ಒಂದು ಹೊತ್ತು ಊಟಕ್ಕೂ ಕಷ್ಟ ಪಡುತ್ತಿದ್ದ ಕನ್ನಡದ ಈ ಕಲಾವಿದ, ಇಂದು 42 ಮನೆಗಳ ಮಾಲೀಕ! ಇವರ ಇಂದಿನ ಲೈಫ್ ಸ್ಟೈಲ್ ಜೀವನ ನೋಡಿ! ಇದಪ್ಪಾ ಸಾಧನೆ ಅಂದ್ರೆ ನೋಡಿ!!

ಸ್ನೇಹಿತರೆ ಸ್ಯಾಂಡಲ್ವುಡ್ ನಲ್ಲಿ ಬೆಳೆಯಬೇಕು, ಹೆಸರು ಮಾಡಬೇಕು, ಹಣ ಸಂಪಾದನೆ ಮಾಡಬೇಕು ಎಂದು ಈ ಚಿತ್ರರಂಗಕ್ಕೆ ಬಂದು ಸಾಲನ್ನು ಕಂಡವರೇ ಹೆಚ್ಚು. ಅವಕಾಶಗಳು ಸಿಕ್ಕರೂ ಕೈ ಹಿಡಿಯುದಿಲ್ಲ. ಇನ್ನು ಬೆಟ್ಟದಷ್ಟು ಪ್ರತಿಭೆ ಇದ್ದರೂ ಅವಕಾಶಗಳು ಸಿಗುವುದಿಲ್ಲ. ಏನೇ ಆದರೂ, ನಮ್ಮ ಮೇಲೆ ನಂಬಿಕೆ ಇಟ್ಟು ನಿಷ್ಠೆಯಿಂದ ಕೆಲಸ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಅನ್ನುವುದಕ್ಕೆ ಈ ನಟನೆ ಸಾಕ್ಷಿ. ಸ್ನೇಹಿತಾರೆ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅದ್ಭುತ ಅಭಿನಯದ ಮೂಲಕ ಜನಮಣ್ಣನ್ನೇ ಗಳಿಸಿದ್ದು ಸುಬ್ಬು ಪಾತ್ರದಾರಿ ಶಿವಾಜಿ ರಾಮ್ ಜಾದವ್.

ಹೌದು, ಧಾರಾವಾಹಿಯ ನಾಯಕಿ ನಟಿ ಅನು ತಂದೆ ಪಾತ್ರದಲ್ಲಿ ಶಿವಾಜಿಯ ಅಭಿನಯ ಇಡೀ ಕರ್ನಾಟಕ ಜನತೆ ಮೆಚ್ಚಿಕೊಂಡಿದೆ. ಶಿವಾಜಿ ರಾಮ್ ಜಾದವ್ ಇವರಿಗೆ ಸಾಕಷ್ಟು ಧಾರಾವಾಹಿಗಳಲ್ಲಿ ಸಿನೆಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇಂದು ಈ ಮಟ್ಟಕ್ಕೆ ಜನರ ಪ್ರೀತಿಯನ್ನು ಗಳಿಸಿರುವ ಇವರು ಸಾಕಷ್ಟು ಕ-ಷ್ಟದಿಂದಲೇ ಮೇಲೆ ಬಂದವರು. ಒಂದು ಹೊತ್ತಿನ ಊಟಕ್ಕೂ ಪರದಾಡಿದ ಅನುಭವ ಇವರದ್ದು, ಇದೀಗ ಒಂದು ಮಟ್ಟಕ್ಕೆ ಬೆಳೆದು ನಿಂತಿದ್ದಾರೆ ಎಂದರೆ ಅದಕ್ಕೆ ಅವರ ಕೆಲಸ ಮೇಲೆ ಈಟ್ಟಿರುವ ನಂಬಿಕೆ ಹಾಗೂ ಅವರ ಪರಿಶ್ರಮವೇ ಕಾರಣ.

ಶಿವಾಜಿ ರಾವ್ ಜಾದವ್ ಮಹಾರಾಷ್ಟ್ರ ಮೂಲದವರು. ಆದರೆ ಜೀವನ ಕಂದುಕೊಂಡಿದ್ದೆ ಮೈಸೂರಿನಲ್ಲಿ. ರಂಗಭೂಮಿಯಲ್ಲಿ ಹೆಚ್ಚಿನ ಆಸಕ್ತಿ ಇದ್ದ ಇವರು ಮೊದಲು ನಾಟಕ ತಂಡವನ್ನು ಸೇರಿಕೊಂಡರು. ಅತ್ತ್ಯುತ್ತಮ ಪ್ರತಿಭೆ ಹೊಂದಿದ್ದ ಶಿವಾಜಿ ಅವರಿಗೆ ಸಾಕಷ್ಟು ಅವಕಾಶಗಳು ಬರುತ್ತದೆ. ನಾಟಕದಲ್ಲಿ ಅಭಿಯಿಸುತ್ತಿರುವಾಗಲೇ ಸೀರಿಯಲ್ ಗಳಲ್ಲಿ ಅಭಿನಯಿಸಲು ಕರೆ ಬರುತ್ತದೆ. ನಂತರ ಬೆಳ್ಳಿತೆರೆಯಲ್ಲಿಯೂ ಕಾಮಿಡಿ ಪಾತ್ರಗಳಿಗೆ ಎಂಟ್ರಿ ಕೊಡುತ್ತಾರೆ. ಶಿವಾಜಿ ಅವರ ನಟನೆಯನ್ನು ಮೆಚ್ಚಿ ಅವಕಾಶಗಳು ಸುಲಭವಾಗಿ ಸಿಗುತ್ತದೆ. ಆದರೆ ಅವರಿಗೆ ಆ ಸಮಯದಲ್ಲಿಯು ಸಾಕಷ್ಟು ಕಷ್ಟದ ಪರಿಸ್ಥಿತಿ ಇತ್ತು.

ಜಾದವ್ ಅವರಿಗೆ ಆಗ ನಟನೆಗೆ ಸಿಗುತ್ತಿದ್ದ ಸಂಬಳ ತುಂಬಾ ಕಡಿಮೆ 100 ರಿಂದ 150ರೂಪಾಯಿಗಳು ಅಷ್ಟೇ ಇದು ಸಿಕ್ಕರೆ ದೊಡ್ಡ ಮೊತ್ತ! ಹಾಗಾಗಿ ಅವರಿಗೆ ಸಂಸಾರವನ್ನು ನಡೆಸುವುದು ಕೂಡ ಅಷ್ಟು ಸುಲಭವಾಗಿರಲಿಲ್ಲ. ಆದರೂ ಅವರು ಆ ಕೆಲಸವನ್ನು ಬಿಡಲಿಲ್ಲ. ಕಷ್ಟ ಆದರೂ ಸರಿಯೇ ನನ್ನಿಷ್ಟದ ಕೆಲಸವನ್ನೇ ಮಾಡುತ್ತೇನೆ ಅಂತ ನಟನೆಯನ್ನೇ ಮುಂದುವರಿಸುತ್ತಾರೆ. ಅಲ್ಲಿ ಬಂದ ಹಣ ದಿಂದ ಜೀವನ ಸಾಗಿಸುತ್ತಿದ್ದರು ಜಾದವ್.

ಕಾಲಕ್ರಮೇಣ ಅವರ ಪ್ರತಿಭೆಗೆ ತಕ್ಕ ಸಂಭಾವನೆಯನ್ನೂ ಕೊಡಲು ಆರಂಭಿಸಿದರು. ದಿನಕ್ಕೆ ಐನೂರರಿಂದ ಸಾವಿರರೂಪಾಯಿ ಸಂಭಾವನೆ ಸಿಗಲು ಆರಂಭವವಾಯಿತು. ಈ ಹಣವನ್ನು ಅನಗತ್ಯ ಖರ್ಚು ಮಾಡದೇ ಅಗತ್ಯಕ್ಕೆ ಬೇಕಾದಷ್ಟು ಬಳಸಿ ಉಳಿದವನ್ನು ಕೂಡಿಡಲು ಶುರು ಮಾಡಿದರು. ಜೊತೆಗೆ ಲಾಭ ಬರುವ ವ್ಯವಹಾರಗಳಲ್ಲಿ ತೊಡಗಿಸಿದರು. ಹೀಗೆ ಒಂದಿಷ್ಟು ಹಣವನ್ನು ಒಟ್ಟು ಮಾಡಿ, ಒಂದು ಮಟ್ಟಕ್ಕೆ ಉತ್ತಮ ಜೀವನ ಲೀಡ್ ಮಾಡುವಷ್ಟು ಅವರ ಜೀವನ ಸುಧಾರಿಸಿತು.

ಅಂದು ಕೇವಲ ನೂರು ರುಪಾಯಿಗೆ ಕೆಲಸ ಮಾಡಿದ್ದ ಶಿವಾಜಿ ರಾವ್ ಜಾದವ್ ಇಂದು ಮೈಸೂರಿನಲ್ಲಿ ಸ್ವಂತ ಅಪಾರ್ಟ್ಮೆಂಟ್ ಒಂದನ್ನು ಕಟ್ಟಿಸಿ, 42 ಮನೆಗಳನ್ನು ಬಾಡಿಗೆ ನೀಡಿದ್ದಾರೆ. ಇದಲ್ಲವೇ ತಮ್ಮ ಮೇಲೆ ಹಾಗೂ ತಾವೂ ಮಾಡುತ್ತಿರುವ ಕೆಲಸದ ಮೇಲೆ ಇಟ್ಟಿರುವ ನಂಬಿಕೆ. ಖಂಡಿತ ಜಾದವ್ ಅವರು ಇಂದಿನ ಯುವ ಪೀಳಿಗೆಗಳಿಗೆ ಕೂಡ ಸ್ಫೂರ್ತಿ. ನಂಬಿದ ಕೆಲಸ ಕೈ ಹಿಡಿಯಲಿಲ್ಲ ಎಂದು ಕುರುವ ಬದಲು ಪ್ರಯತ್ನಪಟ್ಟು ಕೆಲಸ ಮಾಡಿದರೆ ಖಂಡಿತ ಫಲ ತಾನಾಗಿಯೇ ಸಿಗುತ್ತದೆ ಎನ್ನುವುದಕ್ಕೆ ಶಿವಾಜಿ ರಾವ್ ಜಾದವ್ ಅವರೇ ಉದಾಹರಣೆ!

ಈಗ ಸುಖ ಸಂಸಾರ ನಡೆಸುತ್ತಿರುವುದು ಮಾತ್ರವಲ್ಲದೇ, ಮಕ್ಕಳಿಗೂ ಕೂಡ ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸಿದ್ದಾರೆ! ನಿಜಕ್ಕೂ ಅದ್ಭುತ ಕಲಾವಿದರಿಗೆ ಮತ್ತಷ್ಟು ಅವಕಾಶಗಳು ಸಿಗಲಿ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *