Sharmitha gowda foreign trip : ಬಣ್ಣದ ಲೋಕದ ಸೆಳೆತ ಅಷ್ಟು ಸುಲಭವಲ್ಲ. ಒಮ್ಮೆ ಈ ಲೋಕಕ್ಕೆ ಎಂಟ್ರಿ ಕೊಟ್ಟರೆ ಸಾಕು, ತಾನಾಗಿಯೇ ನೇಮ್ ಫೇಮ್ ಬರುತ್ತದೆ. ಅಷ್ಟೇ ಅಲ್ಲದೇ ಬಣ್ಣದ ಲೋಕದಲ್ಲಿ ಸಕ್ರಿಯರಾಗುವ ಬದುಕಿನ ಬಗ್ಗೆ ಅಭಿಮಾನಿಗಳು ಒಂದು ಕಣ್ಣು ಇಟ್ಟಿರುತ್ತಾರೆ. ವಿಲನ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ನಟಿ ಶರ್ಮಿತಾ ಗೌಡ (Sharmitha Gowda) ರವರ ಬಗ್ಗೆ ಎಲ್ಲರಿಗೂ ತಿಳಿದಿದೆ.
ನಿಜ ಜೀವನದಲ್ಲಿಯೂ ಸಖತ್ ಮಾಡ್ರನ್ ಆಗಿರುವ ನಟಿ ಶರ್ಮಿತಾ ಗೌಡ ರವರು ಗೀತಾ ಸೀರಿಯಲ್ ನಲ್ಲಿ ವಿಜಯ್ ತಾಯಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿಕ್ಕಮಂಗಳೂರಿನ (Chikkamanglore) ವರಾದ ಇವರು ಎಂಎಸ್ಸಿ ಬಯೋ ಕೆಮೆಸ್ಟ್ರಿ (Bio Chemestry) ಓದಿದ್ದಾರೆ. ನಟನೆಯಲ್ಲಿ ಮಾತ್ರವಲ್ಲದೆ ಓದಿನಲ್ಲಿಯೂ ಮುಂದೆ ಇದ್ದ ಇವರು ಗೋಲ್ಡ್ ಮೆಡಲಿಸ್ಟ್. ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಮೊದಲು ನ್ಯೂಟ್ರಿಶನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಫ್ಯಾಷನ್ ಬಗ್ಗೆ ಹೆಚ್ಚು ಒಲವು ಹೊಂದಿದ್ದ ಇವರು ಮಿಸೆಸ್ ಕರ್ನಾಟಕ (Mrs Karnataka) ಸ್ಪರ್ಧೆಯಲ್ಲಿ ಭಾಗವಹಿಸಿ ರನ್ನರ್ ಅಪ್ ಕಿರೀಟವನ್ನು ತನ್ನದಾಗಿಸಿಕೊಂಡಿದ್ದರು.
ಜಾನಕಿ ರಾಘವ (Janaki Raghav) ಸೀರಿಯಲ್ ನಲ್ಲಿ ನಟಿಸುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ವಿಲನ್ ಪಾತ್ರದ ಮೂಲಕವೇ ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದು ಎಲ್ಲಿಲ್ಲದ ಬೇಡಿಕೆಯನ್ನು ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ (social media) ಸಖತ್ ಆಕ್ಟಿವ್ ಆಗಿರುವ ಶರ್ಮಿತಾ, ಫೋಟೋ ಹಾಗೂ ವಿಡಿಯೋಗಳ ಮೂಲಕ ಸುದ್ದಿಯಲ್ಲಿರುತ್ತಾರೆ.
ವೃತ್ತಿ ಜೀವನದ ಬ್ಯುಸಿಯ ನಡುವೆ ಬ್ರೇಕ್ ಪಡೆದುಕೊಂಡು ಪ್ರವಾಸ ಎಂದು ಸುತ್ತಾಡುತ್ತಾ ತಮ್ಮ ವೈಯುಕ್ತಿಕ ಜೀವನದ ಕುರಿತು ಅಪ್ಡೇಡ್ ನೀಡುತ್ತಿರುತ್ತಾರೆ. ಆಗಾಗ ಹೊಸ ಹೊಸ ಫೋಟೋಶೂಟ್ ಕ್ಲಿಕ್ಕಿಸಿಕೊಂಡು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳುವ ನಟಿ ಶರ್ಮಿತಾ ವಿಯೆಟ್ನಾಂ (Vietnam) ಪ್ರವಾಸದಲ್ಲಿದ್ದಾರೆ.
View this post on Instagram
ವಿಯೆಟ್ನಾಂ ಪ್ರವಾಸದಲ್ಲಿ ನಟಿ ಶರ್ಮಿತಾ ಬಿಕಿನಿ ಲುಕ್ನಲ್ಲಿ ಗಮನ ಸೆಳೆದಿದ್ದಾರೆ. ಬಿಕಿನಿ ತೊಟ್ಟು ಹಾಟ್ ಆಗಿ ಕ್ಯಾಮರಾಗೆ ಪೋಸ್ ನೀಡಿದ್ದು, ನಟಿಯ ಹಾಟ್ ಅವತಾರದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ನೆಟ್ಟಿಗರು ಈ ಫೋಟೋಗಳಿಗೆ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ನೆಟ್ಟಿಗನೊಬ್ಬನು, ನಿಮ್ಮ ಈ ಅಂದಕ್ಕೆ ಮನಸೋತಿದ್ದೇನೆ. ಈ ಅಂದವನ್ನು ಹೊಗಳಲು ಪದಗಳೇ ಇಲ್ಲ ಎಂದರೆ, ಮತ್ತೊಬ್ಬ ಅಭಿಮಾನಿ ಯಾವ ಬಾಲಿವುಡ್ ನಟಿಗಿಂತ ಕಮ್ಮಿ ಇಲ್ಲ” ಎಂದು ಪ್ರತಿಕ್ರಿಯೆ ನೀಡಿದ್ದಾನೆ.