Second hand bed gifted by father in law : ಸೆಕೆಂಡ್ ಹ್ಯಾಂಡ್ ಮಂಚ ಕೊಟ್ಟಿದ್ದಕ್ಕೆ ಮದುವೆ ಮಂಟಪದಿಂದ ಹೊರ ನಡೆದ ವರ, ಕೊನೆಗೆ ಏನಾಯ್ತು ಗೊತ್ತಾ?.. ಮದುವೆ ಎನ್ನುವುದು ಪ್ರತಿಯೊಬ್ಬರ ಕನಸೇ. ಹೀಗಾಗಿ ತಾವು ಕನಸು ಕಟ್ಟಿರುವಂತೆ ಪ್ರತಿ ಗಂಡು ಹೆಣ್ಣು ಬಯಸುತ್ತಾರೆ. ಈ ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಮದುವೆ ಮಾಡುವುದು ಅಷ್ಟು ಸುಲಭದ ಮಾತಲ್ಲ ಬಿಡಿ.
ಹೆಣ್ಣು ಹೆತ್ತವರಿಗೆ ಮಾತ್ರ ಇಂತಹ ಕಷ್ಟಗಳು ತಿಳಿಯುತ್ತದೆ. ಇತ್ತೀಚಿನ ದಿನಗಳಲ್ಲಿ ಆಡಂಬರದ ಮದುವೆಗೆ ಹೆಚ್ಚಾಗುತ್ತಿದೆ. ಇಂದಿನ ಮದುವೆಯಲ್ಲಿನ ಆಡಂಬರತನವು ಘನತೆಯೂ ಹೌದು. ಹೆಣ್ಣು ಹೆತ್ತವರು ಮಗಳ ಮದುವೆಯನ್ನು ಸಹಜವಾಗಿ ಅದ್ದೂರಿಯಾಗಿಯೇ ಮಾಡುತ್ತಾರೆ.
ಆರ್ಥಿಕವಾಗಿ ಸಶಕ್ತರಲ್ಲದವರು ಕೂಡ ಸಾಲ ಮಾಡಿಯಾದರೂ ಮಕ್ಕಳ ಮದುವೆ ಅದ್ದೂರಿಯಾಗಿಯೇ ಮಾಡುತ್ತಾರೆ. ಆದರೆ ಇದೀಗ ವಧುವಿನ ಅಪ್ಪ ಸೆಕೆಂಡ್ ಹ್ಯಾಂಡ್ ಮಂಚವನ್ನು ನೀಡಿದ್ದಾರೆ. ಈ ವರ ವಿವಾಹವನ್ನು ನಿರಾಕರಿಸಿದ ಘಟನೆಯೊಂದು ಹೈದರಾಬಾದ್ನಲ್ಲಿ ನಡೆದಿದೆ.
ವಧುವಿನ ಕುಟುಂಬದವರು ತನಗೆ ಸೆಕೆಂಡ್ ಹ್ಯಾಂಡ್ ಮಂಚ, ಹಾಸಿಗೆಯನ್ನು ಕೊಟ್ಟಿದ್ದಾರೆ ಎಂದು ನಿರಾಕರಿಸಿ ಮದುವೆ ಮಂಟಪದಿಂದ ಹೊರನಡೆದಿದ್ದಾರೆ. ಇದರಿಂದ ಮನನೊಂದ ವಧುವಿನ ತಂದೆ ಚಂದ್ರಯ್ಯನಗುಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಕೊನೆಗೆ ಪೊಲೀಸರು ವರನೊಂದಿಗೆ ಮಾತನಾಡಿ ಈ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಈ ಸಮಯದಲ್ಲಿ ‘ಇಷ್ಟು ಸಣ್ಣ ವಿಚಾರಕ್ಕೆ ಮದುವೆ ಕ್ಯಾನ್ಸಲ್ ಮಾಡಿದ್ದಾನೆ ಈತನನ್ನು ನಾನು ಮದುವೆಯಾಗಲಾರೆ’ ಎಂದು ಹೇಳಿದ್ದಾರೆ. ಹೌದು, ವಧುವಿನ ನಿರ್ಧಾರವು ಅಚ್ಚರಿಗೆ ಕಾರಣವಾಗಿದೆ.