ಜಿಮ್ ನಲ್ಲಿ ವರ್ಕ್ ಔಟ್ ಉಡುಗೆಯಲ್ಲಿ ಪೋಸ್ ನೀಡಿ ಕನ್ನಡ ಕಿರುತೆರೆ ನಟಿಯರಿಗಿಂತ ನಾನೇನು ಕಮ್ಮಿ ಇಲ್ಲ ಎಂದು ಸಾಬೀತು ಮಾಡಿದ ಸಂಗೀತಾ ಶೃಂಗೇರಿ

ಬಣ್ಣದ ಜಗತ್ತು, ಎಲ್ಲರನ್ನೂ ಒಂದು ಕ್ಷಣವಾದರು ಎಲ್ಲರನ್ನು ಕೂಡ ಸೆಳೆದು ಬಿಡುತ್ತದೆ. ಈ ಬಣ್ಣದ ಜಗತ್ತಿಗೆ ಒಮ್ಮೆ ಎಂಟ್ರಿ ಕೊಟ್ಟರೆ ಈ ನಟನಾ ಲೋಕದಿಂದ ದೂರ ಉಳಿಯುವುದು ಸ್ವಲ್ಪ ಕಷ್ಟವೇ ಎನ್ನಬಹುದು. ಈ ಲೋಕವು ಹೊರಗಿನಿಂದ ನೋಡುವಷ್ಟು ಸುಂದರವಾಗಿಲ್ಲ. ಇಲ್ಲಿಯೂ ಒಂದಷ್ಟು ಒಳ್ಳೆಯದು ಕೆಟ್ಟದು ಇದೆ. ಆದರೆ ಯಾವುದನ್ನೂ ಆಯ್ಕೆ ಮಾಡಿಕೊಳ್ಳುತ್ತೇವೆ ಅದರ ಮೇಲೆ ಎಲ್ಲವೂ ನಿಂತಿದೆ.

ಅದರಲ್ಲಿಯೂ ಬಣ್ಣ ಲೋಕದಲ್ಲಿ ಸಕ್ರಿಯರಾಗಿರುವ ನಟಿಯರು ಫಿಟ್ ನೆಸ್ ಗೆ ಹೆಚ್ಚು ಗಮನ ಕೊಡುತ್ತಾರೆ. ಹೀಗಾಗಿ ಸಿನಿಮಾರಂಗದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಕೂಡ ನಟ ನಟಿಯರು ಜಿಮ್ ವರ್ಕ್ ಔಟ್ ಎಂದು ಬ್ಯುಸಿಯಾಗಿರುತ್ತಾರೆ. ಈ ವಿಚಾರದಲ್ಲಿ 777 ಚಾರ್ಲಿ (777 Charli) ಸಿನಿಮಾ ಖ್ಯಾತಿಯ ಸಂಗೀತಾ ಶೃಂಗೇರಿ (Sangeetha Shrungeri) ಹೊರತಾಗಿಲ್ಲ.

ಇದೀಗ ಜಿಮ್ ನಲ್ಲಿ ವರ್ಕ್ ಔಟ್ ಮಾಡಿದ ಬಳಿಕ ಕ್ಯಾಮೆರಾಗೆ ವಿಭಿನ್ನವಾಗಿ ಪೋಸ್ ನೀಡಿದ್ದಾರೆ. ಕಿರುನಗೆ ಬೀರುತ್ತಾ ಕ್ಯಾಮೆರಾಗೆ ಪೋಸ್ ನೀಡಿರುವ ನಟಿಯೂ ಈ ಪೋಸ್ಟ್ ಅನ್ನು ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ರೂಪಾಂತರಗೊಂಡಿದೆಯೇ? ಇನ್ನು ಇಲ್ಲ! ಶೀಘ್ರದಲ್ಲೇ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ ಹದಿನೆಂಟು ಸಾವಿರಕ್ಕೂ ಅಧಿಕ ವ್ಯೂಸ್ ಕಂಡಿದ್ದು, ನೆಟ್ಟಿಗರು ಈ ಫೋಟೋವನ್ನು ಮೆಚ್ಚಿಕೊಂಡಿದ್ದಾರೆ.

777 ಚಾರ್ಲಿ ಸಿನಿಮಾದಲ್ಲಿ ಯಶಸ್ಸು ಕಂಡ ಬಳಿಕ ನಟಿ ಸಂಗೀತಾ ಶೃಂಗೇರಿಯವರಿಗೆ ಆಫರ್ ಗಳು ಬರುತ್ತಿವೆ. ಇನ್ನೊಂದೆಡೆ ವಿಭಿನ್ನ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿರುತ್ತಾರೆ. ಪ್ರಾರಂಭದಲ್ಲಿ ನಟಿ ಸಂಗೀತಾ ಶೃಂಗೇರಿಯವರು ಕಿರುತೆರೆ ಲೋಕದಿಂದ ತಮ್ಮ ನಟನಾ ಜರ್ನಿ ಶುರು ಮಾಡಿದರು. ಹರ ಹರ ಮಹಾದೇವ (Harahara Mahadeva) ಸೀರಿಯಲ್‌ನಲ್ಲಿ ಸತಿ-ಪಾರ್ವತಿ ಪಾತ್ರದಲ್ಲಿ ನಟಿಸಿದ್ದರು.

ಆದಾದ ಬಳಿಕ ನಟಿ ಸಂಗೀತಾ ಶೃಂಗೇರಿಯವರಿಗೆ ಬೆಳ್ಳಿತೆರೆಯಲ್ಲಿ ನಟಿಸುವ ಅವಕಾಶ ಬಂದಿತು. ಮೊದಲಿಗೆ A+ ಚಿತ್ರದಲ್ಲಿ ನಟಿಸಿದರು. ಆದರೆ 777 ಚಾರ್ಲಿ ನಟಿಸಿದ ಸಂಗೀತಾರವರಿಗೆ ನೇಮ್ ಫೇಮ್ ಎರಡು ಕೂಡ ಬಂದಿತು. ಬಳಿಕ ಡಾರ್ಲಿಂಗ್ ಕೃಷ್ಣ (Darling Krishana) ಮತ್ತು ಪುನೀತ್ ರಾಜ್‌ಕುಮಾರ್ (Punith Rajkumar) ಅಭಿನಯದ ಲಕ್ಕಿಮ್ಯಾನ್ (Lucky Man) ಚಿತ್ರದಲ್ಲಿ ನಟಿಸಿದರು. ಇವರೆಗೆ ಸಂಗೀತಾ ಶೃಂಗೇರಿ ಒಟ್ಟು ಏಳು ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯಕ್ಕೆ ನಟಿ ಸಂಗೀತಾ ಶೃಂಗೇರಿಯವರಿಗೆ ಒಂದರ ಮೇಲೆ ಒಂದು ಆಫರ್ ಗಳು ಬರುತ್ತಿದ್ದು ಸಿನಿ ಕೆರಿಯರ್ ನತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ.

Leave a Reply

Your email address will not be published. Required fields are marked *