ದಿನಕ್ಕೆ ಐದು ಲಕ್ಷ ದುಡಿಯುತ್ತಿದ್ದ ನಟಿ ಶಕೀಲಾ ದಿಡೀರ್ ಅಂತ ಚಿತ್ರರಂಗದಿಂದ ಮಾಯವಾಗಿದ್ದು ಹೇಗೆ ಗೊತ್ತಾ?!! ನಿಜಕ್ಕೂ ಸಿನೆಮಾ ರಂಗ ಮಾಯಾ ಲೋಕ!!!

ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿರುವ ನಟಿ ಶಕೀಲಾ (Actress Shakila) ರವರ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ. ಒಂದು ಕಾಲದಲ್ಲಿ ಗ್ಲಾಮರಸ್ ನಿಂದಲೇ ಪಡ್ಡೆ ಹೈಕಳ ನಿದ್ದೆ ಕದ್ದಿದ್ದ ಬೆಡಗಿ ಇವರು. ವಯಸ್ಕ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡವರು. ತಮಿಳು (Tamil) ಮತ್ತು ಮಲಯಾಳಂ (Malayalam) ಚಿತ್ರಗಳಲ್ಲಿ ನಟಿಸಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಆದರೆ ಇದೀಗ ಕುಕು ವಿತ್ ಕೋಮಾಲಿ (kukku with Komali) ರಿಯಾಲಿಟಿ ಶೋ ಮೂಲಕ ಮತ್ತೆ ಶಕೀಲಾ ಕಿರುತೆರೆಗೆ ಕಮ್‌ಬ್ಯಾಕ್‌ ಮಾಡಿದ್ದಾರೆ.

ಇತ್ತ ಕಿರುತೆರೆಯ ಶೋವೊಂದರಲ್ಲಿ ಭಾಗಿಯಾಗಿದ್ದು, ಸಂದರ್ಶನವೊಂದರಲ್ಲಿ ತನ್ನ ಬದುಕಿನ ಕೆಲವು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಇತ್ತೀಚೆಗಷ್ಟೇ ನಟಿ ಶಕೀಲಾ (Actress Shakila) ರವರು ತಮ್ಮ ಹಿಂದಿನ ಜೀವನ ಮತ್ತು ತಾವು ಎದುರಿಸಿದ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ. “ನನ್ನ ಬಗ್ಗೆ ತುಂಬಾ ತಪ್ಪು ಮಾಹಿತಿಗಳಿವೆ. ನನ್ನ ವಿಕಿಪೀಡಿಯಾ ಪುಟದಲ್ಲಿ ನಾನು ಐಷಾರಾಮಿ ಫ್ಲಾಟ್ ಮತ್ತು BMW ಕಾರ್ ಹೊಂದಿದ್ದೇನೆ ಎನ್ನುವ ಮಾಹಿತಿ ದೆ. ಆದರೆ ಅದು ನಿಜವಲ್ಲ. ನಾನು ಇನ್ನೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ” ಎನ್ನುವುದು ನೆನಪಿಸಿಕೊಂಡಿದ್ದಾರೆ.

ಅದಲ್ಲದೇ, “ಆ ಕಾಲದಲ್ಲಿ ದಿನವೊಂದಕ್ಕೆ 4 ಲಕ್ಷ ರೂ. ಗಳಿಸುತ್ತಿದ್ದೆ, ಅಷ್ಟೊಂದು ಜನಪ್ರಿಯತೆ ಇತ್ತು. ವಯಸ್ಕರ ಸಿನಿಮಾಗಳಲ್ಲಿ ನಟಿಸಿ ಗಳಿಸಿದ ಎಲ್ಲಾ ಹಣವನ್ನು ತನ್ನ ಸಹೋದರಿಗೆ ನೀಡಿದ್ದೆ. ಐಟಿ ಅಧಿಕಾರಿಗಳು ದಾಳಿ ಮಾಡುತ್ತಾರೆ ಎಂದು ಹೇಳಿ ನನ್ನ ತಂಗಿ ನನ್ನ ಎಲ್ಲಾ ಹಣ, ಆಸ್ತಿಯನ್ನು ಪಡೆದು ಮೋಸ ಮಾಡಿದ್ದಳು. ಈಗ ನನಗೆ ಏನೂ ಕೂಡ ಉಳಿದಿಲ್ಲ. ನನ್ನ ಬಳಿ ಬಿಎಂಡಬ್ಲ್ಯೂ ಕಾರ್ ಇದೆ ಎಂದು ವದಂತಿ ಹಬ್ಬಿಸುತ್ತಿದ್ದಾರೆ. ಅಸಲಿಗೆ ನನ್ನ ಬಳಿ ಸ್ವಂತ ಮನೆ ಕೂಡ ಇಲ್ಲ” ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ.

ಮಾತು ಮುಂದುವರೆಸಿದ ನಟಿ,”ನನ್ನ ಚಿತ್ರಗಳು ಹೆಚ್ಚಾಗಿ ಸಣ್ಣ ಬಜೆಟ್‌ನಲ್ಲಿ ತಯಾರಾಗಿದ್ದರೂ, ಸೂಪರ್‌ಸ್ಟಾರ್‌ಗಳ ಸಿನಿಮಾಗಳಿಗೆ ಪ್ರಬಲ ಪೈಪೋಟಿ ಕೊಡುತ್ತಿತ್ತು. ಇದನ್ನು ಅರಿತ ನಟ ಮೊಮ್ಮುಟ್ಟಿ ನನ್ನ ಸಿನಿಮಾಗಳ ರಿಲೀಸ್‌ಗೆ ತೊಂದರೆ ಕೊಡುತ್ತಿದ್ದರು ಎಂದು ಆರೋಪಿಸಿದ್ದರು. ನಿಜ ಹೇಳಬೇಕು ಅಂದ್ರೆ ನಾನು ನಾನು ಮಲಯಾಳಂ ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಲು ಇದು ಒಂದು ಕಾರಣವಾಗಿತ್ತು.” ಎಂದಿದ್ದಾರೆ.

Leave a Reply

Your email address will not be published. Required fields are marked *