ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ಪುಟ್ಟ ಗೌರಿ ಆಗಿ ಮಿಂಚಿದ್ದ ಸಾನಿಯಾ ಅಯ್ಯರ್ ಇದೀಗ ಬೆಳೆದು ದೊಡ್ಡವರಾಗಿದ್ದಾರೆ. ನಾಯಕನಟಿಗಾಗಿ ಕೂಡ ಸಿನಿಮಾದಲ್ಲಿ ಅಭಿನಯಿಸಲು ಮುಂದಾಗಿದ್ದಾರೆ. ಇನ್ನು ಸಾನಿಯಾ ಅಯ್ಯರ್ ಇತ್ತೀಚೆಗೆ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಸಾನಿಯಾ ಅಯ್ಯರ್ ಬಿಗ್ ಬಾಸ್ ನ ಒ ಟಿ ಟಿ ವರ್ಷನ್ ನಲ್ಲಿ ಕಾಣಿಸಿಕೊಂಡಿದ್ದರು.
ಅಲ್ಲಿಂದ ಟಿವಿ ಬಿಗ್ ಬಾಸ್ ಸೀಸನ್ 9ರಲ್ಲಿಯೂ ಕೂಡ ಸಾಕಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಉಳಿದಿದ್ದರು. ಸಾನಿಯಾ ಅಯ್ಯರ್ ಹಾಗೂ ಬಿಗ್ ಬಾಸ್ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ ಅವರ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಸಾಕಷ್ಟು ಗಾಸಿಪ್ ಗಳು ಹರಡಿದ್ದವು. ಜೋಡಿಹಕ್ಕಿಯಾಗಿ ಎಲ್ಲೆಲ್ಲಿಯೂ ಕಾಣಿಸಿಕೊಳ್ಳುತ್ತಿದ್ದ ರೂಪೇಶ್ ಶೆಟ್ಟಿ ಹಾಗೂ ಸಾನಿಯಾ ಅಯ್ಯರ್ ಅವರು ಬಿಗ್ ಬಾಸ್ ಮುಗಿದ ನಂತರ ಎಲ್ಲಿಯೂ ಒಟ್ಟಾಗಿ ಕಾಣಿಸಿಕೊಳ್ಳದೆ ಇರುವುದು ವಿಶೇಷ.
ಆದರೆ ಸಾನಿಯಾ ಅಯ್ಯರ್ ಮಾತ್ರ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇದ್ದಾರೆ. ಇತ್ತೀಚಿಗೆ ಅವರು ದಕ್ಷಿಣ ಕನ್ನಡದ ಕೆಸರು ಗೆದ್ದೆ ಓಟ ನೋಡಲು ಹೋಗಿ ಆಗಿರುವ ರಂಪಾಟದ ಬಗ್ಗೆ ನಿಮಗೂ ಗೊತ್ತು. ಇದೀಗ ಸಾನಿಯಾ ಅಯ್ಯರ್ ಮತ್ತೆ ಟ್ರೋಲಿಗರ ಕಣ್ಣಿಗೆ ಬಿದ್ದಿದ್ದಾರೆ ಇದಕ್ಕೆ ಕಾರಣ ಏನು ಗೊತ್ತಾ?
ಇತ್ತೀಚೆಗೆ ಸಾನಿಯಾ ಅಯ್ಯರ್ ತನ್ನ ತಾಯಿ ದೀಪ ಅಯ್ಯರ್ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ದೊಡ್ಡ ಹೋಟೆಲ್ ಒಂದರಲ್ಲಿ ತಾಯಿಗೆ ಸರ್ಪ್ರೈಸ್ ಆಗಿ ಕೇಕ್ ಕಟ್ ಮಾಡಿಸಿ ಇಡೀ ದಿನ ತಾಯಿಯ ಜೊತೆ ಸಮಯ ಕಳೆದಿದ್ದಾರೆ ಸಾನಿಯಾ ಅಯ್ಯರ್. ಇನ್ನು ಈ ಸಂತಸದ ಕ್ಷಣವನ್ನು ಸೋಶಿಯಲ್ ಮೀಡಿಯಾದಲ್ಲಿ ಸಾನಿಯಾ ಅಯ್ಯರ್ ಹಂಚಿಕೊಂಡಿದ್ದರು. ಆದರೆ ಸಾನಿಯಾ ಅವರ ಈ ಪೋಸ್ಟ್ ನೋಡಿದ ಹಲವರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ.
ಸಾನಿಯಾ ಅಯ್ಯರ್ ಅವರ ತಾಯಿ ದೀಪ ಅಯ್ಯರ್ ಕೂಡ ಕಿರುತೆರೆಯಲ್ಲಿ ಈಗಲೂ ಸಕ್ರಿಯರಾಗಿರುವ ನಟಿ. ಧಾರವಾಹಿಗಳಲ್ಲಿ ಸೀರಿಯಲ್ಲಿಯೇ ಮಿಂಚುವ ದೀಪ ಅಯ್ಯರ್ ತಮ್ಮ ಬರ್ತಡೇ ದಿನ ಸ್ಲೀವ್ ಲೆಸ್ ಮಾಡ್ ಗೌನ್ ಧರಿಸಿದ್ದರು. ತಾಯಿಯೇ ಹೀಗೆ, ಇನ್ನು ಮಗಳು ಹಾಗೆ ಇರುವುದರಲ್ಲಿ ತಪ್ಪೇನೂ ಇಲ್ಲ ಅಂತ ನೆಟ್ಟಿಗರು ದೀಪ ಅಯ್ಯರ್ ಅವರ ಡ್ರೆಸ್ ಬಗ್ಗೆ ನೆಗೆಟಿವ್ ಆಗಿ ಕಮೆಂಟ್ ಮಾಡಿದ್ದಾರೆ.
ಸಾನಿಯಾ ಅಯ್ಯರ್ ತನ್ನ ತಾಯಿಯ ಜೊತೆ ಇರುವ ಫೋಟೋ instagram ನಲ್ಲಿ ಹಂಚಿಕೊಳ್ಳುತ್ತಿದ್ದಂತೆ ಇಂತಹ ಸಾಕಷ್ಟು ನೆಗೆಟಿವ್ ಕಾಮೆಂಟ್ಗಳು ಬಂದಿದೆ. ಇದನ್ನು ಗಮನಿಸಿದ ಸಾನಿಯಾ ಅಯ್ಯರ್ ಹೀಗೆ ಕಮೆಂಟ್ ಮಾಡಿದವರಿಗೆ ತಿರುಗೇಟು ನೀಡಿದ್ದಾರೆ. ನಾವಿನ್ನು ಯಾವ ಕಾಲದಲ್ಲಿ ಇದ್ದೇವೆ. ಒಬ್ಬರ ಡ್ರೆಸ್ ಬಗ್ಗೆ ಮಾತನಾಡಲು ನೀವು ಯಾರು ನೀವು ನಿಮಗೆ ಬೇಕಾದ ಬಟ್ಟೆ ಧರಿಸಿ ಇನ್ನೊಬ್ಬರ ಬಟ್ಟೆಯ ಬಗ್ಗೆ ಕಮೆಂಟ್ ಮಾಡಬೇಡಿ ಎಂದು ಸಾನಿಯಾ ಅಯ್ಯರ್ ಗರಂ ಆಗಿ ಉತ್ತರ ನೀಡಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ನೆಟ್ಟಿಗರು ಸಾನಿಯಾ ಅಯ್ಯರ್ ಅವರ ಈ ಕಮೆಂಟ್ ಗೂ ಕೂಡ ಪ್ರತ್ಯುತ್ತರ ನೀಡಿದ್ದಾರೆ. ಈ ನಡುವೆ ಸಾನಿಯಾ ಅಯ್ಯರ್ ಅವರ ಒಂದಿಷ್ಟು ಅಭಿಮಾನಿಗಳು ಅವರ ಪರ ನಿಂತು ಸಕಾರಾತ್ಮಕ ಕಮೆಂಟ ಮಾಡಿದ್ದಾರೆ. ಒಟ್ಟಿನಲ್ಲಿ ಸಾನಿಯಾ ಅಯ್ಯರ್ ನಟನೆಗಿಂತಲೂ ಹೆಚ್ಚಾಗಿ ಇಂತಹ ಗಾಸಿಪ್ ಗಳಿಗೆ ಆಹಾರವಾಗುತ್ತಿದ್ದಾರೆ.