ಪ್ರೇಯಸಿಯ ಜೊತೆಗೆ ಕಬಡ್ಡಿ ಆಡಲು ಹೆಂಡತಿಯ ಚಿನ್ನದ ಒಡವೆ ಕದ್ದೊಯ್ದ ಪತಿರಾಯ! ಒಡವೆಯ ವಾಸನೆ ಕಂಡುಹಿಡಿದ ಪತ್ನಿ ಮಾಡಿದ್ದೇನು ನೋಡಿ!!

ಸಮಾಜದಲ್ಲಿ ಏನಾದರೂ ಕೆಟ್ಟದು ನಡೆದರೆ ಸಮಾಜ ಸರಿಯಿಲ್ಲ ಎನ್ನುತ್ತೇವೆ. ಆದರೆ ಸಮಾಜ ಬದಲಾಗಿಲ್ಲ, ಬದಲಾಗಿ ಮನುಷ್ಯನ ಮನಸ್ಥಿತಿಯೂ ಬದಲಾಗಿದೆ. ಹೀಗಾಗಿ ಒಂದಲ್ಲ ಒಂದು ಅಹಿತಕರ ಘನೆಗಳು ನಡೆಯುತ್ತಿದೆ. ಪ್ರೇಯಸಿಗಾಗಿ ಪತ್ನಿಯ ಆಭರಣವನ್ನು ಕಳವು ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಹೌದು, ಶೇಖರ್ (40) ಚೆನ್ನೈನ ಪೂಂತಮಲ್ಲಿಯ ಮುತ್ತು ನಗರದವರು. ಈ ಶೇಖರ್ ಫೈನಾನ್ಸ್ ಕಂಪನಿ ನಡೆಸುತ್ತಿದ್ದರು. ಇವರ ಕಿರಿಯ ಸಹೋದರ ರಾಜೇಶ್ (37). ಇಬ್ಬರಿಗೂ ಮದುವೆಯಾಗಿದೆ. ಇಬ್ಬರೂ ಒಂದೇ ಮನೆಯಲ್ಲಿ ತಾಯಿ ತಮಿಳ್ಸೆಲ್ವಿಯೊಂದಿಗೆ ವಾಸಿಸುತ್ತಿದ್ದರು. ಈ ಪರಿಸ್ಥಿತಿಯಲ್ಲಿ ಎರಡು ವರ್ಷಗಳ ಹಿಂದೆ ಶೇಖರ್ ಪತ್ನಿ ಜಗಳ ಮಾಡಿ ಬೇರೆಯಾಗಿದ್ದರು. ಇತ್ತೀಚೆಗಷ್ಟೇ ಹಿಂದೆ ಶೇಖರ್ ಪತ್ನಿ ಮನಸ್ಸು ಬದಲಿಸಿ ಗಂಡನ ಮನೆಗೆ ಬಂದಿದ್ದರು.

ಹೀಗಿರುವಾಗ ಒಂದು ದಿನ ಬ್ಯೂರೋದಲ್ಲಿ ಇಟ್ಟಿದ್ದ ಚಿನ್ನಾಭರಣ ನೋಡಿದಾಗ 300 ಸವಾರನ್ ಕಾ-ಣೆಯಾಗಿತ್ತು. ರಾಜೇಶ್ ಅವರ ಪತ್ನಿಯ ಆಭರಣಗಳು 200 ಸವರನ್ ಹಾಗೂ 50 ಸವರನ್ ಚಿನ್ನದ ಗಟ್ಟಿಗಳು ಮಾಯವಾಗಿತ್ತು. ಈ ಹಿನ್ನಲೆಯಲ್ಲಿ ಪೂಂತಮಲ್ಲಿಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ತನಿಖೆ ಆರಂಭಿಸಿದರು. ಪೊಲೀಸರಿಗೆ ಶೇಖರ್ ಮೇಲೆ ಅನುಮಾನ ಬಂದಿದ್ದು, ಈ ಬಗ್ಗೆ ಕೇಳಿದಾಗ ಚಿನ್ನಾಭರಣ ಕಳ್ಳತನವಾಗಿರಬಹುದು ಎಂದಿದ್ದನು. ಆದರೆ ಈ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸಿದಾಗ ಶೇಖರ್ ಚಿನ್ನಾಭರಣ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಇದಲ್ಲದೆ, ತನಿಖೆಯ ಸಮಯದಲ್ಲಿ.

ಶೇಖರ್ ವೆಲಚೇರಿಯ ಕೇಸರಿಪುರಂ ಮುಖ್ಯ ರಸ್ತೆಯಲ್ಲಿ ವಾಸಿಸುವ ಸ್ವಾತಿ (22) ಎಂಬ ಯುವತಿಯೊಂದಿಗೆ ಸಂಬಂಧವನ್ನು ಇಟ್ಟುಕೊಂಡಿದ್ದ ಎಂದು ತಿಳಿದುಬಂದಿದೆ. ಬೋರೂರು ಪ್ರದೇಶದ ಹೋಟೆಲ್‌ವೊಂದರಲ್ಲಿ ಇಬ್ಬರೂ ಆಗಾಗ ಭೇಟಿಯಾಗಿ ಮಾತನಾಡುತ್ತಿದ್ದರು. ಸ್ವಾತಿಯ ಸೌಂದರ್ಯಕ್ಕೆ ಮರುಳಾಗಿದ್ದ ಶೇಖರ್ ಮನೆಯಲ್ಲಿದ್ದ ಒಡವೆಯನ್ನು ಮೆಲ್ಲಗೆ ಅವಳಿಗೆ ಕೊಟ್ಟಿದ್ದ.

ಕೊನೆಗೆ ಈ ವಿಷಯ ಹೊರ ಬರುತ್ತಿದ್ದಂತೆ ಪೊಲೀಸರು ಶೇಖರ್ ಮತ್ತು ಸ್ವಾತಿಯನ್ನು ಬಂಧಿಸಿದ್ದಾರೆ. ಅದರ ಜೊತೆಗೆ ಉಡುಗೊರೆಯಾಗಿ ನೀಡಿದ್ದ ಕಾರನ್ನು ಸಹ ಜಪ್ತಿ ಮಾಡಲಾಗಿದೆ. ಅಷ್ಟೇ ಅಲ್ಲದೇ ಉದ್ಯಮಿಯೊಬ್ಬರ ಸ್ವಂತ ಮನೆಯಿಂದ 550 ಸವರನ್ ಆಭರಣಗಳನ್ನು ದೋ’ಚಿರುವ ಘಟನೆ ಭಾರೀ ಸಂಚಲನ ಮೂಡಿಸಿದೆ. ಸದ್ಯ ಕಾರಿನಲ್ಲಿದ್ದ ಚಿನ್ನಾಭರಣಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಈ ಘಟನೆಯ ಹಿಂದೆ ಸಾಕಷ್ಟು ವಿಚಾರಗಳು ಬೆಳಕಿಗೆ ಬಂದಿರುವುದು ಅಚ್ಚರಿ ಮೂಡಿಸಿದೆ.

Leave a Reply

Your email address will not be published. Required fields are marked *