ಪ್ರಿಯಕರನಿಗಾಗಿ ಪಾಕ್ ನಿಂದ ಭಾರತಕ್ಕೆ ಬಂದ ಸೀಮಾ ಹೈದರ್, ತನಿಖೆ ನಡೆಸಿದ ಉತ್ತರ ಪ್ರದೇಶ ಎಟಿಎಸ್, ಹೊರ ಬಂದ ಸತ್ಯವೇನು ನೋಡಿ ನಿಜಕ್ಕೂ ಅಚ್ಚರಿ ಮೂಡಿಸುತ್ತೆ!!

ಪ್ರೀತಿ ಕುರುಡು, ಪ್ರೀತಿಗೆ ಕಣ್ಣಿಲ್ಲ. ಕೆಲವೊಮ್ಮೆ ಈ ಪ್ರೀತಿಯು ವ್ಯಕ್ತಿಯ ಕೈಯಲ್ಲಿ ಯಾವ ಕೆಲಸವನ್ನಾದರೂ ಮಾಡಿಸಿ ಬಿಡುತ್ತದೆ ಎನ್ನುವುದಕ್ಕೆ ಈಗಾಗಲೇ ಕೆಲವು ಘಟನೆಗಳು ಸಾಕ್ಷಿಯಾಗಿವೆ. ಇದೀಗ ಅಂತಹದ್ದೆ ಘಟನೆಯ ಸಾಲಿಗೆ ಪ್ರೀತಿಗಾಗಿ ಭಾರತಕ್ಕೆ ಬಂದ ಸೀಮಾ ಹೈದರ್ (Seema Haider) ಕೂಡ ಉದಾಹರಣೆಯಾಗಿ ನಿಂತಿದ್ದಾಳೆ. ಪಬ್​ಜಿ ಮೂಲಕ ಪರಿಚಯ ಆದ ಭಾರತೀಯ ಯುವಕನನ್ನು ಸೇರಲು ಪಾಕಿಸ್ತಾನ (Pakisthan) ದಿಂದ ತನ್ನ 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿರುವ ಸೀಮಾ ಹೈದರ್ (Seema Haider)​ ಸದ್ಯಕ್ಕೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾಳೆ.

ಕಳೆದ ಮೇ ತಿಂಗಳಲ್ಲಿ ಕಾ-ನೂನು ಬಾ-ಹಿರವಾಗಿ ಸೀಮಾ ಹೈದರ್​ ಭಾರತಕ್ಕೆ ಕಾಲಿಟ್ಟಿದ್ದಳು. ಆದರೆ ಸೀಮಾ ಹೈದರ್ ತನ್ನ ಪ್ರಿಯಕರ ಸಚಿನ್ ಮೀನಾ (Sachin meena) ಜೊತೆಗೆ ವಾಸವಾಗಿದ್ದಾಳೆ. ಪಾಕಿಸ್ತಾನದಿಂದ ಬಂದಿರುವ ಇವಳು ನಿಜಕ್ಕೂ ಪ್ರೀತಿಗಾಗಿ ಬಂದಿದ್ದಾಳಾ? ಪಾಕ್​ ಗುಪ್ತಚರ ದಳ ಐಎಸ್​ಐ ಜತೆ ಲಿಂಕ್ ಇದೆಯಾ? ಹೀಗೆ ನಾನಾ ರೀತಿಯ ಪ್ರಶ್ನೆಗಳು ಹುಟ್ಟಿಕೊಂಡಿವೆ. ಅದಲ್ಲದೇ, ಜುಲೈ 18 ರಂದು ಉತ್ತರ ಪ್ರದೇಶದ ಭ-ಯೋತ್ಪಾದನಾ ವಿ-ರೋಧಿ ಪಡೆ ಸೀಮಾಳನ್ನು ಸುಮಾರು 9 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಜುಲೈ 17 ರಂದು 8 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು.

ನಾಲ್ಕು ಮಕ್ಕಳ ತಾಯಿಯಾಗಿರುವ ಸೀಮಾ ಕುರಿತು ನಾನಾ ರೀತಿಯ ಪ್ರಶ್ನೆಗಳು ಎದ್ದಿವೆ. ಅದಲ್ಲದೇ, ಪಬ್ಜಿ ಆಡುವಾಗ ಭಾರತೀಯ ಮೂಲದ ಸಚಿನ್​ ಎಂಬ ಯುವಕನ ಪ್ರೀತಿಯ ಬಿದ್ದು ಆತನಿಗಾಗಿ ಬಂದಿರುವುದಾಗಿ ಹೇಳಿಕೊಂಡಿದ್ದಾಳೆ. ಸೀಮಾ, ತನ್ನ ಹೆಸರಿನಲ್ಲಿ ಅನೇಕ ಪಬ್​ಜಿ ಖಾತೆ (Pub ji Account) ಗಳನ್ನು ಹೊಂದಿದ್ದು, ಈ ಹಿಂದೆ ದೆಹಲಿ ಮೂಲದ ಅನೇಕ ಯುವಕರನ್ನು ಪರಿಚಯಿಸಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ ಎನ್ನುವುದು ತನಿಖೆಯ ವೇಳೆ ತಿಳಿಸಿದ್ದಾಳೆ.

ಅದಲ್ಲದೇ, ಇಂಗ್ಲಿಷ್​ ಸಾಲುಗಳನ್ನು ಓದಲು ತನಿಖಾಧಿಕಾರಿಗಳು ಹೇಳಿದ್ದಾಗ, ಆಕೆ ಸ್ಪಷ್ಟವಾಗಿ ಮತ್ತು ಹರಳು ಹುರಿದಂತೆ ಪಟಪಟನೆ ಓದಿದ್ದಾಳೆ. ಆದರೆ, ತಾನು ಐದನೇ ತರಗತಿ ಮಾತ್ರ ಓದಿದ್ದೇನೆ ಎಂದು ಹೇಳಿದ್ದು ಕೆಲವು ವಿಚಾರಗಳು ಬೆಳಕಿಗೆ ಬಿದ್ದಿದೆ. ನನ್ನ ಚಿಕ್ಕಪ್ಪ ಪಾಕಿಸ್ತಾನದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನನ್ನ ಸಹೋದರ ಪಾಕಿಸ್ತಾನದ ಸೇನೆಗೆ ಸೇರಿದ್ದ. ಆದರೆ ಆತ ಇನ್ನೂ ಅಲ್ಲೇ ಇದ್ದಾನಾ ಅಥವಾ ಸೈನ್ಯವನ್ನು ಬಿಟ್ಟಿದ್ದಾನಾ ಎಂಬುದು ನನಗೆ ಗೊತ್ತಿಲ್ಲ’ ಎಂದು ಉತ್ತರ ಪ್ರದೇಶ ಎಟಿಎಸ್​ಗೆ ಸೀಮಾ ಹೈದರ್ ಮಾಹಿತಿ ನೀಡಿದ್ದಾಳೆ.

ಸೀಮಾ ಹೈದರ್ ಸಹೋದರನ ಬಗ್ಗೆ ಬಾಯಿಬಿಡುತ್ತಿದ್ದಂತೆ ಆಕೆಯು ಹೇಳುತ್ತಿರುವ ಸತ್ಯದ ಕುರಿತು ಖಾತರಿ ಪಡಿಸಿಕೊಳ್ಳಲು ದುಬೈ (Dubai) ನಲ್ಲಿರುವ ಆಕೆಯ ಪತಿಯನ್ನು ಸಂಪರ್ಕ ಮಾಡಲಾಗಿದೆ. ಸೀಮಾಳ ಪತಿ ಗುಲಾಂ ಹೈದರ್ (Galam Haider) ಇದು ಸತ್ಯ ಎಂದು ಒಪ್ಪಿಕೊಂಡಿದ್ದಾನೆ. ಸೀಮಾಳ ಸಹೋದರ ಮತ್ತು ಚಿಕ್ಕಪ್ಪ ಪಾಕಿಸ್ತಾನ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಸೀಮಾಳ ಚಿಕ್ಕಪ್ಪ ಉನ್ನತ ಶ್ರೇಣಿಯ ಹುದ್ದೆಯಲ್ಲಿ ಇದ್ದಾನೆ ಎಂದು ಹೇಳಿದ್ದಾನೆ.

ಇದೀಗ ಸೀಮಾ ಭಾರತಕ್ಕೆ ಬಂದ ಬಳಿಕ ಪಶುಪತಿನಾಥ ದೇವಸ್ಥಾನದಲ್ಲಿ ಇಬ್ಬರು ವಿವಾಹವಾದೆವು ಎಂದು ಸಚಿನ್​ ಹೇಳಿಕೊಂಡಿದ್ದಾನೆ. ಎಯ್ತಾ ಮೀನಾ ಕುಟುಂಬವು ಸೀಮಾಳನ್ನು ಸೇರಿದಂತೆ ಆಕೆಯ ನಾಲ್ವರು ಮಕ್ಕಳನ್ನು ತಮ್ಮ ಜೊತೆಗೆ ಇರಿಸಿಕೊಂಡಿದ್ದಾರೆ. ಸದ್ಯಕ್ಕೆ ಸೀಮಾಳ ಸುತ್ತ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿದ್ದು ತನಿಖೆಯು ಚುರುಕಿನಿಂದ ನಡೆಯುತ್ತಿದೆ.

Leave a Reply

Your email address will not be published. Required fields are marked *