Shaktivale and muttukumar : ಪಕ್ಕದ ಮನೆಯವರ ಜೊತೆಗೆ ಸ್ನೇಹ ಸಂಬಂಧ, ವಿಷಯ ತಿಳಿದು ಪತ್ನಿಗೆ ಶಕ್ತಿವೇಲ್ ವಾರ್ನಿಂಗ್, ಕೊನೆಗೆ ಈ ಖತರ್ನಾಕ್ ಲೇಡಿ ತೆಗೆದುಕೊಂಡ ನಿರ್ಧಾರವೇನು ಗೊತ್ತಾ.. ಮನುಷ್ಯನು ಯಾರನ್ನು ಯಾರು ಕೂಡ ನಂಬದ ಸನ್ನಿವೇಶಗಳು ನಿರ್ಮಾಣವಾಗಿದೆ. ಎಷ್ಟೋ ಸಂಬಂಧಗಳಲ್ಲಿ ನಂಬಿಕೆಯಿಟ್ಟು ಜೊತೆಗೆ ನಡೆಯುವವರಿಗೆ ಬೆನ್ನ ಹಿಂದೆ ಚೂರಿ ಹಾಕುವವರ ಸಂಖ್ಯೆಯೇ ಹೆಚ್ಚು ಎನ್ನಬಹುದು.
ಕೆಲವೊಮ್ಮೆ ಇಂತಹ ಕೆಲವು ಘಟನೆಗಳು ಬೆಳಕಿಗೆ ಬಂದಾಗ ಅಚ್ಚರಿಯಾಗುತ್ತದೆ. ಈ ವಡಿವೇಲ್ ಅವರು ಸೇಲಂ ಜಿಲ್ಲೆಯ ಮೆಟ್ಟೂರು ಸಮೀಪದ ಕಾರೈಕಾಡು ಕರ್ನಾಟಕದ ಗಡಿ ಪ್ರದೇಶದಿಂದ ಬಂದವರು. ಇವರಿಗೆ ಒಬ್ಬ ಮಗನಿದ್ದನು, ಅವನೇ ಶಕ್ತಿವೇಲ್. ಈ ಶಕ್ತಿವೇಲ್ ಪತ್ನಿ ಪುಗಹರಸಿ. ಈ ದಂಪತಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಮುತ್ತುಕುಮಾರ್ ಎನ್ನುವವರ ಮನೆಯ ಸಮೀಪ ವಾಸವಾಗಿದ್ದರು.
ಈ ಶಕ್ತಿವೇಲು ಪತ್ನಿ ಪುಗಹರಸಿ ಮುತ್ತು ಕುಮಾರ್ ಜೊತೆಗೆ ಸಂಬಂಧ ಹೊಂದಿದ್ದಳು. ಆರಂಭದಲ್ಲಿ ಶಕ್ತಿವೇಲ್ ಗೆ ಇದರ ಅರಿವೇ ಇರಲಿಲ್ಲ. ಪತ್ನಿಯ ನಡವಳಿಕೆಯಲ್ಲಿ ಒಂದಷ್ಟು ಬದಲಾವಣೆಯನ್ನು ಗಮನಿಸಿದ್ದನು. ಆದಾದ ಬಳಿಕ ಪತ್ನಿ ಹಾಗೂ ಆತನಿಗೆ ಎಚ್ಚರಿಕೆ ನೀಡಿದ್ದನು.ಆದರೆ ಖೋಟಾನೋಟಿನ ಚಟಕ್ಕೆ ಬಿದ್ದಿದ್ದ ಈ ಮಹಿಳೆ ತನ್ನ ಪತಿಯನ್ನು ಮುಗಿಸಲು ನಿರ್ಧರಿಸಿದ್ದಳು.
ಇದಾದ ಬಳಿಕ ಮನೆಗೆ ಬಂದಿದ್ದ ಶಕ್ತಿವೇಲ್ಗೆ ನೀರಿನಲ್ಲಿ ನಿದ್ದೆ ಮಾತ್ರೆ ಬೆರೆಸಿ ಪ್ರ-ಜ್ಞೆ ತಪ್ಪಿಸಿದ್ದಳು. ಅಷ್ಟೇ ಅಲ್ಲದೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶಕ್ತಿವೇಲ್‌ಗೆ ವಿ-ಷ ಬೆರೆಸಿದ ಹಾಲನ್ನು ನೀಡಿದ್ದಳು. ಆದರೆ, ಶಕ್ತಿವೇಲು ಬದುಕಿದರೆ ಏನಾಗಬಹುದು ಎಂಬ ಭ-ಯದಲ್ಲಿ ಮತ್ತೆ ವಿ-ಷಪೂರಿತ ಆಹಾರ ನೀಡಿದ್ದಳು. ಹೀಗಾಗಿ ಪ್ರ-ಜ್ಞಾಹೀನ ಸ್ಥಿತಿಯಲ್ಲಿ ಶಕ್ತಿವೇಲ್ ಕೊನೆಯು ಸಿರೆಳೆದಿದ್ದನು.
ಆದರೆ ಶಕ್ತಿವೇಲ್ ಹಠಾತ್ ಸಾ-ವನ್ನಪ್ಪಿದ್ದಾರೆ ಎಂದು ಪುಗಹರಸಿ ಸಂಬಂಧಿಕರಿಗೆ ತಿಳಿಸಿದ್ದಳು. 37 ವರ್ಷದ ಶಕ್ತಿವೇಲ್ ಹಠಾತ್ ಸಾ-ವಿನಿಂದ ಅ-ನುಮಾನಗೊಂಡ ಆತನ ಸಹೋದರ ಮುತ್ತುಸಾಮಿ, ತನ್ನ ಸಹೋದರನ ಸಾ-ವಿನಲ್ಲಿ ನಿಗೂಢತೆ ಇದೆ ಎಂದು ಕೊಳತ್ತೂರು ಪೊಲೀಸ್ ಠಾಣೆಯಲ್ಲಿ ದೂ-ರು ದಾಖಲಿಸಿದ್ದರು.ಮಾಹಿತಿ ಪಡೆದ ಕೊಳತ್ತೂರು ಪೊಲೀಸರು ಸ್ಥಳಕ್ಕಾಗಮಿಸಿದರು.
ಶಕ್ತಿವೇಲು ಮೃ-ತದೇಹವನ್ನು ಹೊರತೆಗೆದು ಮ-ರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಸರ್ಕಾರಿ ಜನರಲ್ ಆಸ್ಪತ್ರೆಗೆ ರವಾನಿಸಿದ್ದರು. ಕೊನೆಗೆ ಪೊಲೀಸರು ಸುತ್ತ ಮುತ್ತಲಿನಲ್ಲಿ ತನಿಖೆ ಆರಂಭಿಸಿದ್ದು, ತನಿಖೆಯಲ್ಲಿ ಈ ಮಹಿಳೆಗೆ ಪಕ್ಕದ ಮನೆಯ ಮುತ್ತುಕುಮಾರ್ ಜೊತೆಗೆ ಸಂಬಂಧವಿರುವುದು ಬೆಳಕಿಗೆ ಬಂದಿತ್ತು. ಕೊನೆಗೆ ಅನುಮಾನಗೊಂಡ ಕೊಳತ್ತೂರು ಪೊಲೀಸರು ಪುಗಹರಸಿ ಮತ್ತು ಮುತ್ತುಕುಮಾರ್ ನನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರು.