ್ದು ಪ್ರೀತಿಯೂ ಮದುವೆಯವರೆಗೂ ಹೋಗುವುದೇ ಇಲ್ಲ. ಮನೆಯವರು ಒಪ್ಪುವುದಿಲ್ಲ ಎನ್ನುವ ಕಾರಣಕ್ಕೆ ಅರ್ಧಕ್ಕೆ ಮುರಿದು ಬೀಳುತ್ತದೆ.
ಇನ್ನು ಕೆಲವೊಮ್ಮೆ ಹುಡುಗಿಯೂ ಹುಡುಗನನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದರೆ ಸಾಕು, ಬಲವಂತ ಮಾಡಿ ಬೇರೆಯವರ ಜೊತೆಗೆ ಮದುವೆ ಮಾಡಿಸಿ ಬಿಡುತ್ತಾರೆ. ಆದರೆ ಕೆಲವೊಮ್ಮೆ ಇದು ಅನಾಹುತಕ್ಕೆ ಕಾರಣವಾಗಬಹುದು. ಪ್ರೀತಿಸಿದ ವಿಚಾರ ಗೊತ್ತಾಗುತ್ತಿದ್ದಂತೆ ಬಲವಂತನಾಗಿ ಹೆತ್ತವರು ಹುಡುಗಿಗೆ ಮದುವೆ ಮಾಡಿದ್ದಾರೆ. ಈ ಶಿವಾನಿ ಕುಮಾರಿ ಎಂಬ ಮಹಿಳೆ 10 ವರ್ಷಗಳಿಂದ ಪುರುಷನೊಂದಿಗೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.
ಹೌದು, ಈ ವಿಷಯ ತಿಳಿದ ಮನೆಯವರು ಆಕೆಯನ್ನು ಬೇರೊಬ್ಬನ ಜೊತೆಗೆಮದುವೆ ಮಾಡಿಕೊಟ್ಟರು. ಆದರೆ ಯುವತಿಯೂ ಮದುವೆಯಾದ ಬಳಿಕ ಮಾಡಿದ ಕೆಲಸದ ಬಗ್ಗೆ ತಿಳಿದರೆ ಶಾಕ್ ಆಗುತ್ತದೆ. ಅಂದಹಾಗೆ, ಬಿಹಾರದ ಕಲ್ಯಾಣಪುರದಲ್ಲಿ ವಾಸವಿದ್ದ ಉತ್ತಮ್ ಕುಮಾರ್ ಎಂಬ ವ್ಯಕ್ತಿಯೊಂದಿಗೆ ಶಿವಾನಿ ಸಂಬಂಧ ಹೊಂದಿದ್ದಳು. ಹತ್ತು ವರ್ಷಗಳ ಇಬ್ಬರೂ ಕೂಡ ಒಬ್ಬರನ್ನೊಬ್ಬರು ಪ್ರೀತಿಸಿದ್ದರು.
ಆದರೆ ಅವರ ಕುಟುಂಬವು ಒಪ್ಪುವುದಿಲ್ಲ ಎಂಬ ಭಯದಿಂದ ಇಬ್ಬರೂ ಕೂಡ ತಮ್ಮಿಬ್ಬರ ರಹಸ್ಯವಾಗಿಟ್ಟರು. ಆದರೆ, ಶಿವಾನಿ ಕುಟುಂಬಕ್ಕೆ ಕೊನೆಗೂ ಪ್ರೇಮ ಪ್ರಕರಣ ತಿಳಿಯಿತು. ಆ ಕೂಡಲೇ ಮನೆಯವರು ಡಿಸೆಂಬರ್ 7, 2021 ರಂದು ಪುರುಷನೊಂದಿಗೆ ಮದುವೆಯಾಗುವಂತೆ ಒತ್ತಡ ಹೇರರಿದ್ದು ಹೆತ್ತವರ ಒತ್ತಾಯಕ್ಕೆ ಮದುವೆಯಾಗಿದ್ದಳು.
ಆದರೆ ಮದುವೆಯಾದ ಎರಡು ದಿನದಲ್ಲಿ ಹೊಸ ಪತಿ ಆಕೆಯನ್ನು ಹೊಡೆದಿದ್ದಾನೆ. ಶಿವಾನಿ ತನ್ನ ಪ್ರಿಯಕರನಿಗೆ ಕರೆ ಮಾಡಿ ನಡೆದ ಸಂಗತಿಯನ್ನು ತಿಳಿಸಿದ್ದಾಳೆ. ತನ್ನ ಪ್ರೇಯಸಿ ಮೇಲಿನ ಹ-ಲ್ಲೆಯಿಂದ ಉತ್ತಮ್ ಕೋಪಗೊಂಡು ಆಕೆಯ ಅತ್ತೆಯ ಮನೆಗೆ ತೆರಳಿದ್ದಾನೆ. ಆ ವೇಳೆ ಶಿವಾನಿ ಮನೆಯಲ್ಲಿ ಒಬ್ಬಳೇ ಇದ್ದಿದ್ದರಿಂದ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಇಬ್ಬರೂ ಪರಾರಿಯಾಗಿದ್ದಾರೆ.
ಕೊನೆಗೆ ಈ ಜೋಡಿ ದೇವಸ್ಥಾನಕ್ಕೆ ಹೋಗಿ ಮದುವೆಯಾಗಿದ್ದಾರೆ. ಮದುವೆಯಾದ ಬಳಿಕ ತಮ್ಮ ಮದುವೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವೀಡಿಯೊದಲ್ಲಿ, ಶಿವಾನಿ ತಾನು ಮತ್ತೆ ಮದುವೆಯಾಗಿದ್ದೇನೆ, ಈ ಬಾರಿ ತನ್ನ ಸ್ವಂತ ಇಚ್ಛೆಯ ಮೇರೆಗೆ ಮದುವೆಯಾಗಿದ್ದೇನೆ ಎಂದು ಹೇಳಿದ್ದಾಳೆ. ಆದರೆ ಈ ಉತ್ತಮ್ ಹಾಗೂ ಶಿವಾನಿ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದಾರೆ. ಹೆತ್ತವರು ಒತ್ತಾಯದಿಂದ ಮದುವೆ ಮಾಡಿ ಇದೀಗ ಮಗಳು ಮಾಡಿದ ಕೆಲಸಕ್ಕೆ ಮುಖ ಎತ್ತದ ಪರಿಸ್ಥಿತಿಯೂ ನಿರ್ಮಾಣವಾಗಿದೆ.