ಕಾವೇರಿ ವಿ-ವಾದಕ್ಕೆ ಸಂಬಂಧ ಪಟ್ಟಂತೆ ಕೆಂಡ ಕಾರಿದ ಅನಂತ್ ನಾಗ್! ತಮಿಳು ನಾಡಿಗೆ ಮುಟ್ಟಿ ನೋಡಿ ಕೊಳ್ಳುವ ಹಾಗೆ ಮಾಡಿದ ಅನಂತ್ ನಾಗ್!!

ಕಾವೇರಿ ಕಿ-ಚ್ಚು ದಿನೇ ದಿನೇ ಹೆಚ್ಚಾಗುತ್ತಿದ್ದು ಮಂಡ್ಯ (Mandya) ಹಾಗೂ ಬೆಂಗಳೂರಿ (Banglore) ರೈತರು, ಕನ್ನಡಪರ ಸಂಘಟನೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಅದಲ್ಲದೇ ಸುಪ್ರೀಂ ಕೋರ್ಟ್ ಆದೇಶದಂತೆ ಕೆಆರ್‌ಎಸ್ (KRS) ಹಾಗೂ ಕಬಿನಿ ಜಲಾಶಯ (Kabini Dam) ದಿಂದ ತಮಿಳುನಾಡಿಗೆ 5,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ.

ಕಾವೇರಿ ವಿ-ವಾದಕ್ಕೆ ಸಂಬಂಧ ಪಟ್ಟಂತೆ ಕನ್ನಡ ಸಿನಿಮಾರಂಗದ ನಟ ನಟಿಯರು ಪರವಾಗಿ ಮಾತನಾಡಿದ್ದು ಬೆಂಬಲ ಸೂಚಿಸುತ್ತಿದ್ದಾರೆ. ಆದರೆ ಇದೀಗ ಚಂದನವನದ ಹಿರಿಯ ನಟ ಅನಂತ್ ನಾಗ್ (Ananth Nag) ಅವರು ಕಾವೇರಿ ವಿವಾದದ ಬಗ್ಗೆ ಮೌನ ಮುರಿದಿದ್ದಾರೆ.

ಕಾವೇರಿ ಬಿಕ್ಕಟ್ಟಿನ ಸಂಬಂಧ ವಿಡಿಯೊಂದರಲ್ಲಿ ಮಾತನಾಡಿರುವ ಹಿರಿಯ ನಟ ಅನಂತ್ ನಾಗ್ ಅವರು, ಬ್ರಿಟಿಷರ ಕಾಲದಿಂದಲೂ ಕರ್ನಾಟಕಕ್ಕೆ ಅನ್ಯಾಯ ಆಗುತ್ತಲೇ ಇದೆ.ಬ್ರಿಟಿಷರು ತಮಿಳುನಾಡಿಗೆ ಹೆಚ್ಚು ನೀರು ಸಿಗುವಂತಹ ಅವ್ಯವಸ್ಥೆ ಮಾಡಿದ್ದರು. ಕಳೆದ ಅನೇಕ ವರ್ಷಗಳಲ್ಲಿ ಈ ವಿವಾದ ಹೆಚ್ಚಾಗುತ್ತಲೇ ಬಂದಿದೆ. ಕರ್ನಾಟಕ ಇದೀಗ ಕಠಿಣ ನಿಲುವು ತೆಗದುಕೊಳ್ಳಬೇಕಾಗಿದೆ.

ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ರಾಜ್ಯದ ಶಾಸಕರು, ಸಂಸದರು ಒಗ್ಗಟ್ಟಾಗಿ ನಿಂತುಕೊಳ್ಳಬೇಕು ಎಂದು ಹೇಳಿದ್ದಾರೆ. ಮಳೆ ಕಡಿಮೆ ಇದ್ದ ಸಂದರ್ಭದಲ್ಲಿ ಎಂದಿನಂತೆ ತಮಿಳುನಾಡು ಕಾವೇರಿ ವಿವಾದ ಆರಂಭಿಸಿದೆ. ಇದನ್ನು ಸುಮಾರು 60 ವರ್ಷದಿಂದ ನೋಡಿಕೊಂಡು ಬಂದಿದ್ದೇವೆ.

ಅಲ್ಲಿ ಅಧಿಕಾರಕ್ಕೆ ಬರುವುದು ಕೇವಲ ಡಿಎಂಕೆ ಸರ್ಕಾರಗಳೇ. ಕರ್ನಾಟಕ ಸರಿಯಾಗಿ ಕಾವೇರಿ ನೀರು ಬಿಡುತ್ತಿಲ್ಲ ಎನ್ನುವ ಭಾವನೆಯನ್ನು ಅಲ್ಲಿನ ಜನರಿಗೆ ಅವರು ತಂದಿದ್ದಾರೆ. ಕರ್ನಾಟಕ ಎಂದರೆ ಪಾಕಿಸ್ತಾನ, ಶ್ರೀಲಂಕಾ ಅಂದುಕೊಂಡಿದ್ದಾರೆ. ಯುದ್ಧಕ್ಕೆ ನಿಂತುಕೊಂಡಂತೆ ಅವರ ನಡೆಯಿದೆ. ಮಾತುಕತೆಯಲ್ಲಿ ಬಗೆಹರಿಸಲು ಅವರಿಗೆ ಇಷ್ಟವಿಲ್ಲ. ಅವರೆಲ್ಲರೂ ಒಗ್ಗಟ್ಟಾಗಿ ಕೇಂದ್ರ ಸರ್ಕಾರಕ್ಕೆ ಹೋಗಿ ಕಾವೇರಿ ಸಮಸ್ಯೆಯನ್ನು ಪ್ರತಿನಿಧಿಸುತ್ತಾರೆ.

ನಮ್ಮವರು ಅಷ್ಟೇ ಬಲದಿಂದ ಹೋಗಿ ಪ್ರತಿನಿಧಿಸಿದ್ದು ಕೇಳಿಬರುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಕಾವೇರಿ ನೀರು ಅವರಿಗೆ ಕುಡಿಯಲು ಅಲ್ಲ ಬದಲಾಗಿ ಕೈಗಾರಿಕೆಗಳಿಗೆ ಹಾಗೂ ಕೃಷಿಗೆ ಬಳಕೆಗೆ, ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲುವ ಸಮಯ ಬಂದಿದೆ. ನಮ್ಮ ಎಲ್ಲ ಶಾಸಕರು, ಸಂಸದರು ಒಗ್ಗಟ್ಟಿನಿಂದ ನಿಂತುಕೊಂಡು ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು. ಈ ಕುರಿತು ದಿಟ್ಟ ನಿಲುವು ತಾಳಬೇಕು ಎಂದುದು ಅನಂತ್ ನಾಗ್ ಅ-ಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *