ಚಿಕಿತ್ಸೆ ಫಲಕಾರಿಯಾಗದೇ ಕೊ ರೋನಾ ದಿಂದ ಕೊನೆಯುಸಿರೆಳೆದ ತಮಿಳುನಾಡಿನ ಡಿಎಂಡಿಕೆ ನಾಯಕ ಹಾಗೂ ನಟ ವಿಜಯಕಾಂತ್

ತಮಿಳುನಾಡಿನ ಡಿಎಂಡಿಕೆ ನಾಯಕ ಹಾಗೂ ನಟ ವಿಜಯಕಾಂತ್ (Vijayakanth) ಅವರು ಇಂದು ಮುಂಜಾನೆಯ ವೇಳೆಯಲ್ಲಿ ಮೃ-ತ ಪಟ್ಟಿದ್ದಾರೆ. ಹೌದು, ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ (DMDK) ಸಂಸ್ಥಾಪಕ ವಿಜಯಕಾಂತ್ (Vijayakanth Passes Away) ಅವರಿಗೆ 71 ವರ್ಷ ವಯಸಾಗಿದ್ದು, ಅನಾರೋಗ್ಯ ಸಮಸ್ಯೆಯಿದ್ದ ಕಾರಣ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು.

ಹೌದು, ಕೋವಿಡ್‌ನಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದಾದ ಬಳಿಕ ಚೆನ್ನೈನ ಖಾಸಗಿ ಆಸ್ಪತ್ರೆ (Chennai Private Hospital) ಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೇ ಚೆನ್ನೈನಲ್ಲಿ ಗುರುವಾರ (ಡಿ.28) ದಂದು ಇ-ಹಲೋಕ ತ್ಯಜಿಸಿದ್ದಾರೆ.

ರಾಜಕೀಯ ಹಾಗೂ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದ ಇವರು, ಕಾಜಾ ನಿರ್ದೇಶಿಸಿದ ಇನಿಕ್ಕುಮ್ ಇಳಮೈ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಈಗಾಗಲೇ ಅಮ್ಮನ್ ಕೋಯಿಲ್ ಕಿಜಕ್ಕಲೆ, ಚಿನ್ನ ಗೌಂಡರ್, ವೈದೇಗಿ ಕತಿರುಂಡಾಲ್, ವಲ್ಲರಸು, ವನತೈ ಪೋಲಾ, ಕ್ಯಾಪ್ಟನ್ ಪ್ರಭಾಕರನ್, ಉಳವು ತುರೈ, ಕಣ್ಣುಪಾದ ಪೋಕುತಯ್ಯ, ರಮಣ, ಹೀಗೆ ಅನೇಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.

2015ರ ತಮಿಳು ಚಲನಚಿತ್ರ ‘ಸಗಪ್ತಂ’ನಲ್ಲಿ ಕೊನೆಯದಾಗಿ ಬಣ್ಣ ಹಚ್ಚಿದ್ದರು. ಆದಾದ ಬಳಿಕ ಯಾವುದೇ ಸಿನಿಮಾದಲ್ಲಿಯು ಕಾಣಿಸಿಕೊಂಡಿರಲಿಲ್ಲ. ಆದರೆ ಇಂದು ಇಹಲೋಕ ತ್ಯಜಿಸಿದ ವಿಜಯ್​ಕಾಂತ್ ಅಗಲಿಕೆಗೆ ತಮಿಳು ಚಿತ್ರರಂಗ ಕಂಬನಿ ಮಿಡಿದಿದೆ.

Leave a Reply

Your email address will not be published. Required fields are marked *