ಜಿಮ್ ನಲ್ಲಿ ವರ್ಕ್ ಮಾಡಿ ಸಿಕ್ಸ್ ಪ್ಯಾಕ್ ಬೆಳೆಸಿಕೊಂಡಿರುವ ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ, ವರ್ಕ್ ಔಟ್ ಫೋಟೋಗಳು ವೈರಲ್!!

ಸೆಲೆಬ್ರಿಟಿಗಳು ಎಂದ ಮೇಲೆ ಫಿಟ್ ನೆಸ್ ಗೆ ಹೆಚ್ಚು ಮಹತ್ವ ನೀಡುತ್ತಾರೆ. ಸಿನಿಮಾ ಶೂಟಿಂಗ್ ನಡುವೆಯೂ ಜಿಮ್, ವರ್ಕ್ ಔಟ್ ಎಂದು ಬ್ಯುಸಿಯಾಗುತ್ತಿರುತ್ತಾರೆ. ಈ ವಿಚಾರದಲ್ಲಿ ನಟಿ ಸಂಗೀತಾ ಶೃಂಗೇರಿ (Sangeetha Shrungeri) ಹೊರತಾಗಿಲ್ಲ. ಹೌದು, ಸಂಗೀತಾ ರವರು ಸಿಕ್ಕಾಪಟ್ಟೆ ಫಿಟ್ ಆಗಿದ್ದಾರೆ. ಆಗಾಗ ವರ್ಕ್ ಔಟ್ (Work Out) ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುವ ಸಂಗೀತಾ ಶೃಂಗೇರಿಯವರ ವರ್ಕ್ ಔಟ್ ಫೋಟೋಗಳು ಎಲ್ಲರ ಗಮನ ಸೆಳೆಯುವುದಿದೆ.

ಆದರೆ ಇದೀಗ, ಸಂಗೀತಾ ಸದ್ಯ ಒಂದಷ್ಟು ಫೋಟೋ ಶೇರ್ ಮಾಡಿದ್ದಾರೆ. ವರ್ಕೌಟ್ ಮಾಡುವಾಗಿನ ಬ್ಯಾಕ್ ಪೋಸ್‌ ಫೋಟೋ ಸೇರಿದಂತೆ ಇನ್ನಿತ್ತರ ಫೋಟೋಗಳು ಎಲ್ಲರ ಗಮನ ಸೆಳೆಯುತ್ತಿದೆ. ತಮ್ಮ ಬೆನ್ನ ಹಿಂದೆ ಮಾತನಾಡುವವರಿಗಾಗಿ ಸ್ವತಃ ಸಂಗೀತಾ ಶೃಂಗೇರಿ ಒಂದಷ್ಟು ಫೊಟೋಗಳನ್ನು ಶೇರ್ ಮಾಡಿದ್ದಂತಿದೆ. ಸಂಗೀತಾ ಶೃಂಗೇರಿ ತಮ್ಮ ಈ ವರ್ಕೌಟ್ ಫೋಟೋಗಳಲ್ಲಿಯೇ ಕೇವಲ ಮೂರು ಫೋಟೋಗಳನ್ನ ಹಂಚಿಕೊಳ್ಳುತ್ತಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ತಿಂಗಳಿನಿಂದ ವರ್ಕ್ ಔಟ್ ಅಲ್ಲಿ ಬ್ಯುಸಿಯಾಗಿದ್ದು, ಸಿಕ್ಸ್‌ಪ್ಯಾಕ್ ಮಾಡಿಕೊಂಡು ಎಲ್ಲರಿಗೂ ಶಾಕ್ ನೀಡಿದ್ದಾರೆ. ಸಂಗೀತಾ ಶೃಂಗೇರಿ ಸದ್ಯದ ಫೋಟೋಗಳು ವೈರಲ್ ಆಗುತ್ತಿವೆ. ನಟಿ ಸಂಗೀತ ಶೃಂಗೇರಿ ವರ್ಕ್ ಔಟ್ ಜೊತೆಗೆ ಸಿನಿ ಕೆರಿಯರ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಎನ್ನಬಹುದು. 777 ಚಾರ್ಲಿ (777 Charli) ಸಿನಿಮಾದಲ್ಲಿ ಮಿಂಚಿದ ಸಂಗೀತಾ ಶೃಂಗೇರಿ (Sangeetha Shrungeri) ಇದೀಗ ಬೆಳ್ಳಿತೆರೆಯಲ್ಲಿ ಬಾರಿ ಡಿಮ್ಯಾಂಡ್ ಹೊಂದಿದ್ದಾರೆ.

ಈ ಹಿಂದೆಯಷ್ಟೇ ನಟಿ ಸಂಗೀತ ಶೃಂಗೇರಿಯವರು ಗೌನ್ ತೊಟ್ಟು ಹಾಟ್ ಆಗಿ ಮುದ್ದು ಮುದ್ದಾಗಿ ಮಾಡಿದ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ನಟಿಯ ಈ ವಿಡಿಯೋ ನೋಡುತ್ತಿದ್ದಂತೆ ಫ್ಯಾನ್ಸ್ ಮೆಚ್ಚಿಕೊಂಡಿದ್ದರು. ನಟಿ ಸಂಗೀತಾ ಶೃಂಗೇರಿ ಕಿರುತೆರೆಯಿಂದ ಬೆಳ್ಳಿತೆರೆಗೆ ಲಗ್ಗೆ ಇಟ್ಟವರು. ಹರ ಹರ ಮಹಾದೇವ (Harahara Mahadeva) ಸೀರಿಯಲ್‌ನಲ್ಲಿ ಸತಿ-ಪಾರ್ವತಿ ಪಾತ್ರದಲ್ಲಿ ಅಭಿನಯಿಸಿದ್ದರು.

ಆ ಬಳಿಕ ನಟಿ ಸಂಗೀತಾ ಶೃಂಗೇರಿಯವರಿಗೆ A+ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ ನಟಿಗೆ 777 ಚಾರ್ಲಿ ಹೆಸರು ತಂದುಕೊಟ್ಟಿತು. ತದನಂತರದಲ್ಲಿ ಲಕ್ಕಿಮ್ಯಾನ್ (Lucky Man) ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ.ಸಂಗೀತಾ ಶೃಂಗೇರಿಯವರು ಏಳು ಸಿನಿಮಾದಲ್ಲಿ ಅಭಿನಯಿಸಿದ್ದುದ್ದು ಪ್ರೇಕ್ಷಕರ ಪ್ರೀತಿ ಸಂಪಾದಿಸಿಕೊಂಡಿದ್ದಾರೆ. ಸಂಗೀತಾ ಶೃಂಗೇರಿಯವರು ಶಿವಾಜಿ ಸುರತ್ಕಲ್-2 ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಒಂದೇ ಒಂದು ಹಾಡಿನಲ್ಲಿಯೇ ಸಂಗೀತಾ ಬಂದು ಹೋಗುತ್ತಾರೆ. ಸದ್ಯಕ್ಕೆ ನಟಿ ವರ್ಕ್ ಔಟ್ ಸಿನಿಮಾ ಎಂದು ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *