Sarvanan and shivabala : ಕನಸು ಕಟ್ಟುಕೊಂಡು ಪ್ರೇಮ ವಿವಾಹವಾಗಿದ್ದ ಜೋಡಿ, ದಾಂಪತ್ಯ ಜೀವನದಲ್ಲಿ ಅಪಸ್ವರ, ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದ ಪತ್ನಿ, ಮತ್ತೆ ನಡೆದಿದ್ದೆ ಬೇರೆ? ಯಾವುದೇ ಸಂಬಂಧವಿರಲಿ, ಎಲ್ಲಾ ಸಂಬಂಧಗಳಿಗೂ ಕೂಡ ನಂಬಿಕೆಯೇ ಜೀವಾಳ. ಆದರೆ ಇಂದಿನ ಕಾಲದಲ್ಲಿ ನಂಬಿಕೆ ಎನ್ನುವ ಪದಕ್ಕೆ ಯಾವುದೇ ಅರ್ಥವೇ ಇಲ್ಲ. ದಾಂಪತ್ಯ ಜೀವನದಲ್ಲಿ ಗಂಡ ಹೆಂಡತಿಯ ನಡುವೆ ನಂಬಿಕೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ.
ಇತ್ತೀಚೆಗಿನ ದಿನಗಳಲ್ಲಿ ಪ್ರೀತಿ ಹಾಗೂ ಹಣಕ್ಕಾಗಿ ಮೂರನೇ ವ್ಯಕ್ತಿಯತ್ತ ಆಕರ್ಷಿತರಾಗುತ್ತಿದ್ದು, ನಾನಾ ರೀತಿಯ ಅನಾಹುತಗಳಿಗೆ ಎಡೆ ಮಾಡಿಕೊಡುತ್ತಿದೆ. ಆದರೆ ಈ ದಾಂಪತ್ಯ ಜೀವನದಲ್ಲಿ ಏನಾದರೂ ತೊಡಕು ತಪ್ಪುಗಳನ್ನೇ ಹುಡುಕುವುದು ಕೆಲಸವಾದರೆ ಅಲ್ಲಿ ಸಂಬಂಧಗಳು ಕೂಡ ಚೂರು ಚೂರಾಗಿ ಬಿಡುತ್ತದೆ. ಭಿನ್ನಾಭಿಪ್ರಾಯ, ಮನಸ್ತಾಪ, ಜಗಳ ಇದು ಎಲ್ಲಾ ಸಂಬಂಧಗಳಲ್ಲೂ ಸರ್ವೇ ಸಾಮಾನ್ಯವಾಗಿರುವ ವಿಚಾರ.
ಆದರೆ ಈ ಎಲ್ಲವನ್ನು ಸರಿದೂಗಿಸಿ ಕೊಂಡು ಹೋಗುವುದು ಮುಖ್ಯ ವಾಗಿರುತ್ತದೆ. ಇಬ್ಬರಿಗೂ ಕೂಡ ತಪ್ಪನ್ನು ಒಪ್ಪಿ ಮುಂದೆ ಸಾಗುವ ಮನಸ್ಥಿತಿಯೊಂದು ಇರಲೇಬೇಕು. ಈ ನಡುವೆ ದಾಂಪತ್ಯ ಜೀವನದಲ್ಲಿ ಮೂರನೇ ವ್ಯಕ್ತಿಯ ಜೊತೆಗಿನ ಸಂಬಂಧಗಳು ಹೆಚ್ಚಾಗುತ್ತಿದೆ. ಮೂರನೇ ವ್ಯಕ್ತಿಯ ಮಧ್ಯ ಪ್ರವೇಶದಿಂದ ಸಂಸಾರಗಳು ಮುರಿದು ಬೀಳುತ್ತಿದೆ. ಮೂರನೇ ವ್ಯಕ್ತಿಯ ಪ್ರವೇಶದಿಂದಾಗಿ ಸಂಸಾರವು ಛಿದ್ರವಾಗುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ.
ಈ ಹಿಂದೆ ರಾಮನಾಥ ಪುರದಲ್ಲಿ ಪ್ರೇಮ ವಿವಾಹವೊಂದು ಮುರಿದು ಬಿದ್ದಿದ್ದು, ವಿಚ್ಛೇಧನ ಕೇಳಿದ್ದಕ್ಕೆ ಪತ್ನಿಯ ಕಥೆಯನ್ನೇ ಮುಗಿಸಿದ ಹೃದಯವಿದ್ರಾವಕ ಘಟನೆಯೊಂದು ನಡೆದಿತ್ತು.ಸರವಣನ್ ಎನ್ನುವ ವ್ಯಕ್ತಿಯು ರಾಮನಾಥಪುರದ ವಿಯುಸಿ ನಗರಕ್ಕೆ ಸೇರಿದವರನು. ವೃತ್ತಿಯಲ್ಲಿ ಚಾಲಕನಾಗಿದ್ದನು. ಶಿವಬಾಲ ಎನ್ನುವ ಮಹಿಳೆಯು ಅದೇ ಪ್ರದೇಶದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಳು.
ಹನ್ನೆರಡು ವರ್ಷಗಳ ಹಿಂದೆಯಷ್ಟೇ ಈ ಇಬ್ಬರೂ ಮದುವೆಯಾಗಿದ್ದರು. ಹೌದು ಸಂಜೆ ಕಾಲೇಜಿನಲ್ಲಿ ಓದುತ್ತಿದ್ದ ಶಿವ ಬಾಲ ಹಾಗೂ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಸವರಣನ್ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಮೂವರು ಮುದ್ದಾದ ಮಕ್ಕಳಿದ್ದರು. ಸರವಣನ್ ಅವರಿಗೆ ಪತ್ನಿ ಶಿವಬಾಲನ ವರ್ತನೆಯ ಮೇಲೆ ಅನುಮಾನ ಬಂದಿತ್ತು. ಹೀಗಾಗಿ ಇವರಿಬ್ಬರ ನಡುವೆ ಜಗಳವಾಗಿದ್ದು,
ಕೊನೆಗೆ ಇಬ್ಬರೂ ದೂರಾಗಿದ್ದು ಬೇರೆ ಬೇರೆ ಮನೆಯಲ್ಲಿ ವಾಸವಾಗಿದ್ದರು. ಆದರೆ ಸರವಣನ್ ಆಕೆಯ ಸಲ ಶಿವಬಾಲ ಬಳಿ ಮನೆಗೆ ಬರುವಂತೆ ಮಾತುಕಥೆ ನಡೆಸಿದ್ದನು. ಆಕೆಯ ನಿರ್ಧಾರವನ್ನು ನಿರಾಕರಿಸಿದ್ದಳು. ಅದಲ್ಲದೇ ಈ ಸರವಣನ್ ಜೊತೆಗೆ ಬದುಕಲು ಸಾಧ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಬಂದು ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದಳು. ವಿಚ್ಛೇಧನಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ಪ್ರಕರಣವೂ ನಡೆಯುತ್ತಿತ್ತು. ಹೀಗಿರುವಾಗ ಒಂದು ದಿನ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರು ಪಡಿಸಿ ಎಸ್ಪಿ ಕಚೇರಿ ಬಳಿ ಹೋಗುತ್ತಿದ್ದ ಶಿವಬಾಲನನ್ನು ಸವರಣನ್ ಹಿಂಬಾಲಿಸಿದ್ದನು.
ಸರಿಯಾದ ಸಮಯಕ್ಕಾಗಿ ಕಾದು ಕುಳಿತಿದ್ದ ಸವರಣನ್ ಪತ್ನಿ ಶಿವಬಾಲಳ ಕಥೆ ಮುಗಿಸಿದ್ದನು. ಈ ವೇಳೆ ಶಿವಬಾಲ ಜೋರಾಗಿ ಕಿರುಚಿಕೊಂಡಿದ್ದು, ಸ್ಥಳಕ್ಕೆ ಓಡಿ ಹೋದ ಜನರು ಸವರಣನನ್ನು ಸುತ್ತುವರಿದು ಪೊಲೀಸರಿಗೆ ಒಪ್ಪಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಘಟನೆಗೆ ಸಂಬಂಧಪಟ್ಟಂತೆ ತನಿಖೆ ಆರಂಭಿಸಿದ್ದರು. ವೈವಾಹಿಕ ಜೀವನದಿಂದ ವಿಚ್ಛೇಧನ ಕೋರಿ ಅರ್ಜಿ ಸಲ್ಲಿಸಿದ್ದಾಳೆಂದು ಪತ್ನಿ ಜೀ-ವವನ್ನೇ ತೆಗೆದದ್ದು ಎಲ್ಲರಿಗೂ ಶಾಕ್ ನೀಡಿತ್ತು.