Sania mirza pilot : ಉತ್ತರ ಪ್ರದೆಶದ kuttar pradesh) ಮಿರ್ಜಾಪುರ ಜಿಲ್ಲೆಯ ಟಿವಿ ಮೆಕ್ಯಾನಿಕ್ ಒಬ್ಬರ ಪುತ್ರಿ ಇದೀಗ ಭಾರತೀಯ ವಾಯುಪಡೆಯಲ್ಲಿ ಫೈಟರ್ ಪೈಲಟ್ ಆಗಲು ಆಯ್ಕೆಯಾಗಿದ್ದಾರೆ.ಜಸೋವರ್ ಗ್ರಾಮದ ಸಾನಿಯಾ ಮಿರ್ಜಾ ಅವರೇ ಈ ಸಾಧಕಿ.
Sania mirza pilot :ದೇಶಕ್ಕೆ ಹೆಮ್ಮೆಯಾದ ಈ ಹುಡುಗಿ ! ಆಕೆ ಮಾಡಿದ್ದೇನು ಗೊತ್ತೆ ?

ಈ ಮೂಲಕ ಅವರು ಫೈಟರ್ ಪೈಲಟ್ ಆದ ದೇಶದ ಮೊದಲ ಮುಸ್ಲಿಂ ಹುಡುಗಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಎನ್‌ಡಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಅವರು ಈ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜಿಲ್ಲೆ ಮಾತ್ರವಲ್ಲದೆ ರಾಜ್ಯ, ದೇಶಕ್ಕೇ ಕೀರ್ತಿ ತಂದಿದ್ದಾರೆ.
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ 2022 ರ ಪರೀಕ್ಷೆಯಲ್ಲಿ, ಪುರುಷರು ಮತ್ತು ಮಹಿಳೆಯರು ಸೇರಿದಂತೆ ಒಟ್ಟು 400 ಸೀಟುಗಳಿದ್ದು, ಇದರಲ್ಲಿ ಮಹಿಳೆಯರಿಗೆ 19 ಸೀಟುಗಳಿವೆ. ಈ ಪೈಕಿ ಎರಡು ಸೀಟುಗಳನ್ನು ಯುದ್ಧ ವಿಮಾನ ಪೈಲಟ್‌ಗಳಿಗೆ ಮೀಸಲಿಡಲಾಗಿತ್ತು, ಈ ಎರಡು ಸೀಟುಗಳಲ್ಲಿ ಸಾನಿಯಾ ಮಿರ್ಜಾ ಒಂದು ಸೀಟು ತನ್ನದಾಗಿಸಿಕೊಂಡಿದ್ದಾರೆ.
ಹಿಂದಿ ಮಾಧ್ಯಮದ ವಿದ್ಯಾರ್ಥಿಗಳು ಸಹ ದೃಢಸಂಕಲ್ಪ ಮಾಡಿದರೆ ಯಶಸ್ಸು ಗಳಿಸಬಹುದು ಎಂದು ಹಿಂದಿ ಮಾಧ್ಯಮ ಶಾಲೆಯಲ್ಲಿ ಓದಿದ ಸಾನಿಯಾ ಹೇಳಿದ್ದಾರೆ. ಅವರು ಡಿಸೆಂಬರ್ 27 ರಂದು ಪುಣೆಯಲ್ಲಿ ಎನ್ ಡಿಎ ಖಡಕ್ವಾಸ್ಲಾಗೆ ಸೇರಲಿದ್ದಾರೆ.
ಈ ಮೂರು ರಾಶಿಯ ಹೆಣ್ಣು ಮಕ್ಕಳ ಮುಂದೆ ತಲೆಬಾಗಲೇ ಬೇಕು, ಈ ಮೂರು ವಿಶಿಷ್ಟ ರಾಶಿಗಳು ಯಾವುದು. ಇಲ್ಲಿದೆ ನೋಡಿ !!!
ಆಕೆಯ ಯಶಸ್ಸಿಗೆ ಪೋಷಕರು ಹಾಗೂ ಗ್ರಾಮಸ್ಥರು ಹೆಮ್ಮೆ ಪಡುತ್ತಿದ್ದಾರೆ. “ಸಾನಿಯಾ ಮಿರ್ಜಾ ದೇಶದ ಮೊದಲ ಫೈಟರ್ ಪೈಲಟ್ ಅವ್ನಿ ಚತುರ್ವೇದಿಯನ್ನು ತನ್ನ ರೋಲ್ ಮಾಡೆಲ್ ಎಂದು ಪರಿಗಣಿಸುತ್ತಾಳೆ.
ಮೊದಲಿನಿಂದಲೂ ಅವಳು ಅವ್ನಿಯಂತೆ ಇರಬೇಕೆಂದು ಬಯಸಿದ್ದಳು. ಫೈಟರ್ ಪೈಲಟ್ ಆಗಿ ದೇಶದಲ್ಲಿ ಆಯ್ಕೆಯಾದ ಎರಡನೇ ಹುಡುಗಿ ಸಾನಿಯಾ” ಎಂದು ಅವರ ತಂದೆ ಶಾಹಿದ್ ಅಲಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ನಾನು ಫ್ಲೈಟ್ ಲೆಫ್ಟಿನೆಂಟ್ ಅವನಿ ಚತುರ್ವೇದಿ ಅವರಿಂದ ತುಂಬಾ ಸ್ಫೂರ್ತಿ ಪಡೆದಿದ್ದೇನೆ ಮತ್ತು ಅವರನ್ನು ನೋಡಿ ನಾನು NDA ಗೆ ಸೇರಲು ನಿರ್ಧರಿಸಿದೆ. ಯುವ ಪೀಳಿಗೆಯು ಒಂದು ದಿನ ನನ್ನಿಂದ ಸ್ಫೂರ್ತಿ (Inspiration) ಪಡೆಯುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಸಾನಿಯಾ ಎಎನ್‌ಐಗೆ ತಿಳಿಸಿದರು.