ವೈಯುಕ್ತಿಕ ಬದುಕಿನ ಬಗ್ಗೆ ಗುಡ್ ನ್ಯೂಸ್ ನೀಡಿದ ಪ್ರಚಂಡ ಕುಳ್ಳ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ, ಇಲ್ಲಿದೆ ನೋಡಿ ಅಸಲಿ ವಿಚಾರ!!

ಪ್ರತಿಯೊಬ್ಬರಲ್ಲಿಯೂ ಕಲೆ ಇರುತ್ತದೆ. ಆದರೆ ಆ ಕಲೆಗೆ ಸರಿಯಾದ ಅವಕಾಶಗಳು ಸಿಕ್ಕರೆ ಮಾತ್ರ, ತಮ್ಮಲ್ಲಿರುವ ಕಲೆಯನ್ನು ಪ್ರದರ್ಶಶಿಸಬಹುದಾಗಿದೆ. ಒಳ್ಳೆಯ ಪ್ರತಿಭೆಗಳಿಗೆ ಕನ್ನಡ ಕಿರುತೆರೆ ಲೋಕವು ಅವಕಾಶಗಳ ಜೊತೆಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಕನ್ನಡ ಕಿರುತೆರೆಯಲ್ಲಿ ಧಾರವಾಹಿಗಳು ದಿನೇ ದಿನೇ ಹೆಚ್ಚಿನ ಪ್ರಸಿದ್ದಿ ಪಡೆದುಕೊಳ್ಳುತ್ತಿದೆ. ಕನ್ನಡ ಕಿರುತೆರೆಲೋಕದಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಂಡು ಫೇಮಸ್ ಆದವರು ಹಲವರು ಇದ್ದಾರೆ.

ಅಂತಹವರ ಸಾಲಿಗೆ ಖ್ಯಾತ ಕನ್ನಡ ಕಿರುತೆರೆ ಕಲಾವಿದ ಸಂಜು ಬಸಯ್ಯಾ (Sanju Basayya) ಕೂಡ ಸೇರಿಕೊಳ್ಳುತ್ತಾರೆ. ಹೌದು, ಕಾಮಿಡಿ ಕಿಲಾಡಿಗಳು ಶೋಗೆ ಎಂಟ್ರಿ ಕೊಟ್ಟ ಬಳಿಕ ಜನಪ್ರಿಯತೆ ಗಳಿಸಿಕೊಂಡ ಇವರು ಬೆಳ್ಳಿತೆರೆಯಲ್ಲಿ ಮಿಂಚಿದರು. ಜನಪ್ರಿಯ ಶೋಗಳಲ್ಲಿ ಒಂದಾದ ಕಾಮಿಡಿ ಕಿಲಾಡಿಗಳು ವೇದಿಕೆಯ ಮೇಲೆ ತಮ್ಮ ಲವ್ ಸ್ಟೋರಿ ಬಗ್ಗೆ ಸಂಜು ಬಸಯ್ಯ ಹೇಳಿಕೊಂಡಿದ್ದರು. ಆದರೆ ಇದೀಗ ವೈಯುಕ್ತಿಕ ವಿಚಾರವಾಗಿ ಮತ್ತೆ ಸುದ್ದಿಯಾಗಿದ್ದಾರೆ.

ಸಂಜು ಬಸಯ್ಯರವರು ಪ್ರೀತಿಸಿದ ಹುಡುಗಿಯ ಜೊತೆಗೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಸಂಜು ಬಸಯ್ಯರವರ ಬಗ್ಗೆ ಹೇಳುವುದಾದರೆ, ಇವರು ಉತ್ತರ ಕರ್ನಾಟಕ (North Karnataka)ದವರು. ತನ್ನ ಜೀವನಕ್ಕಾಗಿ ನಟನೆಯನ್ನು ನಂಬಿಕೊಂಡು ಬಂದವರು. ಬೆಳಗಾವಿ ಜಿಲ್ಲೆಯ ಮುರುಗೋಡು ಗ್ರಾಮದವರಾದ ಇವರು ಪ್ರಾರಂಭದಲ್ಲಿ ನಾಟಕ ಕಂಪೆನಿಗಳಲ್ಲಿ ನಾಟಕಗಳನ್ನು ಮಾಡುತ್ತಿದ್ದರು. ಆದಾದ ಬಳಿಕ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಕ್ರಿಯರಾದರು.

ಇದೀಗ ಸಂಜು ಬಸಯ್ಯ ರಿಜಿಸ್ಟರ್‌ ಮದುವೆಯಾಗಿದ್ದಾರೆ. ಹೌದು ಸಂಜು ಬಸಯ್ಯರವರು ಪ್ರೀತಿಸಿದ ಹುಡುಗಿಯ ಹೆಸರು ಸಂಜುನಟಿ ಪಲ್ಲವಿ ಬಳ್ಳಾರಿ (Pallavi Ballari). ಪಲ್ಲವಿ ಕೂಡ ನಾಟಕದಲ್ಲಿ ಕಲಾವಿದೆಯಾಗಿದ್ದು, ಮಲ್ಲು ಜಮಖಂಡಿ, ಶಿವಪುತ್ರ ಯಶಾರದಾ ಹೀಗೆ ಅನೇಕ ಕಿರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅದಲ್ಲದೇ ಸಂಜು ಬಸಯ್ಯ ಹಾಗೂ ಪಲ್ಲವಿಯವರದ್ದು ಏಳೆಂಟು ವರ್ಷಗಳ ಹಿಂದಿನ ಪರಿಚಯ. ಆ ಪರಿಚಯವು ಸ್ನೇಹವಾಗಿ ಬೆಳೆದಿತ್ತು..ಕೊನೆಗೆ ಪ್ರೀತಿಯಾಗಿ ಬದಲಾಗಿದೆ. ಇತ್ತೀಚೆಗಷ್ಟೇ ರಿಜಿಸ್ಟರ್‌ ಮದುವೆ ಆಗಿದ್ದಾರೆ. ಮುಂಬರುವ ದಿನಗಳಲ್ಲಿ ಹೊಸ ಬದುಕಿಗೆ ಕಾಲಿಡಲಿದ್ದು, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಸಂಜು ಬಸಯ್ಯ (Sanju Basayya) ರವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು “ಕನ್ನಡದ ಕಲಾಭಿಮಾನಿಗಳಿಗೆ ನಿಮ್ಮ ಪ್ರೀತಿಯ ಸಂಜು ಬಸಯ್ಯ ಮತ್ತು ಪಲ್ಲವಿ ಬಳ್ಳಾರಿ ಮಾಡುವ ಅನಂತ ಕೋಟಿ ನಮಸ್ಕಾರಗಳು. ಇಲ್ಲಿಯವರೆಗಿನ ನನ್ನ ಹಾಗೂ ಪಲ್ಲವಿ ಬಳ್ಳಾರಿಯವರ ನಡುವಿನ ಸಂಬಂಧಗಳ ಊಹಾಪೋಹಗಳಿಗೆ ಇಂದು ನಾವು ತೆರೆ ಎಳೆದಿದ್ದೆವೆ. ಮೊದಲಿಗೆ ನಮ್ಮಿಬ್ಬರ ಪರಿಚಯವಾಗಿತು, ಆ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿದ್ದು ನಿಮಗೆಲ್ಲರಿಗೂ ಗೊತ್ತಿದ್ದ ವಿಷಯ. ಈಗ ನಾವಿಬ್ಬರು ಕಾನೂನಬದ್ದವಾಗಿ, ಅಧಿಕೃತವಾಗಿ, ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ” ಎಂದಿದ್ದಾರೆ.

“ನಮ್ಮ, ನಮ್ಮ ಕುಟುಂಬದ ಒಪ್ಪಿಗೆ ಪಡೆದು ನಿಮ್ಮೆಲ್ಲರ ಸುಮ್ಮುಖದಲ್ಲಿ ಆದಷ್ಟು ಬೇಗ ಸಪ್ತಪದಿ ತುಳಿಯಲಿದ್ದೇವೆ. ನಿಮ್ಮ ಪ್ರೀತಿ, ಆಶೀರ್ವಾದ ನಮ್ಮ ಮೇಲೆ ಹೀಗೆ ಇರ್ಲಿ. ನಿಜವಾದ ಪ್ರೀತಿಗೆ ಯಾವುದೇ ಜಾತಿ, ಧರ್ಮ, ಇನ್ನಿತರ ಯಾವುದೇ ವಿಷಯಗಳು ಅಡ್ಡ ಬರಲಾರದು ಎಂಬುದನ್ನು ಸಾಧಿಸಿ ತೋರಿಸಿದ್ದೇವೆ. ನಿಜವಾದ ಪ್ರೀತಿಗೆ ಜಯ ಸಿಕ್ಕೆ ಸಿಗುತ್ತದೆ” ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ. ಸಂಜು ಬಸಯ್ಯರವರ ಈ ವಿಚಾರ ತಿಳಿಯುತ್ತಿದ್ದಂತೆ ಫ್ಯಾನ್ಸ್ ಶುಭಾಶಯ ತಿಳಿಸಿದ್ದಾರೆ.

Leave a Reply

Your email address will not be published. Required fields are marked *