Senthil kumar and vaishnavi : ತನ್ನ ಹಾಗೂ ಪ್ರಿಯಕರ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಸೆಂಥಿಲ್ ಕುಮಾರ್, ವಿದೇಶದಿಂದ ಬಂದಿದ್ದ ಪತಿಯ ಕೈ ಕಾಲು ಕ-ತ್ತರಿಸುವಂತೆ ಪ್ರಿಯಕರನಿಗೆ ಹೇಳಿದ್ದ ಮಹಿಳೆ, ಮುಂದೆ ಆಗಿದ್ದೇನು ಗೊತ್ತಾ?.. ಮನುಷ್ಯನು ಎಲ್ಲಾ ವಿಚಾರದಲ್ಲಿಯೂ ಆತುರನಾಗಿದ್ದಾನೆ. ಬುದ್ಧಿವಂತನಾಗುತ್ತಿದ್ದಂತೆ ಬದುಕಿನಲ್ಲಿ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಯೋಚಿಸುವುದಕ್ಕೆ ಹೋಗುತ್ತಿಲ್ಲ.
ಅದಲ್ಲದೇ ಕೆಲವು ತಪ್ಪು ನಿರ್ಧಾರಗಳು ಬದುಕಿನ ದಿಕ್ಕನ್ನೇ ಬದಲಾಯಿಸುತ್ತಿದೆ. ಹೌದು, ಮಧುರೈ ತಿರುಪಾಲೆ ಗ್ರಾ. ನಗರದ ಸೆಂಥಿಲ್‌ಕುಮಾರ್ ಅವರು ಇಂಜಿನಿಯರ್ ಆಗಿದ್ದ ಅವರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು. ಈ ಸೆಂಥಿಲ್‌ಕುಮಾರ್ ರಾಮನಾಥಪುರದ ವೈಷ್ಣವಿ (24) ಜೊತೆಗೆ ವಿವಾಹವಾಗಿದ್ದು, ಈ ದಂಪತಿಗಳಿಗೆ ಒಬ್ಬಳು ಮಗಳಿದ್ದಳು. ಸೆಂಥಿಲಕುಮಾರ್ ವರ್ಷಕ್ಕೊಮ್ಮೆ ಊರಿಗೆ ಬರುತ್ತಿದ್ದರು.

2022 ರ ಅಕ್ಟೋಬರ್ 27ರಂದು ಮದುರೈಗೆ ಬಂದು ಮಗಳನ್ನು ಶಾಲೆಗೆ ಬಿಟ್ಟು ದ್ವಿಚಕ್ರವಾಹನದಲ್ಲಿ ಮನೆಗೆ ಮರಳುತ್ತಿದ್ದರು. ಆ ವೇಳೆ ಜಿ.ಆರ್.ನಗರದ ಪೊನ್ವಿಜನಗರ ಬಳಿ ದ್ವಿಚಕ್ರವಾಹನದಲ್ಲಿ ಹೆಲ್ಮೆಟ್ ಧರಿಸಿ ಬಂದ ಇಬ್ಬರು ವ್ಯಕ್ತಿಗಳು ಮಚ್ಚಿನಿಂದ ಕೊ ಚ್ಚಿ ಕೊ-ಲೆ ಮಾಡಿ ಪರಾರಿಯಾಗಿದ್ದು, ಈ ಘಟನೆಯು ಎಲ್ಲರನ್ನು ಬೆಚ್ಚಿ ಬೀಳಿಸುವಂತೆ ಮಾಡಿತ್ತು.
ಗಂಭೀರವಾಗಿ ಗಾ-ಯಗೊಂಡಿದ್ದ ಸೆಂಥಿಲ್ ಕುಮಾರ್ ಅವರನ್ನು ನೆರೆಹೊರೆಯವರು ಆಸ್ಪತ್ರೆಗೆ ದಾಖಲಿಸಿದ್ದರು. ಈ ಘಟನೆ ಸಂಬಂಧ ತಿರುಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಇದೇ ವೇಳೆ ಸೆಂಥಿಲ್‌ಕುಮಾರ್ ಪತ್ನಿ ವೈಷ್ಣವಿ ವಿರುದ್ಧ ಸಿಪಿಸಿಐಡಿಯಲ್ಲಿ ಹಲ್ಲೆ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸುವಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು,
ಈ ಹಿನ್ನೆಲೆಯಲ್ಲಿ ಪೊಲೀಸರು ಸೆಂಥಿಲ್ ಕುಮಾರ್ ಪತ್ನಿ ವೈಷ್ಣವಿಯ ಸೆಲ್‌ಫೋನ್ ನಂಬರ್ ಪಡೆದು ಪರಿಶೀಲನೆ ನಡೆಸಿದ್ದಾರೆ. ಹಲವು ಗಂಟೆಗಳ ಕಾಲ ವೈಷ್ಣವಿಯೂ ಒಬ್ಬರೊಂದಿಗೆ ಮಾತನಾಡಿದ್ದು ಬಹಿರಂಗವಾಗಿತ್ತು. ವೈಷ್ಣವಿ ತನ್ನ ಮಾವನ ಮಗ ಶಿವಗಂಗೈ ಮೂಲದ ಇಂಜಿನಿಯರ್ ವೆಂಕಟೇಶನ್ (25) ಎಂಬಾತನ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದಳು ಎಂದು ತಿಳಿದುಬಂದಿತ್ತು.
ಸೆಂಥಿಲ್ ಕುಮಾರ್ ವಿದೇಶದಿಂದ ಊರಿಗೆ ಬಂದಿದ್ದರಿಂದ ವೈಷ್ಣವಿಗೆ ತನ್ನ ಪ್ರಿಯಕರನನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ವೈಷ್ಣವಿ ಸೆಂಥಿಲ್ ಕುಮಾರ್ ಅವರ ಒಂದು ಕೈ ಕಾಲು ಕ-ತ್ತರಿಸಿದರೆ ಮನೆಯಿಂದ ಹೊರಗೆ ಬರಲು ಸಾಧ್ಯವಿಲ್ಲ ಎಂದುಕೊಂಡು ಈ ಬಗ್ಗೆ ತನ್ನ ಪ್ರಿಯಕರ ವೆಂಕಟೇಶನಿಗೆ ತಿಳಿಸಿದ್ದಳು.
ಹೀಗಾಗಿ ವೆಂಕಟೇಶ್ ತನ್ನ ಸ್ನೇಹಿತ ಕೂಲಿ ಕಾರ್ಮಿಕ ಶಾಂತಕುಮಾರ್ ಗೆ ವಿಷಯ ತಿಳಿಸಿದ್ದನು. ಸೆಂಥಿಲ್ ಕುಮಾರ್ ಕೈ ಕಾಲು ಕ- ತ್ತರಿಸಲು 1 ಲಕ್ಷ ರೂಪಾಯಿ ಕೇಳಿದ್ದರು. ವೈಷ್ಣವಿ ತನ್ನ ಚಿನ್ನಾಭರಣಗಳನ್ನು ಶಿವಗಂಗೈಯಲ್ಲಿ ಲೇವಾದೇವಿಗಾರ ವೆಂಕಟೇಶನ ಬಳಿ ಗಿರವಿ ಇಟ್ಟು ಒಂದು ಲಕ್ಷ ರೂ. ಹೊಂದಿಸಿದ್ದಳು. ಈ ಹಣವನ್ನು ಶಾಂತಕುಮಾರ್ ಮತ್ತು ಮತ್ತೊಬ್ಬರಿಗೆ ನೀಡಿದ್ದಳು.
ಹಣ ಪಡೆದುಕೊಂಡ ಈ ಇಬ್ಬರೂ ದ್ವಿಚಕ್ರವಾಹನದಲ್ಲಿ ಬಂದು ಸೆಂಥಿಲ್‌ಕುಮಾರ್‌ಗೆ ಕೈ ಕಾಲು ಕ-ತ್ತರಿಸಿ ಕಟ್ ಮಾಡಿ ಪರಾರಿಯಾಗಿದ್ದು, ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿತ್ತು. ವೈಷ್ಣವಿ ಹಾಗೂ ಆಕೆಯ ಪ್ರಿಯಕರ ವೆಂಕಟೇಶನನ್ನು ಪೊಲೀಸರು ಬಂಧಿಸಿದ್ದರು. ಕೂಲಿ ಮುಖಂಡ ಶಾಂತಕುಮಾರ್ ಮತ್ತಿತರರಿಗಾಗಿ ಹುಡುಕಾಟ ನಡೆಸಿದ್ದರು. ಒಟ್ಟಿನಲ್ಲಿ ಪತಿಯ ಕೈ ಕಾಲು ತೆ-ಗೆಯುವ ಮಟ್ಟಿಗೆ ಈ ಮಹಿಳೆಯೂ ಯೋಚಿಸಿರುವುದು ನಿಜಕ್ಕೂ ವಿಪರ್ಯಾಸ ಎನ್ನಬಹುದು.
