ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ಮನೆಯಲ್ಲಿ ಸಂಕ್ರಾಂತಿ ಹಬ್ಬದ ಸೆಲೆಬ್ರೇಶನ್ ಹೇಗಿತ್ತು ಗೊತ್ತಾ? ಇಲ್ಲಿದೆ ನೋಡಿ ಫೋಟೋಸ್

ಚಂದನವನದ ನಟಿ ಅದಿತಿ ಪ್ರಭುದೇವ (Aditi Prabhudev) ರವರಿಗೆ ಸಿನಿಮಾರಂಗದಲ್ಲಿ ಎಲ್ಲಿಲ್ಲದ ಬೇಡಿಕೆಯಿದ್ದು, ಬ್ಯುಸಿಯಾಗಿದ್ದಾರೆ. ಕಳೆದ ವರ್ಷ ಹೊಸ ಬದುಕಿಗೆ ಕಾಲಿಟ್ಟಿದ್ದು, ತಾಯಿಯಾಗುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ರಿವೀಲ್ ಮಾಡಿದ್ದಾರೆ. ಈ ನಡುವೆ ಮೊದಲ ಸಂಕ್ರಾಂತಿಹಬ್ಬವನ್ನು ಕುಟುಂಬದ ಜೊತೆಗೆ ಗ್ರ್ಯಾಂಡ್ ಆಗಿಯೇ ಸೆಲೆಬ್ರೇಟ್ ಮಾಡಿದ್ದಾರೆ.

ವೃತ್ತಿ ಜೀವನದ ಜೊತೆಗೆ ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ ನಟಿ ಅದಿತಿ ಪ್ರಭುದೇವ. ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾ ತನ್ನ ಫ್ಯಾನ್ಸ್ ಗಳನ್ನು ಖುಷಿ ಪಡಿಸುವ ಅದಿತಿಯವರು ಸಂಕ್ರಾಂತಿ ಹಬ್ಬ (Sankranti Festival) ಕ್ಕೂ ಫ್ಯಾನ್ಸ್ ಗಳಿಗೆ ಶುಭಾಶಯಗಳನ್ನು ತಿಳಿಸಿದ್ದರು.ಅದಿತಿ ಪ್ರಭುದೇವ ಅವರ ಮನೆಯಲ್ಲಿ ಸಂಕ್ರಾಂತಿ ಅಲಂಕಾರವು ಕಲರ್ ಫುಲ್ ಆಗಿತ್ತು. ಕಬ್ಬಿನ ಜಲ್ಲೆಯನ್ನು ಜೋಡಿಸಿ ಸುಂದರವಾಗಿ ಹೂಗಳಿಂದ ಅಲಂಕಾರ ಮಾಡಿದ್ದು ಅದಿತಿ ಪ್ರಭುದೇವ ದಂಪತಿಗಳು ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದರು.

ನಟಿ ಗೋಲ್ಡನ್ ಬಣ್ಣದ ಆರ್ಗಾನ್ಝಾ ಸೀರೆ ಉಟ್ಟಿದ್ದು, ಆಭರಣಗಳನ್ನು ಧರಿಸಿದ್ದರು..ಅದರ ಜೊತೆಗೆ ಮೇಕಪ್ ಮಾಡಿಕೊಂಡು ಮುಡಿ ತುಂಬಾ ಹೂಮುಡಿದು ಸುಂದರವಾಗಿ ಕಂಗೊಳಿಸಿದ್ದರು. ನಟಿಯ ಪತಿ ಯಶಸ್ಸ್ ಅವರು, ವೈಟ್ ಕಲರ್ ಶರ್ಟ್ ಹಾಗೂ ಪಂಚೆ ಧರಿಸಿ ಟ್ರಡಿಷನಲ್ ಆಗಿ ಕಾಣಿಸಿಕೊಂಡಿದ್ದರು.

ಈ ಬಾರಿಯ ನಟಿಯ ಮನೆಯಲ್ಲಿ ಸಂಕ್ರಾಂತಿ ಹಬ್ಬದ ಸೆಲೆಬ್ರೇಶನ್ ಜೋರಾಗಿತ್ತು. ನಟಿ ಅದಿತಿ ಪ್ರಭುದೇವ ಅವರು ಸಂಕ್ರಾಂತಿ ಹಬ್ಬದ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ. ನಮ್ಮನೆ ಸಂಕ್ರಾಂತಿ ಸಂಭ್ರಮ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದರು. ನಟಿಯ ಕುಟುಂಬಕ್ಕೂ ಫ್ಯಾನ್ಸ್ ಹಬ್ಬದ ಶುಭಾಶಯಗಳನ್ನು ಕೋರಿದ್ದರು.

Leave a Reply

Your email address will not be published. Required fields are marked *