Shashikala and shantamma : ಹೆತ್ತ ತಾಯಿಯ ಕತ್ತಲಿರುವ ಮಾಂಗಲ್ಯವನ್ನೇ ಕದ್ದ ಮಗಳು..! ಈ ತಪ್ಪಿಗೆ ಆಕೆ ಅನುಭವಿಸಿದ ಶಿಕ್ಷೆ ಏನು ಗೊತ್ತಾ??ರಾಮನಗರದಲ್ಲಿ ಮಗಳೊಬ್ಬಳು ತನ್ನ ಸ್ವಂತ ತಾಯಿಯ ತಾಳಿಸರವನ್ನು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ. ರಾಮನಗರದ ಕೆಂಪೇಗೌಡನ ದೊಡ್ಡಿ ಎಂಬ ಗ್ರಾಮದಲ್ಲಿ ಪುತ್ರಿಯು, ಹೆತ್ತು ಹೊತ್ತು ಸಲಹಿರುವ ತಾಯಿ ಎಂದು ಲೆಕ್ಕಿಸದೆ ಕಳ್ಳತನ ಮಾಡಿರುವುದು ಕಲಿಯುಗದ ಮಹಿಮೆಯೇ ಸರಿ ಎಂದು ಹಲವರು ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ತಾಯಿಯ 50 ಗ್ರಾಂನ ಮಾಂಗಲ್ಯವನ್ನು ಕದ್ದ ಮಗಳ ಹೆಸರು ಶಶಿಕಲಾ.ತಂದೆ ತಾಯಿ ತೀ-ರಿಹೋದ ನಂತರ ಬಂಗಾರ ಆಸ್ತಿಗಾಗಿ ಮಕ್ಕಳು ಜಗಳವಾಡಿರೋದನ್ನು ನೋಡುತ್ತೇವೆ. ಆದರೆ ಇಲ್ಲಿ ತಾಯಿ ಬದುಕಿರುವಾಗಲೇ ಮಗಳು, ತಾಳಿಗೆ ಆಸೆ ಪಟ್ಟಿದ್ದಾಳೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯು ಒಂಟಿಯಾಗಿ ರಸ್ತೆಯಲ್ಲಿ ಸಾಗುತ್ತಿದ್ದರೆ..
ಪುಂಡುಪೋಕರಿಗಳು ಕಳ್ಳರು ಬಂಗಾರದ ಸರವನ್ನು, ಮಾಂಗಲ್ಯವನ್ನು ಕಿತ್ತುಕೊಂಡು ಹೋದ ಘಟನೆಗಳು ಸಾಕಷ್ಟು ನಡೆಯುತ್ತಿವೆ. ಆದರೆ ವಯಸ್ಕ ತಂದೆ ತಾಯಿಯನ್ನು ನೋಡಿಕೊಳ್ಳುವುದೇ ಕರ್ತವ್ಯವಾಗಿರುವಾಗ ಮಗಳು ತಾಯಿಯ ತಾಳಿ ಸರವನ್ನು ಕಿತ್ತುಕೊಂಡು ಹೋಗುತ್ತಾಳೆ ಎಂದರೆ ‘ಬೇಲಿಯೇ ಎದ್ದು ಹೊಲ ನುಂಗಿದ ಹಾಗೆ’.
ಶಶಿಕಲಾ, ವಿವಾಹಿತ ಮಹಿಳೆ. ಆದರೆ ಗಂಡ ಅದಾಗಲೇ ಸಾ-ವ-ನ್ನಪ್ಪಿದ್ದಾನೆ. ಬೆಳೆದ ಮಕ್ಕಳಿದ್ದಾರೆ. ಹಲವು ವರ್ಷಗಳಿಂದ ಆಕೆ ಕುಟುಂಬಸ್ಥರಿಂದ ದೂರ ಉಳಿದಿದ್ದಳು. ಬೆಂಗಳೂರಿನಲ್ಲಿ ನೆಲೆ ಕಂಡಿದ್ದ ಆಕೆ ಮತ್ತೆ ರಾಮನಗರಕ್ಕೆ ಬಂದು ಬಾಡಿಗೆ ಮನೆ ಒಂದನ್ನು ಮಾಡಲು ನಿರ್ಧರಿಸಿ ಹಣವಿಲ್ಲವೆಂಬ ಕಾರಣಕ್ಕಾಗಿ ತವರೂರಿಗೆ ಬರುತ್ತಾಳೆ.
ಮನೆಯಲ್ಲಿ ಯಾರೂ ಇಲ್ಲ ಎಂಬ ವಿಷಯವನ್ನು ಖಚಿತಪಡಿಸಿಕೊಳ್ಳುತ್ತಾಳೆ. ನಂತರ ಮಲಗಿರುವ ತನ್ನ ತಾಯಿ ಶಾಂತಮ್ಮ ಅವರ 50 ಗ್ರಾಂ ನ ಬಂಗಾರದ ಮಾಂಗಲ್ಯ ಸರವನ್ನು ಎತ್ತುಕೊಂಡು ಪರಾರಿ ಆಗುತ್ತಾಳೆ.ಇಷ್ಟಕ್ಕೂ ನಿಲ್ಲದೆ ಶಶಿಕಲಾ, ಮನೆಯೊಳಗೆ ಯಾರೋ ನುಗ್ಗಿ ತಾಳಿಸರವನ್ನು ಕಳ್ಳತನ ಮಾಡಿದ್ದಾರೆ ಎಂದು ಬಿಂಬಿಸುವಂತೆ ನಾಟಕ ಮಾಡಿದ್ದಾಳೆ. ಈಕೆಯ ಹಿನ್ನೆಲೆಯನ್ನು ಅರಿತಿದ್ದ ಕುಟುಂಬಸ್ಥರೇ ಪೊಲೀಸರಲ್ಲಿ ತಮ್ಮ ಅನುಮಾನವನ್ನು ವ್ಯಕ್ತಪಡಿಸಿ, ತನಿಖೆಗೆ ಒಳಪಡಿಸಿದ್ದರು.
ವಿಚಾರಣೆಯ ವೇಳೆ ಶಶಿಕಲಾ ಮಾಡಿರುವ ತಪ್ಪು ಬಯಲಾಗಿದೆ.ಕುಟುಂಬದಿಂದ ದೂರಾಗಿ ಉಳಿದಾಗಿನಿಂದ ಆಕೆ ತಪ್ಪು ದಾರಿ ತುಳಿದಿದ್ದಾಳೆ ಎಂದು ಸ್ಥಳೀಯರು ಹೇಳಿದ್ದಾರಂತೆ..ಅಲ್ಲದೆ ಶಶಿಕಲಾ ಮೇಲೆ ಅದಾಗಲೇ ಮಾನವ ಕಳ್ಳ ಸಾಗಾಣಿಕೆಯ ಆರೋಪದ ಮೇಲೆ ದೂರು ದಾಖಲಾಗಿತ್ತಂತೆ. ಇದೀಗ ಶಶಿಕಲಾ ಪೊಲೀಸರ ಕೈವಶವಾಗಿದ್ದು, ತನ್ನ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುತ್ತಿದ್ದಾಳೆ.