ಇತ್ತೀಚೆಗಿನ ದಿನಗಳಲ್ಲಿ ನಮ್ಮ ಸುತ್ತ ಮುತ್ತಲೂ ನಡೆಯುತ್ತಿರುವ ಘಟನೆಯನ್ನು ನೋಡಿದರೆ ಮನುಷ್ಯನ ಮನಸ್ಥಿತಿಯೂ ಎತ್ತ ಸಾಗಿದೆ ಎಂದೇನಿಸುತ್ತದೆ. ಫೋ-ರ್ಜರಿ ಪ್ರ-ಕರಣದಲ್ಲಿ ಪತ್ನಿಯ ಕಥೆ ಮುಗಿಸಿದ ಪತಿಯನ್ನು ಪೊಲೀಸರು ಬಂ-ಧಿಸಿದ್ದರು. ಕರೂರ್ ಜಿಲ್ಲೆಯ ತಾಂಥೋನ್ರಿಮಲೈ ಪಾರ್ಕ್‌ನಗರದ ಶಿವಶಂಕರನ್ (47) ತನ್ನ ಪತ್ನಿ ಸೂರ್ಯಕುಮಾರಿ (34) 2019 ರ ಆಗಸ್ಟ್ 9 ರಂದು ತಾಂಥೋನ್ರಿಮಲೈ ಪೊಲೀಸ್ ಠಾ-ಣೆಯಲ್ಲಿ ಕಾ-ಣೆಯಾಗಿದ್ದಾರೆ ಎಂದು ದೂರು ನೀಡಿದ್ದರು.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತೀವ್ರ ಶೋಧ ನಡೆಸಿದ್ದರು. ಅವರ ಜೊತೆಗೆ ಶಿವಶಂಕರ್ ಕೂಡ ಹೆಂಡತಿಯನ್ನು ಹುಡುಕಿಕೊಂಡು ಅಲೆದಾಡಿದ್ದರು. ಪೊಲೀಸರು ಹಲವೆಡೆ ಹುಡುಕಾಟ ನಡೆಸಿದರೂ ಸೂರ್ಯಕುಮಾರಿ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಇದೇ ವೇಳೆ ಶಿವಶಂಕರನ ಕಾರ್ಯವೈಖರಿ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿದ್ದು, ಬಳಿಕ ಆತನ ಸೆಲ್ ಫೋನ್ ಪರಿಶೀಲಿಸಿದರೆ ಸುಳಿವು ಸಿಗಬಹುದು ಎಂದು ಪೊಲೀಸರು ಭಾವಿಸಿದ್ದರು.
ಹೀಗಾಗಿ ಪೊಲೀಸರು ಆತನಿಗೆ ಮೊಬೈಲ್ ಕೊಡುವಂತೆ ಸೂಚಿಸಿದ್ದು, ಆದರೆ ಅವರ ಮೊಬೈಲ್ ಕಳೆದು ಹೋಗಿದೆ ಎಂದು ಹೇಳಿದ್ದನು. ಇದು ಪೊಲೀಸರ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿತ್ತು. ತದನಂತರದಲ್ಲಿ ಸೈಬರ್ ಕ್ರೈಂ ಪೊಲೀಸರ ಮೂಲಕ ಅವರ ಸೆಲ್ ಫೋನ್ ಅನ್ನು ಎಲ್ಲಿ ಬಳಸಲಾಗಿದೆ ಎಂದು ತಾಂಥೋನ್ರಿಮಲ್ ಪೊಲೀಸರು ತನಿಖೆ ನಡೆಸಿದ್ದರು. ಆಗಸ್ಟ್ 8ರಂದು ಕೊಡೈರೋಡ್ ಬಳಿ ಬಳಸಿರುವುದು ಬೆಳಕಿಗೆ ಬಂದಿತ್ತು. ಆಗ ಕೊಡೈರೋಡ್ ಪೊಲೀಸರನ್ನು ಸಂಪರ್ಕಿಸಿದ ತಾಂಥೋನ್ರಿಮಲೈ ಪೊಲೀಸರು ಶಿವಶಂಕರನ್ ಅವರ ಸೆಲ್ ಫೋನ್ ಟವರ್ ಬಗ್ಗೆ ಮಾಹಿತಿ ನೀಡಿದ್ದು ಯಾವುದೇ ಅಹಿತಕರ ಘಟನೆಗಳು ನಡೆದಿವೆಯೇ? ಅವರು ವಿಚಾರಿಸಿದ್ದರು.
ಆ ವೇಳೆ ಅಮ್ಮಯ್ಯ ನಾಯ್ಕನೂರು ಪೊಲೀಸರು ಗೋ-ಣಿಚೀಲದಲ್ಲಿ ಸು-ಟ್ಟು ಕರ-ಕಲಾದ ಮಹಿಳೆಯ ಶ-ವವನ್ನು ಹೊರತೆಗೆದಿದ್ದರು. ಆ ನಂತರ ತಾಂತೋನ್ರಿಮಲೈ ಪೊಲೀಸರು ಶಿವಶಂಕರನನ್ನು ಹಿಡಿದು ವಿಚಾರಣೆ ನಡೆಸಿದಾಗ ಅಸಲಿ ವಿಚಾರಗಳು ಬೆಳಕಿಗೆ ಬಂದಿತ್ತು. ಪತ್ನಿಯ ಕಥೆಯನ್ನು ಮುಗಿಸಿರುವುದಾಗಿ ಒಪ್ಪಿಕೊಂಡಿದ್ದನು. ಆ ತಕ್ಷಣವೇ ಆತನನ್ನು ಬಂಧಿಸಿ ಕೊಡೈರೋಟ್‌ಗೆ ಕರೆತರಲಾಗಿದ್ದು, ತನ್ನ ಪತ್ನಿಯ ಶ-ವವನ್ನು ಗೋಣಿಚೀಲದಲ್ಲಿ ಎಸೆದ ಸ್ಥಳವನ್ನು ಗುರುತಿಸಿ ಅದನ್ನು ಹೇಗೆ ಎಸೆದಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದನು.
ಪೊಲೀಸರು ತನಿಖೆಯ ವೇಳೆ ಶಿವ ಶಂಕರನ್ ಸತ್ಯವನ್ನು ಬಾಯಿಬಿಟ್ಟ, ನನ್ನ ಹೆಂಡತಿ ಹಾಗೂ ಹದಿಹರೆಯಾದವನ ಜೊತೆಗೆ ಅ-ನೈತಿಕ ಸಂ-ಬಂಧ ಹೊಂದಿದ್ದಳು. ಕೊನೆಗೆ ಗರ್ಭಿಣಿಯಾಗಿದ್ದ ಹೆಂಡತಿ ಹಾಗೂ ಆತನಿಗೆ ಬುದ್ದಿ ಹೇಳಿದ್ದೆ. ಆದರೆ ನನ್ನ ಪತ್ನಿ ನಾನು ಹೇಳಿದ್ದನ್ನು ಕೇಳಿರಲಿಲ್ಲ. ಹದಿಹರೆಯದ ಯುವಕನ ಜೊತೆಗೆ ‘ಟಿಕ್-ಟಾಕ್’ ವೀಡಿಯೊವನ್ನು ಸಹ ಬಿಡುಗಡೆ ಮಾಡಿದ್ದಳು. ಇದು ನನ್ನನ್ನು ಇನ್ನಷ್ಟು ಕೆರಳಿಸಿತ್ತು. ಹೀಗಾಗಿ ಆಕೆಯ ಕಥೆ ಮುಗಿಸಲು ಯೋಚಿಸಿದೆ.
ಹೀಗಿರುವಾಗ ಆಗಸ್ಟ್ 7ರಂದು ರಾತ್ರಿ ಮನೆಗೆ ತೆರಳಿ ಬೆಡ್ ರೂಂನಲ್ಲಿ ಮಲಗಿದ್ದ ಸೂರ್ಯಕುಮಾರಿಯನ್ನು ಕಬ್ಬಿಣದ ರಾಡ್ ನಿಂದ ಕೊ-ಲೆ ಮಾಡಿದ್ದೆ. ನಂತರ ಆಕೆಯ ದೇಹವನ್ನು ಗೋಣಿಚೀಲದಲ್ಲಿ ಕಟ್ಟಿ ಮಲಗುವ ಕೋಣೆಯಲ್ಲಿ ಇಟ್ಟು ಮಲಗಿದ್ದೆ. ಮಾರನೇ ದಿನ ಗೋಣಿಚೀಲವನ್ನು ಕಾರಿನಲ್ಲಿ ಹಾಕಿಕೊಂಡು ಕೊಡೈರೋಡ್ ಬಳಿಯ ರೈಲ್ವೇ ನಗರಕ್ಕೆ ಬಂದೆ. ಅಲ್ಲಿಯ ಖಾಲಿ ಜಾಗದಲ್ಲಿ ಮೂಟೆಯನ್ನು ಎಸೆದಿದ್ದೇನೆ.
ನಾನು ನನ್ನ ಸೆಲ್ ಫೋನ್ ಅನ್ನು ಆ ಪ್ರದೇಶದ ಪೊದೆಯೊಂದರಲ್ಲಿ ಎಸೆದು ತಾಂಥೋನ್ರಿಮಲೈಗೆ ಮರಳಿದ್ದೆ. ನನ್ನ ಮೇಲೆ ಯಾರಿಗೂ ಅನುಮಾನ ಬಾರದಂತೆ ನಾನು ಕೂಡ ಆಗಸ್ಟ್ 9 ರಂದು ಸೂರ್ಯಕುಮಾರಿ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸ್ ದೂರು ನೀಡಿದ್ದೆ. ಆದರೆ ಪೋಲೀಸರಿಗೆ ಹೇಗೋ ಕೊ-ಲೆ ಮಾಡಿದ್ದು ನಾನೇ ಎಂದು ಗೊತ್ತಾಯಿತು. ಹಾಗಾಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದೇನೆ,” ಎಂದು ಹೇಳಿದ್ದನು.
ಗೋ-ಣಿಚೀಲದಲ್ಲಿ ಎಸೆದಿದ್ದೇನೆ ಎಂದು ಶಿವಶಂಕರನ್ ಹೇಳಿದ ಬಳಿಕ ಪೊಲೀಸರು ಗೋ-ಣಿಚೀಲಕ್ಕೆ ಬೆಂ-ಕಿ ಹ-ಚ್ಚಿದವರು ಯಾರು ಎಂದು ವಿಚಾರಿಸಿದ್ದರು ಆಗಸ್ಟ್ 14ರಂದು ಗೋಣಿಚೀಲದಿಂದ ದು-ರ್ವಾಸನೆ ಬರುತ್ತಿದ್ದರಿಂದ ಯಾರೋ ದು-ಷ್ಕರ್ಮಿಗಳು ಗೋ-ಣಿಚೀಲಕ್ಕೆ ಬೆಂಕಿ ಹಚ್ಚಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿತ್ತು. ಅದಲ್ಲದೇ ಈ ಬಗ್ಗೆ ಮಾಹಿತಿ ಪಡೆದ ಅಮ್ಮಯ್ಯನಾಯಕನೂರು ಪೊಲೀಸರು ಬ್ಯಾಗ್ ನಲ್ಲಿದ್ದ ಬೆಂಕಿ ನಂದಿಸಿ ಶೋಧ ನಡೆಸಿದ್ದರು.
ಆ ವೇಳೆ ಮಹಿಳೆಯ ದೇಹ ಸಂ-ಪೂರ್ಣ ಸು-ಟ್ಟು ಕರ-ಕಲಾಗಿರುವುದು ಕಂಡು ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಕೊನೆಗೂ ಶಿವ ಶಿವಶಂಕರ್ ಅವರ ಪತ್ನಿಯ ಮೃ-ತ ದೇ-ಹವೆಂದು ಒಪ್ಪಿಕೊಂಡಿದ್ದರು. ಒಟ್ಟಿನಲ್ಲಿ ಇಂತಹ ಪ್ರಕರಣಗಳನ್ನು ನೋಡುವಾಗ ಮನುಷ್ಯನ ಮನಸ್ಥಿತಿಯೂ ಎಷ್ಟು ಹಾಳಾಗಿದೆ ಎನ್ನುವುದನ್ನು ಬಿಂಬಿಸುತ್ತದೆ.