ಡಿವೋರ್ಸ್ ಬೆನ್ನಲ್ಲೇ ಕ್ರಿಕೆಟಿಗ ಶಮಿ ಅವರನ್ನ ಮದುವೆಯಾದ್ರಾ ಸಾನಿಯಾ ಮಿರ್ಜಾ?

ಸ್ನೇಹಿತರೆ ಸೆಲೆಬ್ರಿಟಿಗಳ ವಿಚಾರ ಅದು ನಿಜ ಅಲ್ಲದೆ ಇದ್ದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಆಗಾಗ ಓಡಾಡುತ್ತಿರುವುದು ನೀವು ಈ ಹಿಂದೆ ನೋಡಿರಬಹುದು ಅಥವಾ ಈಗಾಗಲೇ ಕೇಳಿರಬಹುದು. ಇನ್ನು ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರೋದು ಖ್ಯಾತ ಟೆನ್ನಿಸ್ ಆಟಗಾರ್ತಿ ಆಗಿರುವಂತಹ ಸಾನಿಯಾ ಮಿರ್ಜಾ ಹಾಗೂ ಭಾರತೀಯ ಕ್ರಿಕೆಟ್ ತಂಡದ ಹೆಮ್ಮೆಯ ಬೌಲರ್ ಆಗಿರುವ ಮೊಹಮ್ಮದ್ ಶಮಿ.

ಇತ್ತೀಚಿಗಷ್ಟೇ ನಡೆದಿರುವಂತಹ ವಿಶ್ವಕಪ್ ನಲ್ಲಿ ಕೇವಲ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಮಾತ್ರವಲ್ಲದೆ ಇಡೀ ವಿಶ್ವಕಪ್ ನಲ್ಲಿ ಅತ್ಯಂತ ಹೆಚ್ಚು ವಿಕೆಟ್ಗಳನ್ನು ಕಿತ್ತಿರುವ ಆಟಗಾರ ಎಂಬ ಹೆಗ್ಗಳಿಕೆಗೆ ಮೊಹಮ್ಮದ್ ಶಮಿ ಪಾತ್ರರಾಗಿದ್ದಾರೆ ಹಾಗೂ ಈ ಬಾರಿಯ ಅರ್ಜುನ ಪ್ರಶಸ್ತಿಯನ್ನು ಕೂಡ ತಮ್ಮ ಮುಡಿಗೆರೆಸಿಕೊಂಡಿದ್ದಾರೆ. ಇನ್ನು ಈ ಕಡೆ ಸಾನಿಯಾ ಮಿರ್ಜಾ ಅವರು ತಮ್ಮ ಪತಿಯಾಗಿರುವಂತಹ ಪಾಕಿಸ್ತಾನಿ ಮೂಲದ ಕ್ರಿಕೆಟಿಗ ಶೋಯಿಬ್ ಮಲ್ಲಿಕ್ ಅವರಿಗೆ ಡಿವೋರ್ಸ್ ನೀಡುವ ಮೂಲಕಸುದ್ದಿಯಲ್ಲಿದ್ದಾರೆ.

ಆದರೆ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವಂತಹ ಮಾಹಿತಿಗಳ ಪ್ರಕಾರ ಶೋಯಬ್ ಮಲಿಕ್ ರವರಿಗೆ ವಿವಾಹ ವಿಚ್ಛೇದನವನ್ನು ನೀಡಿದ ಬೆನ್ನಲ್ಲೇ ಸಾನಿಯಾ ಮಿರ್ಜಾ ಶಮಿ ಅವರನ್ನು ಮದುವೆಯಾಗಿದ್ದಾರೆ ಹಾಗೂ ಅವರ ಮದುವೆಯ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ ಎಂಬುದಾಗಿ ಸುದ್ದಿಯಾಗಿದೆ. ಹಾಗಿದ್ದರೆ ಬನ್ನಿ ಇದರ ಹಿಂದಿನ ನಿಜಾಂಶ ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಆದರೆ ನಿಜ ಹೇಳಬೇಕೆಂದರೆ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವಂತಹ ಈ ಫೋಟೋಗಳು ಎಡಿಟ್ ಮಾಡಿರುವಂತಹ ಫೋಟೋಗಳಾಗಿದ್ದು ಈ ಸುದ್ದಿ ಕೂಡ ನಿಜಕ್ಕೆ ದೂರವಾಗಿರುವಂತಹ ಸುದ್ದಿ ಎಂದು ಹೇಳಬಹುದು. ಹೀಗಾಗಿ ಸಾನಿಯಾ ಮಿರ್ಜಾ ಹಾಗೂ ಮೊಹಮ್ಮದ್ ಶಮಿ ಇಬ್ರು ಕೂಡ ಮದುವೆಯಾಗಿರುವಂತಹ ವಿಚಾರ ಶುದ್ಧ ಸುಳ್ಳು. ಫೋಟೋ ನೋಡಿರುವಂತಹ ಕೆಲವೊಂದು ನೆಟ್ಟಿಗರು ಇವರಿಬ್ರು ಮದುವೆ ಆಗಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಎನ್ನುವುದಾಗಿ ಕೂಡ ಕಾಮೆಂಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *