ಶಶ ರಾಜಯೋಗದಿಂದ ಈ ಮೂರು ರಾಶಿಯವರಿಗೆ 2023 ರ ಒಳಗೆ ಅದೃಷ್ಟ, ಆ ರಾಶಿಗಳು ಯಾವುವು ಗೊತ್ತಾ?

ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ನಡುವಿನ ಬದಲಾವಣೆಗಳು ಯೋಗ ಫಲ (Yoga Phala) ಗಳನ್ನು ನೀಡುವ ಸಾಧ್ಯತೆಯೂ ಅಧಿಕವಾಗಿರುತ್ತದೆ. ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಸಮಯದಲ್ಲಿ ಒಂದು ರಾಶಿಯನ್ನು ಬಿಟ್ಟು ಮತ್ತೊಂದು ರಾಶಿಯನ್ನು ಪ್ರವೇಶಿಸುತ್ತದೆ. ಈ ವೇಳೆಯಲ್ಲಿ ಶುಭ ಹಾಗೂ ಅಶುಭ ಫಲಗಳನ್ನು ಕಾಣಬಹುದು.

ಆದರೆ ಇದೀಗ ಶನಿ ಕುಂಭ ರಾಶಿಯಲ್ಲಿ ಹಿಮ್ಮುಖನಾಗಿ ಸಂಚರಿಸುತ್ತಿದ್ದು, ಇದು ಕೇಂದ್ರ ತ್ರಿಕೋನ ರಾಜ ಯೋಗವನ್ನು ಸೃಷ್ಟಿಸಿದೆ. ಹೀಗಾಗಿ 3 ರಾಶಿಗಳು 2025 ರ ವೇಳೆಗೆ ಸಾಕಷ್ಟು ಪ್ರಯೋಜನ (Benefits) ಗಳನ್ನು ಪಡೆಯಲಿವೆ. ಅದಲ್ಲದೆ ಮುಂದಿನ ನವೆಂಬರ್ ನಲ್ಲಿ, ಶನಿ ನೇರವಾಗಿ ಸಂಚರಿಸಲಿದ್ದು, ಶಶ ರಾಜ ಯೋಗ (Shasha Rajayoga) ವನ್ನು ಸೃಷ್ಟಿಸುವ ಕರಣ ಈ ಇದು ಮೂರು ರಾಶಿಯವರಿಗೆ ಅದೃಷ್ಟವು ಕೈ ಹಿಡಿಯಲಿದೆ. ಹಾಗಾದ್ರೆ ಆ ಮೂರು ರಾಶಿಗಳು ಯಾವುವು ಎನ್ನುವುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

ವೃಷಭ ರಾಶಿ: ಶನಿಯ ಸಂಚಾರದಿಂದಾಗಿ, ಶಶ ರಾಜ ಯೋಗದ ಈ ರಾಶಿಯವರಿಗೆ ಅದೃಷ್ಟವನ್ನು ತರಲಿದೆ. ಈ ರಾಶಿಯವರ ಎಲ್ಲಾ ಆಸೆಗಳು ಈಡೇರುವುದರ ಜೊತೆಗೆ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಯನ್ನು ಕಾಣಲಿದ್ದಾರೆ. ಅವಿವಾಹಿತರಿಗೆ ಮದುವೆ ಪ್ರಸ್ತಾಪಗಳು ಬರಲಿದೆ. ಹೀಗಾಗಿ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆಯೂ ಅಧಿಕವಾಗಿದೆ. ತ್ರಿಕೋನ ರಾಜ ಯೋಗದಿಂದಾಗಿ ಆದಾಯದಲ್ಲಿ ಹೆಚ್ಚಳ, ವೃತ್ತಿಜೀವನದಲ್ಲಿ ಬೆಳವಣಿಗೆ ಮತ್ತು ವ್ಯವಹಾರದಲ್ಲಿ ಲಾಭವನ್ನು ಕಾಣಬಹುದು. ಹಣದ ಮೂಲಗಳು ಅಧಿಕವಾಗಲಿದ್ದು, ಲಾಭಗಳನ್ನು ಪಡೆಯಲಿದ್ದಾರೆ.

ತುಲಾ ರಾಶಿ: ಕೇಂದ್ರ ತ್ರಿಕೋನ ರಾಜಯೋಗವು ತುಲಾ ರಾಶಿಯವರಿಗೆ ಲಾಭವನ್ನು ತರಲಿದೆ. ಮಕ್ಕಳಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುವ ಸಾಧ್ಯತೆಯೂ ಅಧಿಕವಾಗಿದೆ. ಹೊಸ ಯೋಜನೆಗಳಿಗೆ ಕೈ ಹಾಕುವವವರಿದ್ದರೆ ಈ ಸಮಯವು ಸೂಕ್ತವಾಗಿದೆ. ಏಕಾಏಕಿ ಹಣವನ್ನು ಪಡೆಯುವ ಸಾಧ್ಯತೆಯೂ ಇದ್ದು, ಷೇರು ಮಾರುಕಟ್ಟೆ, ಬೆಟ್ಟಿಂಗ್ ಮತ್ತು ಲಾಟರಿಯಲ್ಲಿ ಹಣವು ನಿಮ್ಮ ಕೈ ಸೇರಲಿದೆ. ಹೊಸ ಕಾರು ಅಥವಾ ಮನೆಯನ್ನು ಖರೀದಿಸುವ ಯೋಗವಿದ್ದು, ನಿಮ್ಮ ಕನಸು ಈಡೇರಲಿದೆ. ಹಣ ಹೂಡಿಕೆ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಲಾಭವನ್ನು ಪಡೆಯಲಿದ್ದಾರೆ.

ಸಿಂಹ ರಾಶಿ: ಈ ರಾಶಿಯವರಿಗೆ ತ್ರಿಕೋನ ರಾಜಯೋಗವು ಉತ್ತಮವಾದ ಅವಕಾಶಗಳನ್ನು ಸೃಷ್ಟಿಸಲಿದೆ. ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧಗಳು ಉತ್ತಮವಾಗಿರುತ್ತದೆ. ಆದಾಯ ಹೆಚ್ಚಾಗಲಿದ್ದು, ನೀವು ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮ ಬದುಕಿನ ಶೈಲಿಯನ್ನು ಬದಲಾಯಿಸಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಕಾಣಲಿದ್ದಾರೆ. ಉದ್ಯೋಗಿಗಳು ಬಡ್ತಿಯನ್ನು ಪಡೆಯಲಿದ್ದು, ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.

Leave a Reply

Your email address will not be published. Required fields are marked *