ಕಮಲಿ ಧಾರಾವಾಹಿ ಖ್ಯಾತಿಯ ಸ್ವಪ್ನಾ ದೀಕ್ಷಿತ್ ಅವರ ಸುಂದರ ಕುಟುಂಬ ಹೇಗಿದೆ ನೋಡಿ, ಸುಂದರ ಫೋಟೋಸ್ ಇಲ್ಲಿವೆ!!

ಧಾರವಾಹಿಗಳಲ್ಲಿ ನಟಿಸುವ ಕೆಲವು ಪಾತ್ರಧಾರಿಗಳನ್ನು ಮರೆಯುವ ಹಾಗೆ ಇಲ್ಲ ಯಾಕೆಂದರೆ ಸಾಕಷ್ಟು ವರ್ಷಗಳಿಂದ ಕಲಾಸೇವೆ ಮಾಡುತ್ತಿರುವ ಹಲವು ನಟಿಯರು ಇಂದಿಗೂ ಕೂಡ ಧಾರಾವಾಹಿಯಲ್ಲಿ ಹಿರಿಯ ಪಾತ್ರಧಾರಿಗಳಾಗಿ ಕಾಣಿಸಿಕೊಳ್ಳುತ್ತಾರೆ. ಈ ರೀತಿ ಸಾಕಷ್ಟು ವರ್ಷಗಳಿಂದ ಸಿನಿಮಾರಂಗದಲ್ಲಿ ಹಾಗೂ ಕಿರುತರೆ ಲೋಕದಲ್ಲಿ ಜನಪ್ರಿಯ ರಾಗಿರುವ ನಟಿ ಸಪ್ನ ದೀಕ್ಷಿತ್. ಇತ್ತೀಚೆಗೆ ಕಮಲಿ ಧಾರಾವಾಹಿಯ ಮೂಲಕವೇ ಸಪ್ನ ದೀಕ್ಷಿತ್ ಹೆಚ್ಚು ಫೇಮಸ್ ಆಗಿದ್ದರು.

ಒಟ್ಟಿಗೆ ಮೂರು ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಚಾಣಕ್ಯ ಕಲಾವಿದೆ ಆಗಿರುವ ಸಪ್ನಾ ದೀಕ್ಷಿತ್ ಅವರು ಕಮಲಿ ಧಾರಾವಾಹಿಯಲ್ಲಿ ರಿಷಿ ಪಾತ್ರದಾರಿಯ ತಾಯಿ ಪಾತ್ರದಲ್ಲಿ ಅಂದರೆ ತಾರಾ ಪಾತ್ರವನ್ನು ನಿಭಾಯಿಸುತ್ತಿದ್ದರು. ಇದರ ಜೊತೆಗೆ ಸ್ಟಾರ್ ಸುವರ್ಣ ಮಹಿಮೆಯಲ್ಲಿ ಪ್ರಸಾರವಾಗುತ್ತಿದ್ದ ಇಂತಿ ನಿಮ್ಮ ಆಶಾ ಹಾಗೂ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸೇವಂತಿ ಧಾರವಾಹಿಗಳಲ್ಲಿಯೂ ಕೂಡ ಸಪ್ನಾ ದೀಕ್ಷಿತ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.

ತೆರೆಯ ಮೇಲೆ ಕಾಣಿಸಿಕೊಳ್ಳುವ ಸಪ್ನಾ ದೀಕ್ಷಿತ್ ಅವರ ತೆರೆಯ ಹಿಂದಿನ ಹಲವು ವಿಚಾರಗಳು ಇಲ್ಲಿವೆ ನೋಡಿ.ಸಪ್ನಾ ದೀಕ್ಷಿತ್ ಅವರ ಮೂಲ ಹೆಸರು ನಳಿನಿ. ಇವರ ತಾಯಿ ಹಿಂದಿಯ ಸಿನಿಮಾ ಒಂದನ್ನು ನೋಡಿ ಆ ಸಿನಿಮಾದಲ್ಲಿ ಇದ್ದ ಪಾತ್ರಧಾರಿಯ್ ಸಪ್ನಾ ಎನ್ನುವ ಹೆಸರನ್ನು ಮಗಳಿಗೆ ಇಟ್ಟರಂತೆ. ಕಾಲೇಜಿನಲ್ಲಿ ಕಾರ್ಯಕ್ರಮ ಒಂದರಲ್ಲಿ ಕ್ಯಾರಾಮ್ಯಾನ ಒಬ್ಬರು ಸಪ್ನಾ ಅವರನ್ನು ನೋಡಿ ಬಣ್ಣದ ಲೋಕಕ್ಕೆ ಅವರನ್ನು ಕರೆತಂದರು.

ಮೊದಲು ನಿರೂಪಕಿಯಾಗಿ ವೃತ್ತಿ ಜೀವನ ಆರಂಭಿಸಿದ ನಟಿ ಸ್ವಪ್ನ ದೀಕ್ಷಿತ್ ನಂತರ ಹಲವು ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ಅಭಿನಯಿಸುವ ಅವಕಾಶ ಪಡೆದುಕೊಂಡರು. ವರ್ಸಟೈಲ್ ನಟಿ ಎಂದೇ ಇವರನ್ನು ಕರೆಯಬಹುದು. ಪ್ರತಿಯೊಂದು ವಿಭಿನ್ನ ಪಾತ್ರಗಳನ್ನು ನಿಭಾಯಿಸಿದಾಗಲೂ ಆಯಾ ಪಾತ್ರಕ್ಕೆ ತಕ್ಕಂತೆ ಅಭಿನಯಿಸುವ ಚಾಕಚಕ್ಯತೆ ನಟಿ ಸ್ವಪ್ನ ದೀಕ್ಷಿತ್ ಅವರ ಬಳಿ ಇದೆ.ನಟಿ ಸಪ್ನಾ ದೀಕ್ಷಿತ್ ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯರಾಗಿರುತ್ತಾರೆ.

ಇನ್ಸ್ಟಾಗ್ರಾಮ್ ನಲ್ಲಿ ಪೇಜ್ ಹೊಂದಿರುವ ಸಪ್ನಾ ದೀಕ್ಷಿತ್ ಆಗಾಗ ರೀಲ್ ಹಾಗೂ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ. ಸಪ್ನಾ ದೀಕ್ಷಿತ್ ತಮ್ಮ ಕುಟುಂಬದವರೊಂದಿಗೆ ಇದ್ದ ಕೆಲವು ಮಧುರ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳ ಮೆಚ್ಚುಗೆ ಗಳಿಸಿಕೊಂಡಿದೆ. ಸಪ್ನ ದೀಕ್ಷಿತ್ ಹಾಗೂ ಮಗಳು ತ್ರಿಶಾ ಜೊತೆಗೆ ಇರುವ ಸಾಕಷ್ಟು ಫೋಟೋಗಳನ್ನು instagram ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸಪ್ನಾ ದೀಕ್ಷಿತ್ ಈಗಲೂ ಸಾಕಷ್ಟು ಪಾತ್ರಗಳನ್ನು ನಿಭಾಯಿಸುತ್ತಿದ್ದು ವೃತ್ತಿ ಜೀವನದಲ್ಲಿ ಏಳು ಬೀಳುಗಳನ್ನು ಕಂಡವರು.ಕೆಲವು ವರ್ಷಗಳಿಂದ ಪ್ರಸಾರವಾಗುತ್ತಿದ್ದ ಕಮಲಿ ಧಾರಾವಾಹಿಯಲ್ಲಿ ತಮಗೆ ಗೊತ್ತಿಲ್ಲದ ಹಾಗೆ ನನ್ನ ಪಾತ್ರವನ್ನು ಬೇರೆಯವರಿಗೆ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದ ನಟಿ ಸಪ್ನಾ ದೀಕ್ಷಿತ್ ಆ ಧಾರಾವಾಹಿಯಿಂದ ಹೊರ ಬಂದಿದ್ದಾರೆ.

Leave a Reply

Your email address will not be published. Required fields are marked *