ಅಯೋಧ್ಯೆ ರಾಮಮಂದಿರದ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗಿಯಾದ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು, ಇಲ್ಲಿದೆ ನೋಡಿ ಮಾಹಿತಿ

ಬಹುಕಾಲದ ಹಿಂದೂಗಳ ಕನಸು ನನಸಾಗಿವೆ. ಐದು ಶತಮಾನಗಳ ಹೋರಾಟ ಮತ್ತು ದಶಕಗಳ ಕಾಯುವಿಕೆ ಅಂತ್ಯವಾಗಿದ್ದು, ಕೋಟ್ಯಂತರ ಹಿಂದೂಗಳ ಮುಖದಲ್ಲಿ ನಗು ಮೂಡಿದೆ. ಜನವರಿ 22 ರಂದು ಅಯೋಧ್ಯೆ ರಾಮಮಂದಿರ (Ayodhye Ramamandira) ಉದ್ಘಾಟನೆಯಾಗಿ, ರಾಮಲಲ್ಲಾ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿದೆ.

ಈ ಸಂಭ್ರಮದ ದಿನವನ್ನು ತಮ್ಮ ಮನೆಯಲ್ಲಿ ವಿಭಿನ್ನವಾಗಿ ಆಚರಿಸುವ ಮೂಲಕ ಅವಿಸ್ಮರಣೀಯ ದಿನವನ್ನಾಗಿ ಮಾಡಿದ್ದಾರೆ. ಅದಲ್ಲದೇ, ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮನ ಭವ್ಯ ಮಂದಿರವನ್ನು ಕಣ್ತುಂಬಿಸಿಕೊಳ್ಳಲು ಬಾಲಿವುಡ್, ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಅನೇಕರು ತೆರಳಿದ್ದಾರೆ. ಆದರೆ ಸ್ಯಾಂಡಲ್‌ವುಡ್‌ನಿಂದ (Sandalwood) ಇಬ್ಬರು ನಟರು ಅಯೋಧ್ಯೆಗೆ ಹೋಗಿದ್ದಾರೆ.

ಅವರಲ್ಲಿ ಕಾಂತಾರ ಡಿವೈನ್ ಸ್ಟಾರ್ ರಿಷಬ್ ಶೆಟ್ರು (Rishab Shetty) ಹಾಗೂ ಜಾಗ್ವಾರ್ ನಿಖಿಲ್ ಕುಮಾರ್ ಸ್ವಾಮಿ (Nikhil Kumarswamy) ಅಯೋಧ್ಯೆಯ ಸಂಭ್ರಮವನ್ನು ಕಣ್ತುಂಬಿಸಿಕೊಂಡಿದ್ದಾರೆ. ನಿಖಿಲ್ ಕುಮಾರಸ್ವಾಮಿಯವರು ತಮ್ಮ ತಾತ ಹೆಚ್ ಡಿ ದೇವೆಗೌಡ ದಂಪತಿಗಳ ಜೊತೆಗೆ ತೆರಳಿದ್ದರೆ, ರಿಷಬ್ ಶೆಟ್ಟಿ ತಮ್ಮ ಮಡದಿಯ ಜೊತೆಗೆ ಅಯೋಧ್ಯೆಗೆ ತೆರಳಿದ್ದು, ಆ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆ (Instagram Account) ಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ನಟರಾದ ರಿಷಬ್ ಶೆಟ್ಟಿ ಹಾಗೂ ನಿಖಿಲ್ ಕುಮಾರಸ್ವಾಮಿ ಪರಸ್ಪರ ಭೇಟಿ ಆಗಿದ್ದು, ಆ ವೇಳೆಯಲ್ಲಿ ಫೋಟೋ ಕೂಡ ತೆಗೆಸಿಕೊಂಡಿದ್ದಾರೆ. ಅದಲ್ಲದೇ, ಇದೇ ವೇಳೆ ಬಾಲಿವುಡ್​ ಹಿರಿಯ ನಟ ಅನುಪಮ್​ ಖೇರ್​ (Anupama Kher) ಅವರನ್ನು ಭೇಟಿಯಾದ ರಿಷಬ್​ ಶೆಟ್ಟಿ ದಂಪತಿಗಳು ಅವರ ಜೊತೆಗೆ ಕೂಡ ಫೋಟೋ ಕ್ಲಿಕಿಸಿಕೊಂಡಿದ್ದಾರೆ.

ಅಯೋಧ್ಯೆದಲ್ಲಿ ಬಾಲ ರಾಮನ ದರ್ಶನ ಪಡೆದ ಖುಷಿಯಲ್ಲಿ ರಿಷಬ್​ ಶೆಟ್ಟಿ ಫೋಟೋ ಹಂಚಿಕೊಂಡಿದ್ದಾರೆ. ಫೋಟೋದ ಜೊತೆಗೆ, ‘ಶ್ರೀ ರಾಮಚಂದ್ರನ ಜನ್ಮಸ್ಥಳದಲ್ಲಿ, ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮದಲ್ಲಿ’ ಎಂದು ಬರೆದುಕೊಂಡಿದ್ದಾರೆ.

ಅದಲ್ಲದೇ, ‘500 ವರ್ಷಗಳ ಕಾಯುವಿಕೆಯ ನಂತರ, ಇತಿಹಾಸ ಬರೆಯಲಾಗಿದೆ. ನಮ್ಮೆಲ್ಲರ ಹೃದಯಗಳು ಕೇವಲ ‘ಜೈ ಶ್ರೀರಾಮ್’ ಎಂದು ಪ್ರತಿಧ್ವನಿಸಿತು ‘ ಎಂದು ಬರೆದುಕೊಂಡಿದ್ದಾರೆ. ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಅಯೋಧ್ಯೆ ರಾಮಮಂದಿರದ ಉದ್ಘಾಟನೆಯ ಸಮಾರಂಭದಲ್ಲಿ ತೆಗೆದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

Leave a Reply

Your email address will not be published. Required fields are marked *