ಮೊದಲ ಬಾರಿಗೆ ಗರ್ಭಿಣಿಯಾದ ನಟಿ ಕಾವ್ಯ ಗೌಡ!! ಗಂಡನ ಜೊತೆ ಬಿಬಿ ಬಂಪ್ ಫೋಟೋ ಶೂಟ್ ಮಾಡಿ ಸಂಭ್ರಮಿಸಿದ ನಟಿ..

‘ಶುಭ ವಿವಾಹ’, ‘ಗಾಂಧಾರಿ’, ‘ರಾಧಾ ರಮಣ’ ಅಂತಹ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಅಭಿನಯಿಸಿದ ಚೆಲುವೆ ಕಾವ್ಯ ಗೌಡ. ಕಾವ್ಯ ಗೌಡ ಅವರು ಕರ್ನಾಟಕದಾತ್ಯಂತ ಜನಪ್ರಿಯತೆ ಗಳಿಸಿದ ಸೀರಿಯಲ್ ನಟಿ. ಕಾವ್ಯ ಗೌಡ ಅವರು ಸುಮಾರು ಎರಡು ವರ್ಷಗಳ ಹಿಂದೆ ಸೋಮಶೇಖರ್ ಎಂಬುವ ಬಿಸಿನೆಸ್ ಮ್ಯಾನ್ ಒಬ್ಬರನ್ನು ಮದುವೆಯಾಗಿದ್ದಾರೆ.

ದುಬೈನಲ್ಲಿ ದೊಡ್ಡ ಬಿಜಿನೆಸ್ ಮ್ಯಾನ್ ಆಗಿ ಕೋಟ್ಯಾಂತರ ಹಣ ಮಾಡಿರುವ ಸೋಮಶೇಖರ್ ಅವರನ್ನು ಮದುವೆಯಾಗಿ ಕಾವ್ಯ ಗೌಡ ಅವರು ಸುಖ ಸಂಸಾರವನ್ನು ನಡೆಸುತ್ತಿದ್ದಾರೆ ಮದುವೆಯಾದ ನಂತರ ಕಾವ್ಯ ಗೌಡ ಅವರು ಮತ್ತೆ ಸೀರಿಯಲ್ ಕಡೆಗೆ ತಲೆ ಹಾಕಲಿಲ್ಲ. ನಟನೆಯನ್ನು ಬಿಟ್ಟು ಗಂಡನ ಜೊತೆ ಹಾಯಾಗಿ ಸಂಸಾರ ಮಾಡಿಕೊಂಡಿದ್ದಾರೆ.

ಸುಮಾರು ಎರಡು ವರ್ಷಗಳ ನಂತರ ಕಾವ್ಯ ಗೌಡ ಅವರು ಸಿಹಿ ಸುದ್ದಿ ಒಂದನ್ನು ನೀಡಿದ್ದಾರೆ. ಅದು ಏನೆಂದರೆ ಕಾವ್ಯ ಗೌಡ ಅವರು ಇದೀಗ ತುಂಬು ಗರ್ಭಿಣಿಯಾಗಿದ್ದಾರೆ. 2024 ಕ್ಕೆ ಕರ್ನಾಟಕಕ್ಕೆ ಕಾವ್ಯ ಗೌಡ ಸಿಹಿ ಸುದ್ದಿ ನೀಡಲಿದ್ದಾರೆ. ಸೋಮಶೇಖರ್ ಅವರ ಜೊತೆ ಕಾವ್ಯ ಗೌಡ ಅವರು ಇದೀಗ ಫೋಟೋಶೂಟ್ ಒಂದನ್ನು ಮಾಡಿದ್ದಾರೆ.

ಕಾವ್ಯ ಗೌಡ ಅವರ ಬೇಬಿ ಬಂಪ್ ಫೋಟೋಶೂಟ್ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಮುದ್ದಾಗಿ ಕಾಣುತ್ತಿರುವ ಕಾವ್ಯ ಗೌಡ ಮತ್ತು ಗಂಡ ಸೋಮಶೇಖರ್ ಅವರು ಫೋಟೋಶೂಟ್ ನಲ್ಲಿ ಮಿಂಚುತ್ತಿದ್ದಾರೆ. ಎರಡನೇ ವರ್ಷದ ಮದುವೆ ವಾರ್ಷಿಕೋತ್ಸವದ ದಿನ ಕಾವ್ಯ ಗೌಡವರು ತುಂಬ ಗರ್ಭಿಣಿಯಾಗಿರುವ ಈ ಒಂದು ಸಿಹಿ ಸುದ್ದಿಯನ್ನು ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *